ಅಡ್ವಾಣಿ ಯಾತ್ರೆಗೆ ತಡೆಯತ್ನ ; ವೈಜನಾಥ್-ಗುರುನಾಥ್ ಬಂಧನ
ಅಡ್ವಾಣಿ ಯಾತ್ರೆಗೆ ತಡೆಯತ್ನ ; ವೈಜನಾಥ್-ಗುರುನಾಥ್ ಬಂಧನ
ಭಾರತ ಉದಯ ಯಾತ್ರೆ ರಾಜ್ಯದಿಂದ ಮಹಾರಾಷ್ಟ್ರಕ್ಕೆ ಪ್ರವೇಶ
ಬೀದರ್‌ಗೆ ಸಮೀಪದ ಬಗ್ಧಾಲ್‌ಪುರದ ಸಮೀಪ ಮಾಜಿ ಸಚಿವ ವೈಜನಾಥ ಪಾಟೀಲ್ ಹಾಗೂ ಅವರ 15 ಬೆಂಬಲಿಗರನ್ನು ಮಾ.16ರ ಮಂಗಳವಾರ ಬೆಳಗ್ಗೆ ಬಂಧಿಸಲಾಯಿತು. ಕಮಲಾಪುರದಲ್ಲಿ ಮಾಜಿ ಸಚಿವ ಸಿ.ಗುರುನಾಥ್ ಹಾಗೂ ಇತರ ನೂರು ಮಂದಿಯನ್ನು ಬಂಧಿಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತರು ಅಡ್ವಾಣಿ ಅವರ ಭಾರತ ಉದಯ ಯಾತ್ರೆಗೆ ಅಡ್ಡಿ ಉಂಟು ಮಾಡಲು ಪ್ರಯತ್ನಿಸುತ್ತಿದ್ದರು.
ಬಂಧಿತ ವೈಜನಾಥ ಪಾಟೀಲ್ ಹಾಗೂ ಗುರುನಾಥ್ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಜಾತ್ಯತೀತ ಜನತಾದಳದ ಮುಖಂಡರು. ಇವರಿಬ್ಬರ ಬಂಧನದ ನಂತರ ಬೀದರ್ ಸುತ್ತಮುತ್ತ ಬಿಗು ವಾತಾವರಣ ಉಂಟಾಗಿದೆ.
ಉತ್ತರ ಕರ್ನಾಟಕ ಪ್ರದೇಶಕ್ಕೆ ಸಂವಿಧಾನದ 371ನೇ ವಿಧಿಗೆ ತಿದ್ದುಪಡಿ ತರುವ ಮೂಲಕ ವಿಶೇಷ ಅಧಿಕಾರಗಳನ್ನು ಕಲ್ಪಿಸಬೇಕೆನ್ನುವ ಮನವಿಯನ್ನು ತಿರಸ್ಕರಿಸಿರುುವ ಎನ್‌ಡಿಎ ಸರ್ಕಾರದ ನೀತಿಯನ್ನು ಜಾತ್ಯತೀತ ಜನತಾದಳದ ನಾಯಕರು ಪ್ರತಿಭಟಿಸಿದರು.
ಅಡ್ವಾಣಿ ಯಾತ್ರೆ ಮಹಾರಾಷ್ಟ್ರಕ್ಕೆ :
ಉಪ ಪ್ರಧಾನಿ ಅಡ್ವಾಣಿ ಅವರ ಭಾರತ ಉದಯ ಯಾತ್ರೆ ಬೀದರ್ ಮೂಲಕ ಮಹಾರಾಷ್ಟ್ರಕ್ಕೆ ಮಂಗಳವಾರ ತೆರಳಿತು. ಇದಕ್ಕೂ ಮುನ್ನಾ ಹುಮ್ನಾಬಾದ್‌ನಲ್ಲಿ ನಡೆದ ಚುನಾವಣಾ ರ್ಯಾಲಿಯನ್ನು ಉದ್ದೇಶಿಸಿ ಅಡ್ವಾಣಿ ಮಾತನಾಡಿದರು.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications