ಅಪರಾಧಿ ನಾನಲ್ಲ ! ಮೂಡಬಿದಿರೆ ಅಮರನಾಥ ಶೆಟ್ಟಿ ಸ್ಪಷ್ಟೀಕರಣ
ಅಪರಾಧಿ ನಾನಲ್ಲ ! ಮೂಡಬಿದಿರೆ ಅಮರನಾಥ ಶೆಟ್ಟಿ ಸ್ಪಷ್ಟೀಕರಣ
ಮುಂಬರುವ ಚುನಾವಣೆಯ ಶೆಟ್ಟಿ ಸ್ಪರ್ಧೆ ಖಚಿತ
ಅನರ್ಹಗೊಂಡವರ ಪಟ್ಟಿಯಲ್ಲಿ ಅವರ ಹೆಸರು ಸೇರಿಲ್ಲ. ಆದರೆ ಅದೇ ಹೆಸರಿನ ವ್ಯಕ್ತಿಯಾಬ್ಬ ಅವರ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ. ಆತ ವೆಚ್ಚದ ಯಾವುದೇ ವಿವರ ನೀಡದ ಕಾರಣ ಆತನನ್ನು ಅನರ್ಹಗೊಳಿಸಲಾಗಿತ್ತು.
ಅಮರನಾಥ ಶೆಟ್ಟಿ ಕಳೆದ ಚುನಾವಣೆಯಲ್ಲಿ ಜೆಡಿ-ಯು ನಿಂದ ಸ್ಪರ್ಧಿಸಿ ಸೋತಿದ್ದರು. ಅವರು ಇತ್ತೀಚೆಗೆ ಜೆಡಿ-ಎಸ್‌ಗೆ ಸೇರ್ಪಡೆಗೊಂಡಿದ್ದಾರೆ. ಹೆಸರಿನ ಗೊಂದಲದ ಕಾರಣ ಈ ಗೊಂದಲವಾಗಿತ್ತು.
ವೆಚ್ಚದ ವಿವರವನ್ನು ತಾವು ಸರಿಯಾದ ಸಮಯಕ್ಕೆ ಸಲ್ಲಿಸಿದ್ದು , ಅನರ್ಹಗೊಂಡವರ ಪಟ್ಟಿಯಲ್ಲಿ ತಮ್ಮ ಹೆಸರು ಸೇರ್ಪಡೆಯಾಗಿಲ್ಲ ಎಂದು ಅಮರನಾಥಗೌಡ ಸುದ್ದಿಗಾರರಿಗೆ ತಿಳಿಸಿದ್ದಾರೆ. ಮುಂಬರುವ ಚುನಾವಣೆಗಳಲ್ಲಿ ತಾವು ಸ್ಪರ್ಧಿಸುವುದಾಗಿಯೂ ಅವರು ಹೇಳಿದ್ದಾರೆ.
(ಇನ್ಫೋ ವಾರ್ತೆ)
ವಾರ್ತಾ ಸಂಚಯ
ಕರ್ನಾಟಕದಲ್ಲಿ ಅನರ್ಹಗೊಂಡ ಅಭ್ಯರ್ಥಿಗಳು
ಮುಖಪುಟ / ವಾರ್ತೆಗಳು












Click it and Unblock the Notifications