ನನ್ನನ್ನು ನಂಬಿ, ನಾನು ನಿರುದ್ಯೋಗ ಸಮಸ್ಯೆಯ ಬಗೆಹರಿಸುವೆ -ಕೃಷ್ಣ
ನನ್ನನ್ನು ನಂಬಿ, ನಾನು ನಿರುದ್ಯೋಗ ಸಮಸ್ಯೆಯ ಬಗೆಹರಿಸುವೆ -ಕೃಷ್ಣ
ನಿರುದ್ಯೋಗ ಸಮಸ್ಯೆಬಗೆಹರಿಸಲು ಕಾಂಗ್ರೆಸ್‌ನಿಂದ ನೀಲನಕ್ಷೆ
ರಾಜ್ಯದಲ್ಲಿನ ನಿರುದ್ಯೋಗ ಸಮಸ್ಯೆಯನ್ನು ಬಗೆಹರಿಸುವ ನೀಲನಕ್ಷೆಯನ್ನು ಸರ್ಕಾರ ಸಿದ್ಧಪಡಿಸಲಿದೆ. ಈ ಕುರಿತು 2004-05ರ ಬಜೆಟ್‌ನಲ್ಲೇ ಕೆಲವು ಸೂಚ್ಯ ಕ್ರಮಗಳನ್ನು ಕಾಣಬಹುದು. ಇದರಲ್ಲಿ ನೂತನ ಕೃಷಿ ನೀತಿಯೂ ಸೇರಿದೆ, ಜನರ ಜೀವನ ಮಟ್ಟ ಸುಧಾರಣೆಯೂ ಸೇರಿದೆ ಎಂದು ಕೃಷ್ಣ ಹೇಳಿದರು. ವಿಜಯದುಂದುಭಿ ಯಾತ್ರೆಯ ಅಂಗವಾಗಿ ಪ್ರವಾಸದಲ್ಲಿರುವ ಕೃಷ್ಣ ಮಾರೂರು ಹ್ಯಾಂಡ್‌ಪೋಸ್ಟ್ ಬಳಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.
ನಿರುದ್ಯೋಗವನ್ನು ಬಗೆಹರಿಸಲು ರಾಜ್ಯ ಸರ್ಕಾರ ಸಿದ್ಧಪಡಿಸುತ್ತಿರುವ ನೀಲನಕ್ಷೆ ಹೆಚ್ಚೂಕಡಿಮೆ ಪೂರ್ಣವಾಗಿದೆ. ಜನತೆ ಸರ್ಕಾರವನ್ನು ಮತ್ತೊಂದು ಅವಧಿಗೆ ಆಶೀರ್ವದಿಸಿದಲ್ಲಿ ಈ ನೀಲನಕ್ಷೆಯನ್ನು ಅನುಷ್ಠಾನಕ್ಕೆ ತರಲಾಗುವುದು ಎಂದು ಕೃಷ್ಣ ಹೇಳಿದರು. ಮುಂಬರುವ ಚುನಾವಣೆಗಳಲ್ಲಿ ಗೆಲ್ಲುವ ಕುರಿತು ಕೃಷ್ಣ ವಿಶ್ವಾಸ ವ್ಯಕ್ತಪಡಿಸಿದರು.
ಚುನಾವಣೆ ನಂತರ ಅಧಿಕಾರ ಗ್ರಹಣಕ್ಕಾಗಿ ಹೊಂದಾಣಿಕೆ ಮಾಡಿಕೊಳ್ಳುವ ಪರಿಸ್ಥಿತಿ ರಾಜ್ಯದಲ್ಲಿ ಉದ್ಭವಿಸುವುದಿಲ್ಲ . ಕಾಂಗ್ರೆಸ್ ಬಹುಮತ ಪಡೆಯುವುದು ಖಚಿತ ಎಂದು ಕೃಷ್ಣ ಹೇಳಿದರು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications