ಬದುಕು ವಂಚಿಸಿದ ಹೆಣ್ಣುಮಗಳು 6ತಿಂಗಳಿಂದ ಕೋಮಾದಲ್ಲಿದ್ದಾಳೆ
ಬದುಕು ವಂಚಿಸಿದ ಹೆಣ್ಣುಮಗಳು 6ತಿಂಗಳಿಂದ ಕೋಮಾದಲ್ಲಿದ್ದಾಳೆ
ಆಕೆ ಆಸ್ಪತ್ರೆಯ ಹಾಸಿಗೆಯ ಮೇಲೆ ಮಲಗಿದ್ದಾಳೆ. ತನ್ನ ಸುತ್ತ ಏನು ನಡೆಯುತ್ತಿದೆ ಎನ್ನುವುದು ಆಕೆಗೆ ಗೊತ್ತಿಲ್ಲ . ತನಗೇನಾಗಿದೆ ಎನ್ನುವುದೂ ಆಕೆಗೆ ತಿಳಿದಿಲ್ಲ . ಆಕೆ ಕೋಮಾದಲ್ಲಿದ್ದಾಳೆ.
- ದಟ್ಸ್‌ಕನ್ನಡ ಬ್ಯೂರೊ
ಈ ಹೆಣ್ಣುಮಗಳದೊಂದು ದೊಡ್ಡ ಕಥೆ. ದುರಂತ ಕಥೆ. ಗಾಯತ್ರಿಯ ಗಂಡನ ಹೆಸರು ಅರುಣ್ ಜೆ.ರಾವ್. ಅಮೆರಿಕಾದಲ್ಲಿ ಸಾಫ್ಟ್‌ವೇರ್ ಕನ್ಸಲ್ಟಂಟ್. ಈತನೊಂದಿಗೆ ಗಾಯತ್ರಿಯ ಮದುವೆ ನಿಶ್ಚಯವಾದಾಗ ತಮ್ಮ ಮಗಳ ಅದೃಷ್ಟದ ಕುರಿತು ಮನೆ ಮಂದಿಯೆಲ್ಲಾ ಹಿಗ್ಗಿದ್ದರು. ಅದೆಲ್ಲ ಹಳೆಯ ಕಥೆ. ಈಗಿರುವುದು ಬರೀ ಕಣ್ಣೀರು ಮಾತ್ರ.
27 ವರ್ಷದ ಡಾ.ಗಾಯತ್ರಿ ದಂತವೈದ್ಯೆ. ಅಪಾರ ಪ್ರತಿಭೆಯ ಗಾಯತ್ರಿ Periodontics ನಲ್ಲಿ ಮೂರನೇ ರ್ಯಾಂಕ್‌ನೊಂದಿಗೆ ಚಿನ್ನದ ಪದಕ ಪಡೆದಿದ್ದ ಜಾಣೆ. ಬೆಂಗಳೂರಿನಲ್ಲಿ ತನ್ನದೇ ಆದ ಒಂದು ಕ್ಲಿನಿಕ್ ನಡೆಸುತ್ತಿದ್ದಳು. ಎಂ.ಎಸ್.ರಾಮಯ್ಯ ಮೆಡಿಕಲ್ ಕಾಲೇಜಿನ ವಿಜಿಟಿಂಗ್ ಫ್ಯಾಕಲ್ಟಿ ಪಟ್ಟಿಯಲ್ಲಿ ಗಾಯತ್ರಿಯ ಹೆಸರೂ ಇತ್ತು .
ಅಮೆರಿಕದ ಹುಡುಗನೊಂದಿಗೆ ಮದುವೆಯಾದಾಗ ಗಾಯತ್ರಿ ಕೂಡ ಖುಷಿಯಾಗಿದ್ದಳು. ತನ್ನ ವಿದ್ಯಾಭ್ಯಾಸವನ್ನು ಮುಂದುವರೆಸಬಹುದು ಎಂದು ಕನಸು ಕಂಡಿದ್ದಳು. ಆದರೆ ನಡೆದದ್ದೇ ಬೇರೆ. 2003ರ ಫೆಬ್ರವರಿಯಲ್ಲಿ ಮದುವೆಯಾಗಿ ಎಂಟು ತಿಂಗಳ ನಂತರ ಅಮೆರಿಕಾಗೆ ಹೋದ ಡಾ.ಗಾಯತ್ರಿ, ಭಾರತಕ್ಕೆ ಮರಳಿದ್ದು ಪ್ರಜ್ಞಾಹೀನಳಾಗಿ.
ನಡೆದದ್ದು ಇಷ್ಟು . ಡಾ.ಗಾಯತ್ರಿ ಮಿಯಾಮಿ ವೈದ್ಯಕೀಯ ವಿಶ್ವವಿದ್ಯಾನಿಲಯದಲ್ಲಿ ಉನ್ನತ ಶಿಕ್ಷಣಕ್ಕಾಗಿ ದಾಖಲಾಗಿದ್ದಳು. ಒಂದು ದಿನ ಕಾಲೇಜಿನಿಂದ ವಾಪಸ್ಸಾಗುತ್ತಿದ್ದ ಗಾಯತ್ರಿಗೆ ಅತ್ಯಂತ ವೇಗವಾಗಿ ಧಾವಿಸುತ್ತಿದ್ದ ಕಾರೊಂದು ಢಿಕ್ಕಿ ಹೊಡೆಯಿತು. ಗಾಯತ್ರಿ ನಿಂತಲ್ಲೇ ಕುಸಿದಳು. ಆಕೆಯನ್ನು ಮಿಯಾಮಿಯ ವಿಶ್ವವಿದ್ಯಾಲಯದ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ಹೊಟ್ಟೆ ಹಾಗೂ ಮೆದುಳಿನ ಅನೇಕ ಶಸ್ತ್ರಚಿಕಿತ್ಸೆಗಳು ನಡೆದವು.
ಅರುಣ್ ರಾವ್ ದೀರ್ಘಕಾಲದ ಶುಶ್ರೂಷೆಗೆಂದು ಗಾಯತ್ರಿಯನ್ನು ತವರು ಬೆಂಗಳೂರಿಗೆ ಕರೆತಂದು ಬಿಟ್ಟಿದ್ದಾನೆ. ಆರು ತಿಂಗಳಾಯಿತು, ಗಾಯತ್ರಿ ಕೋಮಾದಿಂದ ಇನ್ನೂ ಹೊರಬಂದಿಲ್ಲ . ಒಬ್ಬಳೇ ಮಗಳಿಗೊದಗಿದ ದುಸ್ಥಿತಿಯ ನೆನೆದು ಕಣ್ಣೀರಿಡುವುದು ಬಿಟ್ಟರೆ ಗಾಯತ್ರಿಯ ಅಪ್ಪ ಅಮ್ಮನಿಗೆ ಬೇರೆ ದಾರಿ ತೋಚುತ್ತಿಲ್ಲ . ಅವರಿಗೂ ವಯಸ್ಸಾಗಿದೆ. ನಿವೃತ್ತಿ ಜೀವನದ ದಿನಗಳಲ್ಲಿ ಒದಗಿದ ದುರಂತವನ್ನು ಅರಗಿಸಿಕೊಳ್ಳಲಾಗದೆ ಕಂಗಾಲಾಗಿದ್ದಾರೆ.
ಗಾಯತ್ರಿ ಮೊದಲಿನಂತಾಗುವುದು ಯಾವಾಗ ? ಗಾಯತ್ರಿಯ ಗಂಡ ಡೈವೋರ್ಸ್ ಕೇಳುತ್ತಾನಾ? ಗೊತ್ತಿಲ್ಲ . ಆದರೆ, ಗಾಯತ್ರಿಯ ಚಿಕಿತ್ಸೆಗೆಂದು ಅರುಣ್ ಸಂಗ್ರಹಿಸಿರುವ ನಿಧಿ ಇನ್ನೂ ಗಾಯತ್ರಿ ಪೋಷಕರಿಗೆ ದೊರಕಿಲ್ಲ .
ಆಕೆಗೆ ಒಳ್ಳೆಯದಾಗಲಿ ಎಂದು ಹಾರೈಸುವ. ಗಾಯತ್ರಿಯ ಅಪ್ಪಅಮ್ಮನಿಗೆ ನೆಮ್ಮದಿಯ ದಿನಗಳು ಬಹುಬೇಗ ದೊರೆಯಲಿ ಎಂದು ಬಯಸುವ.
ಮುಖಪುಟ / ವಾಟ್ಸ್ ಹಾಟ್
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications