ರಾಜ್ಯ ಕಾಂಗೈಗೆ ಬಿಜೆಪಿ ಸಹಾಯ‘ಹಸ್ತ’ - ಸಂಯುಕ್ತ ದಳ ಆರೋಪ
ರಾಜ್ಯ ಕಾಂಗೈಗೆ ಬಿಜೆಪಿ ಸಹಾಯ‘ಹಸ್ತ’ - ಸಂಯುಕ್ತ ದಳ ಆರೋಪ
ಕಟ್ಟಾ ದಳೀಯ ಬಿ. ಸೋಮಶೇಖರ್ ಆತ್ಮಾವಲೋಕನ
ಬಿಜೆಪಿ ಜೊತೆಗಿನ ಹೊಂದಾಣಿಕೆ ಸಂಭವ ವಿರಳವಾಗುತ್ತಿದೆ. ಈ ಕುರಿತು ಅಂತಿಮ ನಿರ್ಣಯವಾಗದಿದ್ದರೆ ರಾಜ್ಯದ ಎಲ್ಲಾ 224 ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸಲಾಗುವುದು ಎಂದು ಜೆಡಿ-ಯು ರಾಜ್ಯಾಧ್ಯಕ್ಷ ಬಿ.ಸೋಮಶೇಖರ್ ಹೇಳಿದರು.
ರಾಜ್ಯದಲ್ಲಿ ನಮ್ಮ ಜೊತೆ ಹೊಂದಾಣಿಕೆ ಮಾಡಿಕೊಂಡರೆ ಮಾತ್ರ ಅವರು ಈ ಚುನಾವಣೆಯಲ್ಲಿ ಕಾಂಗೈಯನ್ನು ಸೋಲಿಸಬಲ್ಲರು. ಅದು ಅವರ ಕೆಲವು ನಾಯಕರ ಪಲಾಯನ ವಾದದ ನಿಲುವಿನಿಂದಾಗಿ ಆಗುತ್ತಿಲ್ಲ. ಸದ್ಯದಲ್ಲೆ ಹೊಂದಾಣಿಕೆ ಸೂತ್ರ ನಡೆಯಬಹುದೆಂಬ ಆಶಯವಿದೆ. ಬಿಜೆಪಿ-ಜೆಡಿಯು ಸಂಬಂಧ ಹಳಸಲಾರಂಭಿಸಿದ ಕಾರಣ ನಾವು ನಮ್ಮ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದೆವು ಎಂದು ಅವರು ಹೇಳಿದರು.
1999ರ ಚುನಾವಣೆಯಲ್ಲಿ ಅಂತಿಮ ಘಟದಲ್ಲಿ ನಡೆದ ಹರಾಬಿರಿ ಹೊಂದಾಣಿಕೆಯಿಂದ ಮೈತ್ರಿ ಕೂಟವು ಸೋತಿತು. ಆದರೆ ಬಿಜೆಪಿ ಮಾತ್ರ ಅದನ್ನು ಮೈತ್ರಿಯಿಂದಾಗಿ ಸೋತಿದೆ ಎನ್ನುತ್ತಿದೆ ಎಂದು ಸೋಮಶೇಖರ್ ಹೇಳಿದರು.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications