Get Updates
Get notified of breaking news, exclusive insights, and must-see stories!

ಸಾಕಿನ್ನು ನೆಹರು, ಇಂದಿರಾ, ರಾಜೀವ್‌ರ ಭಜನೆ -ಭಾಜಪ ಆಗ್ರಹ

ಸಾಕಿನ್ನು ನೆಹರು, ಇಂದಿರಾ, ರಾಜೀವ್‌ರ ಭಜನೆ -ಭಾಜಪ ಆಗ್ರಹ
ಮಾಜಿ ಪ್ರಧಾನಿಗಳ ಹೆಸರು ಬಳಕೆ ನಿಷೇಧಿಸಬೇಕೆಂದು ಚುನಾವಣಾ ಆಯೋಗಕ್ಕೆ ಮನವಿ

ನವದೆಹಲಿ : ಕಾಂಗೈ ಪಕ್ಷದ ಪ್ರಚಾರಕ್ಕೆ ಹಿನ್ನಡೆ ಉಂಟು ಮಾಡಲು ಬಿಜೆಪಿ ಮತ್ತೊಂದು ವಾಗ್ಬಾಣದ ರಥ ಬಿಟ್ಟಿದೆ. ಕಾಂಗ್ರೆಸ್‌ ತನ್ನ ಪ್ರಚಾರ ಪರಿಕರಗಳಲ್ಲಿ ಜವಾಹಾರಲಾಲ ನೆಹರು, ಇಂದಿರಾ ಗಾಂಧಿ ಮತ್ತು ರಾಜೀವ ಗಾಂಧಿ ಹೆಸರು ಬಳಸಬಾರದು ಎಂದು ಬಿಜೆಪಿ ಆಗ್ರಹಿಸಿದೆ.

ಈ ಮೂವರು ಮಾಜಿ ಪ್ರಧಾನಿಗಳ ಹೆಸರಲ್ಲಿ ಸರಕಾರದ ಹಲವು ಯೋಜನೆಗಳು ಜಾರಿಗೆಯಲ್ಲಿ ಇರುವುದರಿಂದ ಅವರ ಹೆಸರಿನ ಬಳಕೆಯನ್ನು ನಿಷೇಧಿಸಬೇಕೆಂದು ಚುನಾವಣಾ ಆಯೋಗಕ್ಕೆ ಬಿಜೆಪಿ ಮನವಿ ಮಾಡಿದೆ.

ದೇಶದ ಹಲವೆಡೆ ಜಿಲ್ಲೆ ,ತಾಲೂಕು, ಹಳ್ಳಿಗಳಲ್ಲಿ ಆ ಮನೆತನದ ಹೆಸರನ್ನು ಖ್ಯಾತಿಪಡಿಸುವ ಈ ಮಾಜಿ ಪ್ರಧಾನಿಗಳ ಹೆಸರಿದ್ದ ಪ್ರಚಾರ ಭಿತ್ತಿಪತ್ರಗಳು, ಬ್ಯಾನರ್‌ ಮುಂತಾದುವುಗಳನ್ನು ಬಳಸಲಾಗಿದೆ. ಚುನಾವಣಾ ಆಯೋಗದ ನಿರ್ದೇಶನಗಳು ಇವುಗಳನ್ನು ಕೀಳಿಸಲು ಆದೇಶ ನೀಡಬಹುದೆ ಎಂದು ಕಾದು ನೋಡಬೇಕಾಗಿದೆ ಎಂದು ಬಿಜೆಪಿ ವಕ್ತಾರ ಮುಕ್ತಾರ್‌ ಅಬ್ಬಾಸ್‌ ನಕ್ವಿ ಹೇಳಿದರು.

ಬಿಜೆಪಿ ಅಧಿಕಾರವಿದ್ದ ರಾಜ್ಯ ಅಥವಾ ಕೇಂದ್ರದಲ್ಲಿ ಯಾವುದೇ ಸರಕಾರಿ ಯೋಜನೆಗೆ ಪಕ್ಷದ ವ್ಯಕ್ತಿಯ ಅಥಾವ ಮನೆತನದ ಹೆಸರಿಟ್ಟಿಲ್ಲ. ಕಾಂಗ್ರೆಸ್‌ ಪಕ್ಷ ಅಧಿಕಾರದಲ್ಲಿರುವಾಗ ಜಾರಿಗೆ ತಂದ ಯೋಜನೆಗಳಿಗೆ ಇಂದಿರಾ ಆವಾಜ್‌, ಜವಾಹರ್‌ ರೋಜಗಾರ್‌ ಎಂದೆಲ್ಲ ಹೆಸರಿಟ್ಟಿದೆ. ಅದು ಅವರ ಫ್ಯೂಡಲ್‌ ವ್ಯವಸ್ಥೆಯನ್ನು ತೋರಿಸುತ್ತದೆ ಎಂದು ನಕ್ವಿ ಹೇಳಿದರು.

ಈ ಹಿಂದೆಯೇ ಎನ್‌ಡಿಎ ಚುನಾವಣಾ ಆಯೋಗದ ನಿರ್ದೇಶನ ತತ್ವಗಳನ್ನು ಬದಲಾಯಿಸುವಂತೆ ಒತ್ತಾಯಿಸಿದೆ. ಈಗಿರುವ ನಿರ್ದೇಶನಗಳನ್ನು ಜಾರಿಗೆ ತರುವಾಗ ವ್ಯಕ್ತಿ ನಿಷ್ಠವಾಗಿ ಬೇಕಾದಂತೆ ಬಳಸಿಕೊಳ್ಳಬಹುದಾಗಿದೆ. ಇದು ಅಸಮಾನತೆಗೆ ಎಡೆಮಾಡಿಕೊಡುತ್ತದೆ. ಅದಕ್ಕಾಗಿ ನಾವು ಅದನ್ನು ಮರು ಪರಿಶೀಲಿಸುವಂತೆ ಆಯೋಗವನ್ನು ಕೇಳಿಕೊಂಡಿದ್ದೆವು ಎಂದು ಹೇಳಿದರು.

(ಪಿಟಿಐ)

ಮುಖಪುಟ / ವಾರ್ತೆಗಳು

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+