ಮಾ.18ರಿಂದ ಮುಖ್ಯಮಂತ್ರಿ ಕೃಷ್ಣರ ‘ವಿಜಯ ದುಂದುಭಿ’ ಯಾತ್ರೆ
ಮಾ.18ರಿಂದ ಮುಖ್ಯಮಂತ್ರಿ ಕೃಷ್ಣರ ‘ವಿಜಯ ದುಂದುಭಿ’ ಯಾತ್ರೆ
ಎಲ್.ಕೆ.ಅಡ್ವಾಣಿ ಅವರ ‘ಭಾರತ ಉದಯ ಯಾತ್ರೆ’ಗೆ ಕಾಂಗ್ರೆಸ್ ಉತ್ತರ
‘ವಿಜಯ ದುಂದುಭಿ ಯಾತ್ರೆ’ಯ ಮೂಲಕ ಪಕ್ಷದ ನಾಯಕರು, ಟಿಕೆಟ್ ಆಕಾಂಕ್ಷಿಗಳು ಹಾಗೂ ಕಾರ್ಯಕರ್ತರನ್ನು ಭೇಟಿ ಮಾಡಿ, ಅವರ ನಡುವೆ ಸೌಹಾರ್ದತೆ ಕಲ್ಪಿಸಲು ಕೃಷ್ಣ ಉದ್ದೇಶಿದ್ದಾರೆ. ಮಾ.18ರ ಬೆಳಗ್ಗೆ ಕೃಷ್ಣ ಅವರ ಅನುಗ್ರಹ ನಿವಾಸದಿಂದ ‘ವಿಜಯ ದುಂದುಭಿ ಯಾತ್ರೆ’ ಪ್ರಾರಂಭವಾಗಲಿದೆ. ಮೊದಲ ಹಂತದ ಈ ಯಾತ್ರೆ ಎರಡು ದಿನಗಳ ಅವಧಿಯದಾಗಿದೆ.
ನೆಲಮಂಗಲ, ಕುಣಿಗಲ್, ಯಡಿಯೂರು, ತುರುವೇಕೆರೆಗಳನ್ನು ‘ವಿಜಯ ದುಂದುಭಿ ಯಾತ್ರೆ’ ಮಾ.18ರಂದು ಕ್ರಮಿಸಲಿದೆ. ಮಾ.19ರಂದು ಹಾಸನ, ಕಡೂರುಗಳಲ್ಲಿ ಮುಖ್ಯಮಂತ್ರಿ ಕೃಷ್ಣ ಕಾರ್ಯಕರ್ತರ ಸಭೆ ನಡೆಸುವರು.
ಐದು ಹಂತಗಳಲ್ಲಿ ನಡೆಯಲಿರುವ ‘ವಿಜಯ ದುಂದುಭಿ ಯಾತ್ರೆ’ಯನ್ನು ಉಪ ಪ್ರಧಾನಿ ಎಲ್.ಕೆ.ಅಡ್ವಾಣಿ ಅವರ ‘ಭಾರತ ಉದಯ ಯಾತ್ರೆ’ಗೆ ರಾಜ್ಯ ಕಾಂಗ್ರೆಸ್‌ನ ಉತ್ತರವೆಂದು ರಾಜಕೀಯ ವಲಯಗಳಲ್ಲಿ ವಿಶ್ಲೇಷಿಸಲಾಗುತ್ತಿದೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications