‘ಹೊಂಬಾಳೆ’ಗೆ ಒಂಬತ್ತು ತುಂಬಿತು !
‘ಹೊಂಬಾಳೆ’ಗೆ ಒಂಬತ್ತು ತುಂಬಿತು !
ಎಚ್.ಫಲ್ಗುಣ ಅವರ ಕ್ರಿಯಾಶೀಲತೆಯ ಫಲವಾದ ‘ಹೊಂಬಾಳೆ’ ಸಂಸ್ಥೆಗೀಗ ಒಂಬತ್ತರ ಹುಟ್ಟುಹಬ್ಬದ ಸಂಭ್ರಮ. ಈ ಸಂಭ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲು ಹೊಂಬಾಳೆ ಮುಂದಾಗಿದೆ; ಶುಭ ಹೇಳಿ.
ಕಾರ್ಯಕ್ರಮದಲ್ಲಿ ಸ್ವರಮಂದಾರ-2003, ಕಲಾ ಕೋವಿದ, ಅನನ್ಯ ಕಲಾಭಿಜ್ಞ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುವುದು. ಲೇಖಕ ಪ್ರೊ. ಬರಗೂರು ರಾಮಚಂದ್ರಪ್ಪ ಅವರು ಪ್ರಶಸ್ತಿ ಪ್ರದಾನ ಮಾಡುವರು.
ಸಂಜೆ 7 ಗಂಟೆಗೆ ಲಹರಿ ರೆಕಾರ್ಡಿಂಗ್ ಕಂ. ಪ್ರೈ. ಲಿ., ಅರ್ಪಿಸುವ ಹರಟೆ ಮಲ್ಲರ ಹಾಸ್ಯೋತ್ಸವ ಧ್ವನಿಸುರುಳಿ, ಸಿ.ಡಿ. ಬಿಡುಗಡೆಯಾಗಲಿದೆ. ಆನಂತರ ರಿಚರ್ಡ್ ಲೂಯಿಸ್, ಬಿ.ಆರ್. ಲಕ್ಷ್ಮಣರಾವ್, ಎಚ್. ಡುಂಡಿರಾಜ್ ಮತ್ತು ವೈ.ವಿ. ಗುಂಡುರಾವ್ ಅವರಿಂದ ಹಾಸ್ಯಸಂಜೆ ಕಾರ್ಯಕ್ರಮವನ್ನು ನಡೆಯಲಿದೆ.
ಸ್ವರ ಮಂದಾರ-2003 ಪ್ರಶಸ್ತಿ ಪುರಸ್ಕೃತರು :
- ವರ್ಷದ ಧ್ವನಿಸುರುಳಿ ಸಂಸ್ಥೆ : ಲಹರಿ ರೆಕಾರ್ಡಿಂಗ್ ಕಂ. ಪ್ರೈ. ಲಿ.
- ವರ್ಷದ ಗೀತ ರಚನೆಕಾರ: ಬಿ. ಆರ್. ಲಕ್ಷ್ಮಣರಾವ್(ಪ್ರೇಮದ ಚಿಟಿಕೆ, ಸಂಸ್ಥೆ: ಆಕಾಶ್)
- ವರ್ಷದ ಸ್ವರ ಸಂಯೋಜಕ: ಎಸ್. ಬಾಲಸುಬ್ರಃಮಣ್ಯಂ (ಎಸ್. ಬಾಲಿ) (ಕ್ಯಾಸೆಟ್: ಉಯ್ಯಾಲೆ, ಸಂಸ್ಥೆ: ಲಹರಿ)
- ವರ್ಷದ ಗಾಯಕಿ: ಶಮಿತಾ ಮಲ್ನಾಡ್(ಮನೆಮನೆ ಸಿರಿಲಕ್ಷ್ಮಿ, ಸಂಸ್ಥೆ: ಜಂಕಾರ್)
- ವರ್ಷದ ಗಾಯಕ: ರಾಜು ಅನಂತಸ್ವಾಮಿ(ಹರಿ ನಿನ್ನ ಮುರಲಿ, ಸಂಸ್ಥೆ: ಲಹರಿ)
- ವಿಶೇಷ ಪ್ರಶಸ್ತಿ : ಶೇಷ ಗಿರಿದಾಸ್ ರಾಯಚೂರು(ಗಾಯನ, ಅಳುವದ್ಯಾತಕೊ ರಂಗ, ಸಂಸ್ಥೆ: ಸಾಗರ್)
- ಕಲಾಕೋವಿದ ಪ್ರಶಸ್ತಿ: ಆರ್. ಪರಮಶಿವನ್(ಹಾರ್ಮೋನಿಯಂ, ಕೀಬೋರ್ಡ್ ವಾದಕ)
- ಅನನ್ಯ ಕಲಾಭಿಜ್ಞ ಪ್ರಶಸ್ತಿ: ಪಾರ್ವತಿಸುತ(ಹಿರಿಯ ಗಾಯಕ-ಸಂಗೀತ ನಿರ್ದೇಶಕ)
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬೇಕಾದ ವಿಳಾಸ:
ಹೊಂಬಾಳೆ ಪ್ರತಿಭಾರಂಗ (ರಿ)
ನಂ.21, ದಿವ್ಯ, ಮದ್ದೂರಮ್ಮ ಗುಡಿ ರಸ್ತೆ
ಪೈಪ್‌ಲೈನ್, ಶ್ರೀನಗರ,
ಬೆಂಗಳೂರು-560 050
ದೂರವಾಣಿ : 080-26529303
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications