ಪ್ರಕಾಶಮಾನ ಭಾರತದ ಕತ್ತಲೆಪ್ರಸಂಗ: ಬಿಹಾರದಿ‘ಸತಿಸಹಗಮನ’
ಪ್ರಕಾಶಮಾನ ಭಾರತದ ಕತ್ತಲೆಪ್ರಸಂಗ: ಬಿಹಾರದಿ‘ಸತಿಸಹಗಮನ’
ಬಿಹಾರದ 65 ವರ್ಷದ ರುಕ್ಮಣಿದೇವಿ ಸಹಗಮನ ಮಾಡಿದ ಸತಿ
ತನ್ನ ಪತಿಯ ಚಿತೆಗೆ ಏರುವ ಮೂಲಕ ಹೆಂಗಸೊಬ್ಬಳು ‘ಸತಿ ಸಹಗಮನ’ ಮಾಡಿದ ಘಟನೆ ಬಿಹಾರದ ಸಮಸ್ತಿಪುರ ಜಿಲ್ಲೆಯ ಸಖಾರ್ಧಿಯ ಹಳ್ಳಿಯಲ್ಲಿ ನಡೆದಿದೆ. 65 ವರ್ಷದ ರುಕ್ಮಣಿದೇವಿ ಸಹಗಮನ ಮಾಡಿದ ಸತಿ.
ರುಕ್ಮಣಿ ದೇವಿ ತನ್ನ 70 ವರ್ಷದ ಪತಿ ರಘು ಯಾದವ್‌ನ ಚಿತೆಗೆ ಸ್ವತಃ ಹಾರಿ ಪ್ರಾಣಬಿಟ್ಟಿದ್ದಾರೆ ಎಂದು ಹಸನ್‌ಪುರ ಆರಕ್ಷ ಠಾಣೆಯ ಪೊಲೀಸ್ ಅಧಿಕಾರಿ ಶೇರ್ ಸಿಂಗ್ ಯಾದವ್ ಘಟನಾ ಸ್ಥಳದಿಂದ 110ಕಿ.ಮೀ. ದೂರದಲ್ಲಿರುವ ಠಾಣೆಗೆ ಹಿಂದಿರುಗುವಾಗ ನೀಡಿದ ಹೇಳಿಕೆ. ಯಾರ ವಿರುದ್ಧವೂ ಠಾಣೆಯಲ್ಲಿ ದೂರು ದಾಖಲಾಗಿಲ್ಲ.
ಚಿತೆಗೆ ಬೆಂಕಿ ಕೊಟ್ಟ ಬಳಿಕ ಮನೆಯವರೆಲ್ಲ ಸ್ನಾನಕ್ಕೆ ಹೋಗಿದ್ದರು ಆ ಸಂದರ್ಭದಲ್ಲಿ ರುಕ್ಮಣಿದೇವಿ ಚಿತೆಗೆ ಹಾರಿದ್ದಾಳೆ. ಅವರು ಹಿಂತಿರುಗಿ ಬಂದು ನೋಡುವಾಗ ಆಕೆ ಬೆಂಕಿಯಲ್ಲಿ ಲೀನವಾಗಿಬಿಟ್ಟಿದ್ದಳು. ಆಕೆಯ ಬಳೆಯ ಗುರುತಿನಿಂದ ಪತ್ತೆ ಹಚ್ಚಲಾಯಿತು ಎಂಬುದು ಪೊಲೀಸ್ ಕೇಂದ್ರ ಕಛೇರಿಗೆ ‘ಸತಿ’ ಕುರಿತು ತನಿಖೆ ನಡೆಸಿ ವರದಿ ಕಳುಹಿಸಿದ ಅಧಿಕಾರಿಗಳ ಹೇಳಿಕೆ.
ಆಕೆ ಸತಿ ಸಹಗಮನ ಮಾಡಿಕೊಂಡಿಲ್ಲ. ಗಂಡನ ನಿಧನದ ಅರಿವಾದಾಗ ಹೃದಯ ಸ್ತಂಭನವಾಗಿ ಸತ್ತಳು ಎಂದು ತನಿಖೆಗೆ ಮುನ್ನ ಎಸ್ಪಿ ಮೇಘನಾಥ್ ರಾಮ್ ಹೇಳಿದ್ದರು.
ತನ್ನ ಪತಿಯ ನಿಧನದ ವಾರ್ತೆಯನ್ನು ಕೇಳಿ ತಡೆದುಕೊಳ್ಳಲಾರದೆ ಸುಡುಗಾಡಿಗೆ ಹೋಗಿ ಇನ್ನೂ ಉರಿಯುತ್ತಿದ್ದ ಚಿತೆಗೆ ಹಾರಿದ್ದಾಳೆ. ನಾವು ನೋಡುವಾಗ ಆಕೆ ಸುಟ್ಟು ಕರಗಿ ಹೋಗಿದ್ದಾಳೆ ಎಂದು ಅವಳ ಮಗ ಜಗದೀಶ್ ಯಾದವ್ ಮತ್ತು ಊರವರು ಹೇಳಿದ್ದಾರೆ.
ಸತಿ ರುಕ್ಮಿಣಿಯ ಪತಿ ರಘು ಯಾದವ್ ಹಲವು ದಿನದಿಂದ ಅನಾರೋಗ್ಯ ಪೀಡಿತರಾಗಿ ನಿಧನ ಹೊಂದಿದ್ದರು.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications