ಅಮೆರಿಕನ್ನಡಿಗ ‘ಸ್ಪಂದನ’ ಶ್ರೀನಿವಾಸ್‌ಗೆ ವರ್ಷದ ಲೇಖಕ ಪ್ರಶಸ್ತಿ
ಅಮೆರಿಕನ್ನಡಿಗ ‘ಸ್ಪಂದನ’ ಶ್ರೀನಿವಾಸ್‌ಗೆ ವರ್ಷದ ಲೇಖಕ ಪ್ರಶಸ್ತಿ
ಖ್ಯಾತ ಕವಿ ಎಚ್ಚೆಸ್ವಿಗೆ ಡಿವಿಜಿ ಪ್ರಶಸ್ತಿ
ಬೆಂಗಳೂರು : ಅನಿವಾಸಿ ಕನ್ನಡ ಲೇಖಕ, ಬಾಹ್ಯಾಕಾಶ ವಿಜ್ಞಾನಿ, ಪ್ರಶಸ್ತಿ ವಿಜೇತ ಚಿತ್ರಗಳ ನಿರ್ದೇಶಕರಾದ ಪಿ. ಎನ್. ಶ್ರೀನಿವಾಸ್ ಗೊರೂರು ಪ್ರತಿಷ್ಠಾನದ ವರ್ಷದ ಲೇಖಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಶ್ರೀನಿವಾಸ್ ಅವರು ಸಮಗ್ರ ಸಾಧನೆಯನ್ನು ಪರಿಗಣಿಸಿ 2003ನೇ ಇಸವಿಯ ಗೊರೂರು ಪ್ರತಿಷ್ಠಾನದ ವರ್ಷದ ಲೇಖಕ ಪ್ರಶಸ್ತಿ ನೀಡಲಾಗುತ್ತಿದೆ. ಅಮೆರಿಕದಲ್ಲಿ ನೆಲೆಸಿರುವ ಶ್ರೀನಿವಾಸ್, ವಿಜ್ಞಾನದ ಜತೆಗೆ ಕನ್ನಡ ಸಾಹಿತ್ಯ ಕ್ಷೇತ್ರಕ್ಕೂ ಗಣನೀಯ ಕೊಡುಗೆ ನೀಡಿದ್ದಾರೆ ಎಂದು ಗೊರೂರು ಪ್ರತಿಷ್ಠಾನದ ಪ್ರಕಟಣೆ ಬಣ್ಣಿಸಿದೆ.
ವರ್ಷದ ಲೇಖಕ ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ಏಪ್ರಿಲ್ 14 ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷೆ ಎಸ್. ಲಲಿತಾ ರಂಗಸ್ವಾಮಿ ತಿಳಿಸಿದ್ದಾರೆ.
ವೆಂಕಟೇಶ್‌ಮೂರ್ತಿಗೆ ಡಿವಿಜಿ ಪ್ರಶಸ್ತಿ : ಡಿವಿಜಿ ವೇದಿಕೆ ದಿವಂಗತ ಡಿ.ವಿ. ಗುಂಡಪ್ಪನವರ ಸ್ಮರಣೆಯಾಗಿ ನೀಡುವ ಡಿ.ವಿ.ಜಿ. ಪ್ರಶಸ್ತಿಗೆ ಹಿರಿಯ ಕವಿ ಡಾ.ಎಚ್.ಎಸ್. ವೆಂಕಟೇಶ ಮೂರ್ತಿ ಆಯ್ಕೆಯಾಗಿದ್ದಾರೆ.
ಐದು ಬಾರಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ದೇವರಾಜ್ ಬಹದ್ದೂರ್ ಪ್ರಶಸ್ತಿ ಮತ್ತು ರಾಜ್ಯೋತ್ಸವ ಪ್ರಶಸ್ತಿ ಗಳನ್ನು ವೆಂಕಟೇಶಮೂರ್ತಿ ಪಡೆದಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications