ರಾಜಶೇಖರಮೂರ್ತಿ ಬಿಜೆಪಿಲಿ ಇರ್ತಾರೆ, ಪ್ರಚಾರವೂ ಮಾಡ್ತಾರೆ
ರಾಜಶೇಖರಮೂರ್ತಿ ಬಿಜೆಪಿಲಿ ಇರ್ತಾರೆ, ಪ್ರಚಾರವೂ ಮಾಡ್ತಾರೆ
ಕೇಂದ್ರ ಸಚಿವ ಅರುಣ್ ಜೇಟ್ಲಿ ಅವರಿಂದ ರಾಜಶೇಖರ ಮೂರ್ತಿ ಭೇಟಿ
ರಾಜಶೇಖರ ಮೂರ್ತಿ ಬಿಜೆಪಿಯಲ್ಲೇ ಮುಂದುವರಿಯುತ್ತಾರೆ. ಅವರು ಚುನಾವಣೆಗಳಲ್ಲಿ ಪಕ್ಷದ ಪರ ಪ್ರಚಾರ ಮಾಡುತ್ತಾರೆ ಎಂದು ಕಾನೂನು ಮತ್ತು ಕಂಪನಿ ವ್ಯವಹಾರಗಳ ಕೇಂದ್ರ ಸಚಿವ ಅರುಣ್ ಜೇಟ್ಲಿ ಸುದ್ದಿಗಾರರಿಗೆ ತಿಳಿಸಿದರು. ರಾಜಶೇಖರ ಮೂರ್ತಿ ಅವರನ್ನು ಗುರುವಾರ ಭೇಟಿ ಮಾಡಿ ಚರ್ಚಿಸಿದ ನಂತರ ಜೇಟ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ರಾಜ್ಯ ಬಿಜೆಪಿಯ ಚುನಾವಣಾ ಪ್ರಕ್ರಿಯೆಗಳ ಉಸ್ತುವಾರಿಯನ್ನು ಜೇಟ್ಲಿ ವಹಿಸಿಕೊಂಡಿದ್ದಾರೆ.
ರಾಜಶೇಖರ ಮೂರ್ತಿ ಅವರು ಪಕ್ಷದ ಹಿರಿಯ ನಾಯಕರಾಗಿದ್ದು , ಚುನಾವಣೆಯಲ್ಲಿ ಅವರ ಪಾತ್ರ ಪ್ರಮುಖವಾದುದಾಗಿದೆ ಎಂದು ಜೇಟ್ಲಿ ಅವರೊಂದಿಗೆ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದ ರಾಜ್ಯ ಬಿಜೆಪಿ ಅಧ್ಯಕ್ಷ ಅನಂತಕುಮಾರ್ ಹೇಳಿದರು. ಇದಕ್ಕೂ ಮುನ್ನ ನಡೆದ ಜೇಟ್ಲಿ ಹಾಗೂ ರಾಜಶೇಖರ ಮೂರ್ತಿ ಭೇಟಿ ಸಂದರ್ಭದಲ್ಲಿ ರಾಜ್ಯ ಬಿಜೆಪಿ ಮುಖಂಡರು ಹಾಜರಿದ್ದರು. ರಾಜಶೇಖರ ಮೂರ್ತಿ ಜಾತ್ಯತೀತ ಜನತಾದಳ ಸೇರುತ್ತಾರೆಂಬ ವದಂತಿ ಇತ್ತೀಚೆಗೆ ವ್ಯಾಪಕವಾಗಿತ್ತು .
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications