ಕೃಷ್ಣ ವಿರುದ್ಧ ದೂರು, ಅನಂತಮೂರ್ತಿ ಬೆಂಬಲಿಸೊಲ್ಲ :ದೇವೇಗೌಡ
ಕೃಷ್ಣ ವಿರುದ್ಧ ದೂರು, ಅನಂತಮೂರ್ತಿ ಬೆಂಬಲಿಸೊಲ್ಲ :ದೇವೇಗೌಡ
ಅಡ್ವಾಣಿ ರಥಯಾತ್ರೆ ವಿರುದ್ಧ ದೇವೇಗೌಡರ ವಾಕ್ ದಾಳಿ
ಕೃಷ್ಣ ಅವರ ವಿರುದ್ಧ ಸೋನಿಯಾ ಅವರಿಗೆ ಬರೆದಿರುವ ದೂರುಪತ್ರವನ್ನು ಭಾನುವಾರ ಸುದ್ದಿಗೋಷ್ಠಿಯಲ್ಲಿ ದೇವೇಗೌಡ ಬಿಡುಗಡೆ ಮಾಡಿದರು. ಪಂಚಾಯಿತಿಗಳಿಗೆ ಅಧಿಕಾರ ವಹಿಸಕೊಡುವ ಸಂವಿಧಾನದ ತಿದ್ದುಪಡಿಯನ್ನು ಕೃಷ್ಣ ಉಲ್ಲಂಘಿಸಿದ್ದಾರೆ. ಸ್ಥಳೀಯ ಪ್ರಾಧಕಾರಗಳ ಅಭಿವೃದ್ಧಿ ಕೆಲಸಗಳಿಗಾಗಿ ದೊರೆಯುವ 100 ಕೋಟಿ ರುಪಾಯಿಗಳ ಹುಡ್ಕೋ ಸಾಲದ ಪ್ರಕರಣದಲ್ಲಿಯೂ ಕೃಷ್ಣ ತಪ್ಪು ಹೆಜ್ಜೆ ತುಳಿದಿದ್ದಾರೆ ಎಂದು ದೇವೇಗೌಡ ಆಪಾದಿಸಿದರು.
ಗೌಡ ಬೀದಿಗಿಳಿದ್ರೆ... ಅಷ್ಟೇ !
ಈ ಗೌಡ ಪಂಚೆ ಎತ್ತಿಕಟ್ಟಿ ಬೀದಿಗಿಳಿದ್ರೆ ಯಾವ ರಥಯಾತ್ರೆಯೂ ನಿಲ್ಲೋದಿಲ್ಲ ಎಂದು ಅಬ್ಬರಿಸಿರುವ ದೇವೇಗೌಡ, ಉಪ ಪ್ರಧಾನಿ ಅಡ್ವಾಣಿ ಅವರ ರಥಯಾತ್ರೆಯನ್ನು ಟೀಕಿಸಿದ್ದಾರೆ.
ಕಾಂಗ್ರೆಸ್‌ನವರಿಗೆ ಅಡ್ವಾಣಿ ರಥಯಾತ್ರೆಯನ್ನು ಎದುರಿಸುವ ತಾಕತ್ತಿಲ್ಲ . ಆದ್ರೆ ಈ ಗೌಡ ಹಾಗಲ್ಲ . ಪಂಚೆ ಎತ್ತಿಕಟ್ಟಿ ಬೀದಿಗಿಳಿದ್ರೆ ಯಾವ ರಥಯಾತ್ರೆಯೂ ನಿಲ್ಲೋದಿಲ್ಲ ಎಂದು ಭಾನುವಾರ ದೇವೇಗೌಡರು ಗುಡುಗಿದರು. ಅಡ್ವಾಣಿ ಅವರ ರಥಯಾತ್ರೆಯನ್ನು ಮೆಟ್ಟಿ ನಿಲ್ಲುವ ತಾಕತ್ತು ಜಾತ್ಯತೀತ ಜನತಾದಳಕ್ಕಿದೆ ಎಂದು ಅವರು ಹೇಳಿದರು.
ಅನಂತಮೂರ್ತಿಗೆ ಬೆಂಬಲ ಇಲ್ಲ
ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಉದ್ದೇಶಿಸಿರುವ ಜ್ಞಾನಪೀಠ ಪ್ರಶಸ್ತಿ ವಿಜೇತ ಲೇಖಕ ಡಾ.ಯು.ಆರ್.ಅನಂತಮೂರ್ತಿ ಅವರನ್ನು ಜಾತ್ಯತೀತ ಜನತಾದಳ ಬೆಂಬಲಿಸುವ ಸಾಧ್ಯತೆಗಳನ್ನು ದೇವೇಗೌಡ ತಳ್ಳಿಹಾಕಿದರು. ನಾವು ಅನಂತಮೂರ್ತಿ ಅವರನ್ನು ಬೆಂಬಲಿಸುವುದಿಲ್ಲ . ಬೇಕಿದ್ದರೆ ಅವರೇ ನಮ್ಮ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಬಹುದು ಎಂದು ಗೌಡ ಹೇಳಿದರು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications