ಜಾಫರ್ ಷರೀಫ್ ಭದ್ರಕೋಟೆಗೆ ‘ಮಾತುಗಾರ’ ಇಬ್ರಾಹಿಂ ಲಗ್ಗೆ
ಜಾಫರ್ ಷರೀಫ್ ಭದ್ರಕೋಟೆಗೆ ‘ಮಾತುಗಾರ’ ಇಬ್ರಾಹಿಂ ಲಗ್ಗೆ
ಮುಸ್ಲಿಂ ಮತ ಸೆಳೆಯಲು ಜಾತ್ಯತೀತ ಜನತಾದಳದ ತಂತ್ರ
ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಸಿ.ಎಂ.ಇಬ್ರಾಹಿಂ ಸ್ಪರ್ಧಿಸುವ ವಿಷಯವನ್ನು ಜಾತ್ಯತೀತ ಜನತಾದಳದ ಮುಖಂಡ ಹಾಗೂ ಪಕ್ಷದ ವಕ್ತಾರ ಪಿಜಿಆರ್ ಸಿಂಧ್ಯಾ ಮಾ.15ರ ಸೋಮವಾರ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಪ್ರಕಟಿಸಿದರು.
ಇಬ್ರಾಹಿಂ ಸ್ಪರ್ಧೆಯಾಂದಿಗೆ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿನ ಚುನಾವಣೆಯ ಹಣಾಹಣಿ ರಂಗೇರುವುದೆಂದು ನಿರೀಕ್ಷಿಸಲಾಗಿದೆ. ಮಾಜಿ ಕೇಂದ್ರ ಸಚಿವ ಜಾಫರ್ ಷರೀಫ್‌ರ ಭದ್ರಕೋಟೆಯಾದ ಬೆಂಗಳೂರು ಉತ್ತರ ಕ್ಷೇತ್ರ ಕಾಂಗ್ರೆಸ್‌ನ ಭದ್ರಕೋಟೆಗಳಲ್ಲೊಂದು. ಮುಸ್ಲಿಂ ಸಮುದಾಯದವರು ಅಧಿಕ ಸಂಖ್ಯೆಯಲ್ಲಿರುವ ಈ ಕ್ಷೇತ್ರದಲ್ಲಿ ಷರೀಫ್ ಪ್ರಭಾವ ದಟ್ಟವಾಗಿದೆ. ಆದರೆ ತಮ್ಮ ಮಾತುಗಾರಿಕೆಯನ್ನೇ ಬಂಡವಾಳವಾಗಿರಿಸಿಕೊಂಡಿರುವ ಇಬ್ರಾಹಿಂ ಕೂಡ ಮುಸ್ಲಿಂರಾಗಿರುವುದರಿಂದ, ಷರೀಫ್ ಮತಬ್ಯಾಂಕ್ ಬದಲಾಗುವುದೆಂಬುದು ಜಾತ್ಯತೀತ ಜನತಾದಳದ ಲೆಕ್ಕಾಚಾರ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications