ಮುಂಬಯಿ: ಕಾಯ್ವ ಪೊಲೀಸ್ ಕುರಿತು ಭ್ರಮೆ ಕರಗಿದ ಕಥೆಯಿದು
ಮುಂಬಯಿ: ಕಾಯ್ವ ಪೊಲೀಸ್ ಕುರಿತು ಭ್ರಮೆ ಕರಗಿದ ಕಥೆಯಿದು
ಸೂಪರ್ ಸ್ಟಾರ್‌ಗಳ ಹುಳುಕುಗಳು ಒಂದೊಂದಾಗಿ ಹೊರಬೀಳುತ್ತಿವೆ...
ಮಾಜಿ ಜಂಟಿ ಪೊಲೀಸ್ ಕಮೀಷನರ್ ಶ್ರೀಧರ್ ವಾಗಲ್ ಮತ್ತು ಪೊಲೀಸ್ ಕಮೀಷನರ್ ಪ್ರದೀಪ್ ಸಾವಂತ್ ಇಬ್ಬರನ್ನೂ ಪ್ರಮುಖ ಛಾಪಾ ಪಾಪಿ ತೆಲಗಿಯ ಪ್ರಕರಣದಲ್ಲಿ ಭಾಗಿಗಳಾಗಿದ್ದಾರೆಂದು ಬಂಧಿಸಲಾಗಿದೆ. ಎನ್‌ಕೌಂಟರ್ ಸ್ಪೆಶಲಿಸ್ಟ್ ಎಂದು ಕರೆಸಿಕೊಳ್ಳುತ್ತಿದ್ದ ಸಹಾಯಕ ಪೊಲೀಸ್ ಇನ್‌ಸ್ಪೆಕ್ಟರ್ ಸಚಿನ್ ವಾಜಿಯನ್ನು ಮುಂಬಯಿ ಬಾಂಬ್ ಸ್ಫೋಟ ಪ್ರಕರಣದ ಆರೋಪಿ ಖ್ವಾಜಾ ಯುನಾಸ್ ಎಂಬವನ ಕೊಲೆ ಆಪಾದನೆ ಮೇಲೆ ಬಂಧಿಸಲಾಗಿದೆ.
ಮತ್ತೊಬ್ಬ ಎನ್‌ಕೌಂಟರ್ ಸ್ಪೆಶಲಿಸ್ಟ್ ಸಬ್ ಇನ್‌ಸ್ಪೆಕ್ಟರ್ ದಯಾನಾಯಕ್ ಭೂಗತ ದೊರೆಗಳ ಜೊತೆಗೆ ಸಂಬಂಧ ಹೊಂದಿದ್ದಾರೆಂದು ವಿಚಾರಣೆ ನಡೆಸಲಾಗುತ್ತಿದೆ. (ಈಗಾಗಲೇ ಹಿಂದಿಯಲ್ಲಿ ಇವನ ಜೀವನವನ್ನಾಧರಿಸಿದ ಮೂರು ಚಿತ್ರಗಳು, ತಮಿಳಿನಲ್ಲಿ ಒಂದು ಚಿತ್ರ ಬಂದಿದ್ದು, ಕನ್ನಡದಲ್ಲಿ ಸಾಯಿಕುಮಾರ್ ನಾಯಕ ನಟನಾಗಿರುವ ದಯಾನಾಯಕ್ ಎಂಬ ಚಿತ್ರ ಬರುತ್ತಿದೆ.)
ಇದು ಬೇಲಿಯೇ ಎದ್ದು ಹೊಲ ಮೇದಂತೆ ಎಂಬ ನಾಣ್ಣುಡಿಯನ್ನು ನೆನಪಿಸುತ್ತಿದೆ. ಇವರಲ್ಲದೆ ಇನ್ನೂ ಅನೇಕ ಪೊಲೀಸ್ ಅಧಿಕಾರಿಗಳನ್ನು ಬಂಧಿಸಲಾಗಿದ್ದು, ಬಂಧಿತರಲ್ಲಿ ಬಹುತೇಕರು ತನಿಖಾ ದಳಕ್ಕೆ ಸೇರಿದ್ದಾರೆ !
ದೇಶ ರಕ್ಷಕರೇ ದೇಶ ಭಕ್ಷಕರಾದರೆ ಜನ ಸಾಮಾನ್ಯರ ಗತಿಯೇನು ?
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications