ವೀರಪ್ಪಮೊಯಿಲಿ ‘ರಾಮಾಯಣ’ದ ನಾಲ್ಕನೇ ಸಂಪುಟ ಬಿಡುಗಡೆ
ವೀರಪ್ಪಮೊಯಿಲಿ ‘ರಾಮಾಯಣ’ದ ನಾಲ್ಕನೇ ಸಂಪುಟ ಬಿಡುಗಡೆ
ಇಡೀ ಕೃತಿ ರಾಮಾಯಣದ ಕುರಿತು ವೀರಪ್ಪ ಮೊಯಿಲಿ ನಡೆಸಿದ ಸಂಶೋಧನೆಯ ಪ್ರತಿಫಲ
ಮೊಯಿಲಿಯವರ ರಾಮಾಯಣ ಮಹಾನ್ವೇಷಣಂ ಕೃತಿ ಅನೇಕ ಗೂಢಾರ್ಥಗಳನ್ನು ಒಳಗೊಂಡಿದೆ. ಅಯೋಧ್ಯೆ ಹಾಗೂ ಲಂಕೆಯ ಜನಜೀವನ, ಸಾಂಸ್ಕೃತಿಕ ಸಂಘರ್ಷಗಳನ್ನು ಮೊಯಿಲಿ ಅನನ್ಯವಾಗಿ ಚಿತ್ರಿಸಿದ್ದಾರೆ ಎಂದು ಪುಸ್ತಕ ಬಿಡುಗಡೆ ಮಾಡಿದ ಖ್ಯಾತ ವಿದ್ವಾಂಸ ಎಸ್.ಕೆ.ರಾಮಚಂದ್ರರಾವ್ ಹೇಳಿದರು.
ಮಂಡೋದರಿ ಪಾತ್ರವನ್ನೂ ಕವಿ ಅನನ್ಯವಾಗಿ ಚಿತ್ರಿಸಿದ್ದಾರೆ. ಇಡೀ ಕೃತಿ ರಾಮಾಯಣದ ಕುರಿತು ವೀರಪ್ಪ ಮೊಯಿಲಿ ನಡೆಸಿದ ಸಂಶೋಧನೆಯ ಪ್ರತಿಫಲವಾಗಿದೆ ಎಂದು ರಾಮಚಂದ್ರರಾವ್ ಬಣ್ಣಿಸಿದರು.
ರಾಜ್ಯಪಾಲ ಟಿ.ಎನ್.ಚತುರ್ವೇದಿ, ಮೈಸೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಕೆ.ಅನಂತರಾಮು ಕಾರ್ಯಕ್ರಮದಲ್ಲಿ ಹಾಜರಿದ್ದರು. ನಿತ್ಯೋತ್ಸವದ ಕವಿ ಕೆ.ಎಸ್.ನಿಸಾರ್ ಅಹಮದ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ಸಂಗೀತ ಕುಲಕರ್ಣಿ ಅವರು ರಾಮಾಯಣ ಮಹಾನ್ವೇಷಣಂ ಕೃತಿಯ ಆಯ್ದ ಭಾಗಗಳನ್ನು ವಾಚಿಸಿದರು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications