ಸಾಧನೆಗಳ ಬುತ್ತಿಯಾಂದಿಗೆ ‘ವಿಜಯದುಂದುಭಿ’ ಮೊಳಗಿಸಿದ ಕೃಷ್ಣ

ಸಾಧನೆಗಳ ಬುತ್ತಿಯಾಂದಿಗೆ ‘ವಿಜಯದುಂದುಭಿ’ ಮೊಳಗಿಸಿದ ಕೃಷ್ಣ
ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬರುವುದು ಅಸಾಧ್ಯ

ಬೆಂಗಳೂರು : ಉಪ ಪ್ರಧಾನಿ ಎಲ್‌.ಕೆ.ಅಡ್ವಾಣಿ ಅವರ ‘ಭಾರತ ಉದಯ ಯಾತ್ರೆ’ಗೆ ಉತ್ತರವೆಂದು ಭಾವಿಸಲಾದ ಮುಖ್ಯಮಂತ್ರಿ ಎಸ್ಸೆಂ.ಕೃಷ್ಣರ ‘ವಿಜಯ ದುಂದುಭಿ’ ಯಾತ್ರೆ ಗುರುವಾರ ಪ್ರಾರಂಭವಾಯಿತು. ಇದರೊಂದಿಗೆ ರಾಜ್ಯ ಕಾಂಗ್ರೆಸ್‌ನ ಚುನಾವಣಾ ಪ್ರಚಾರ ಅಧಿಕೃತವಾಗಿ ಪ್ರಾರಂಭವಾಯಿತು.

ಕೃಷ್ಣ ಅವರ ನಿವಾಸ ಅನುಗ್ರಹದಿಂದ, ಮಾ.18ರ ಗುರುವಾರ ಬೆಳಗ್ಗೆ ‘ವಿಜಯ ದುಂದುಭಿ’ ಯಾತ್ರೆ ಪ್ರಾರಂಭವಾಯಿತು. ಮತ್ತೊಂದು ಅವಧಿಯ ಅಧಿಕಾರದ ನಿರೀಕ್ಷೆಯಲ್ಲಿ ಪ್ರಾರಂಭವಾದ ‘ವಿಜಯ ದುಂದುಭಿ’ ಯಾತ್ರೆಯಲ್ಲಿ ಮುಖ್ಯಮಂತ್ರಿ ಕೃಷ್ಣ ಅವರೊಂದಿಗೆ ಅವರ ಪತ್ನಿ ಪ್ರೇಮಾ ಕೃಷ್ಣ , ಸಂಪುಟ ಸಹೋದ್ಯೋಗಿಗಳು ಹಾಗೂ ಕೆಪಿಸಿಸಿ ಅಧ್ಯಕ್ಷ ಜನಾರ್ಧನ ಪೂಜಾರಿ ಇದ್ದಾರೆ.

ಮೊದಲ ಹಂತದ ‘ವಿಜಯ ದುಂದುಭಿ’ ಯಾತ್ರೆಯಲ್ಲಿ ಬೆಂಗಳೂರು ಗ್ರಾಮಾಂತರ, ತುಮಕೂರು, ಹಾಸನ ಹಾಗೂ ಚಿಕ್ಕಮಗಳೂರು ಜಿಲ್ಲೆಗಳನ್ನು ಕೃಷ್ಣ ಕ್ರಮಿಸಲಿದ್ದಾರೆ.

ಅಧಿಕಾರ ಗ್ರಹಣಕ್ಕಾಗಿ ಕರ್ನಾಟಕ ದಕ್ಷಿಣ ಭಾರತದ ಹೆಬ್ಬಾಗಿಲು ಎನ್ನುವ ಬಿಜೆಪಿ ಹೇಳಿಕೆಗೆ ಪ್ರತಿಕ್ರಿಯಿಸಿದ ಕೃಷ್ಣ - ನಾವು ಅವರನ್ನು ತಡೆಯುತ್ತೇವೆ. ಮುಂದೆಂದೂ ಅಧಿಕಾರ ಸಾಧ್ಯವಾಗದಂತೆ ತಡೆಯುತ್ತೇವೆ ಎಂದರು. ಬಿಜೆಪಿ ಬೇರೆಯವರಿಗೆ ಸಮಸ್ಯೆಯಾಗಿರಬಹುದು, ಆದರೆ ನನಗೆ ಯಾವತ್ತಿಗೂ ಸಮಸ್ಯೆಯಾಗಿಲ್ಲ ಎಂದೂ ಕೃಷ್ಣ ಹೇಳಿದರು.

ಅಪೂರ್ಣಗೊಂಡ ಕೆಲಸಗಳನ್ನು ಪೂರ್ಣಗೊಳಿಸಲು ಮತ್ತೊಂದು ಅವಧಿಯ ಅಧಿಕಾರ ಅಗತ್ಯವಿದೆ ಎಂದ ಕೃಷ್ಣ , ಮತ್ತೊಮ್ಮೆ ಜನಾಶೀರ್ವಾದ ದೊರೆಯುವ ಕುರಿತು ವಿಶ್ವಾಸ ವ್ಯಕ್ತಪಡಿಸಿದರು.

ಬೆಂಗಳೂರಿನ ಗಾಳಿ ಆಂಜನೆಯ ದೇವಸ್ಥಾನದ ಬಳಿ ಮಾತನಾಡಿದ ಕೃಷ್ಣ , ತಮ್ಮ ಸರ್ಕಾರದ ಸಾಧನೆಗಳನ್ನು ಹೇಳಿಕೊಂಡರು. ಸಾಧಿಸಿದ್ದು ಸಾಕಷ್ಟು , ಸಾಧಿಸಬೇಕಾದುದು ಇನ್ನೂ ಇದೆ. ನಗರ ಪ್ರದೇಶಗಳಲ್ಲಿ ಮೂಲಭೂತ ಅವಶ್ಯಕತೆಗಳ ಅಭಿವೃದ್ಧಿಗೆ ಸರ್ಕಾರ ಗಮನ ಹರಿಸಿದೆ. ಬೆಂಗಳೂರು ವಿಶ್ವದ ಅತ್ಯುತ್ತಮ ವಾಸಯೋಗ್ಯ ನಗರಗಳಲ್ಲಿ ಒಂದಾಗಿರುವುದು ಸರ್ಕಾರದ ಹೆಮ್ಮೆ ತರುವ ಸಾಧನೆಯಾಗಿದೆ ಎಂದು ಕೃಷ್ಣ ಬಣ್ಣಿಸಿದರು.

(ಪಿಟಿಐ)

ಮುಖಪುಟ / ವಾರ್ತೆಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+