ಭೈರಪ್ಪ ರಿಗೆ ಮುಕ್ತ ವಿ.ವಿ. ಡಾಕ್ಟರೇಟ್
ಭೈರಪ್ಪ ರಿಗೆ ಮುಕ್ತ ವಿ.ವಿ. ಡಾಕ್ಟರೇಟ್
ಲೇಖಕ ಡಾ.ಬಿ.ಆರ್.ನಂದ, ಯುಜಿಸಿ ಮಾಜಿ ಅಧ್ಯಕ್ಷ ಪ್ರೊ.ಅರ್ಮೈಟಿ ಎಸ್.ದೇಸಾಯಿಗೂ ಗೌರವ ಡಾಕ್ಟರೇಟ್
ಪ್ರಸಿದ್ಧಿ ಪಡೆದ ಗೃಹಭಂಗ, ಸಾಕ್ಷಿ, ಮುಂತಾದ ಗ್ರಂಥಗಳ ಕರ್ತೃ ಭೈರಪ್ಪನವರು ಕಾದಂಬರಿ ಬರೆಯುತ್ತಿದ್ದಾರೆಂದರೆ ಓದುಗರು ಚಾತಕ ಪಕ್ಷಿಯಂತೆ ಪ್ರತಿಯನ್ನು ಮುಂಗಡ ಕಾಯ್ದಿರಿಸುತ್ತಾರೆ. ಅವರ ಕಾದಂಬರಿಗಳು ತೆರೆ ಮೇಲೆಯೂ ಮೂಡಿಬಂದು ಯಶಸ್ವಿಯಾಗಿವೆ. ಇವರೊಂದಿಗೆ ಖ್ಯಾತ ಲೇಖಕ ಡಾ.ಬಿ.ಆರ್.ನಂದ, ಯುಜಿಸಿ ಮಾಜಿ ಅಧ್ಯಕ್ಷ ಪ್ರೊ.ಅರ್ಮೈಟಿ ಎಸ್.ದೇಸಾಯಿ ಅವರಿಗೂ ಗೌರವ ಡಾಕ್ಟರೇಟ್ ನೀಡಲಿದೆ.
ಘಟಿಕೋತ್ಸವದ ಅಧ್ಯಕ್ಷತೆ ರಾಜ್ಯಪಾಲ ಟಿ.ಎನ್.ಚರ್ತುವೇದಿ ವಹಿಸಲಿದ್ದಾರೆ. ಸುಪ್ರೀಮ್‌ಕೋರ್ಟ್ ನಿವೃತ್ತ ನ್ಯಾಯಾಧೀಶ ಆರ್.ಎಸ್.ಪಾಠಕ್ ಘಟಿಕೋತ್ಸವ ಭಾಷಣ ಮಾಡಲಿದ್ದಾರೆ. ಉನ್ನತ ಶಿಕ್ಷಣ ಸಚಿವ ಜಿ.ಎಸ್.ಪರಮೇಶ್ವರ್ ಭಾಗವಹಿಸಲಿದ್ದಾರೆ ಎಂದು ವಿಶ್ವವಿದ್ಯಾಲಯದ ಕುಲಸಚಿವರು ತಿಳಿಸಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications