ಯು. ಆರ್. ಅನಂತಮೂರ್ತಿ ಸ್ಪರ್ಧೆಗೆ ಜಯಂತ ಕಾಯ್ಕಿಣಿ ಸ್ವಾಗತ
ಯು. ಆರ್. ಅನಂತಮೂರ್ತಿ ಸ್ಪರ್ಧೆಗೆ ಜಯಂತ ಕಾಯ್ಕಿಣಿ ಸ್ವಾಗತ
ಕಲಾವಿದರು ರಾಜಕೀಯ ಪ್ರವೇಶಿಸುವುದರಲ್ಲಿ ತಪ್ಪೇನೂ ಇಲ್ಲ
ಅನಂತಮೂರ್ತಿ ಅವರಂಥ ವ್ಯಕ್ತಿಗಳು ಚುನಾವಣೆಯಲ್ಲಿ ಸ್ಪರ್ಧಿಸಬೇಕು. ಇದರಿಂದಾಗಿ ಜನತೆ ತಮ್ಮ ಹಿತಾಸಕ್ತಿ-ಹಕ್ಕುಬಾಧ್ಯತೆಗಳ ಅರಿವಿನ ಬಗ್ಗೆ ಸ್ಪಷ್ಟ ತಿಳಿವಳಿಕೆ ಹೊಂದುವುದು ಸಾಧ್ಯವಾಗುತ್ತದೆ ಎಂದು ಜಯಂತ ಕಾಯ್ಕಿಣಿ ಅಭಿಪ್ರಾಯಪಟ್ಟರು. ಪತ್ರಿಕೆಯಾಂದಕ್ಕೆ ನೀಡಿರುವ ಸಂದರ್ಶನದಲ್ಲಿ ಕಾಯ್ಕಿಣಿ ಈ ವಿಷಯ ತಿಳಿಸಿದ್ದಾರೆ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರು ಮತಗಟ್ಟೆಗೆ ಬರುವುದು ಕೂಡಾ ತುಂಬಾ ಮಹತ್ವವಾದುದು ಎಂದು ಅಭಿಪ್ರಾಯಪಟ್ಟಿರುವ ಕಾಯ್ಕಿಣಿ- ಸಿನಿಮಾ ಹಾಗೂ ಕಿರುತೆರೆ ಕಲಾವಿದರು ರಾಜಕೀಯ ಪ್ರವೇಶಿಸುವುದರಲ್ಲಿ ತಪ್ಪೇನೂ ಇಲ್ಲ ಎಂದಿದ್ದಾರೆ. ಕ್ರಿಮಿನಲ್‌ಗಳು ರಾಜಕೀಯಕ್ಕೆ ಬರಬಹುದಾದರೆ ಕಲಾವಿದರು ಯಾಕೆ ಬರಬಾರದು ಎಂದು ಜಯಂತ ಕಾಯ್ಕಿಣಿ ಹೇಳಿದ್ದಾರೆ.
(ಇನ್ಫೋ ವಾರ್ತೆ)
Post your views
ಮುಖಪುಟ / ವಾರ್ತೆಗಳು












Click it and Unblock the Notifications