ಆಸ್ಪತ್ರೆಯಿಂದ ಚಿಕಿತ್ಸೆ ಪಡೆದು ಬಂದು ಸಿಬಿಐ ಎದುರು ಕೂತ ತೆಲಗಿ
ಆಸ್ಪತ್ರೆಯಿಂದ ಚಿಕಿತ್ಸೆ ಪಡೆದು ಬಂದು ಸಿಬಿಐ ಎದುರು ಕೂತ ತೆಲಗಿ
ಸಿಬಿಐನ ಮೂವರು ತನಿಖಾಧಿಕಾರಿಗಳಿಂದ ತೆಲಗಿ ವಿಚಾರಣೆ
ವಿಶೇಷ ನ್ಯಾಯಾಲಯದಿಂದ ಪರವಾನಿಗೆ ಪಡೆದಿರುವ ಸಿಬಿಐನ ಮೂವರು ತನಿಖಾಧಿಕಾರಿಗಳು ಬಹುಕೋಟಿ ಛಾಪ ಹಗರಣದ ಆರೋಪದ ಹಿನ್ನೆಲೆಯಲ್ಲಿ ಬುಧವಾರ ತೆಲಗಿಯ ವಿಚಾರಣೆ ನಡೆಸಿದರು ಎಂದು ಕಾರಾಗೃಹದ ಅಧಿಕಾರಿಗಳು ತಿಳಿಸಿದ್ದಾರೆ.
ಚೇತರಿಕೆ : ಇತ್ತೀಚೆಗೆ ವಾಂತಿ, ಭೇದಿಯಿಂದ ನರಳುತ್ತಿದ್ದ ಕರೀಂಲಾಲ ತೆಲಗಿಗೆ ವಿಕ್ಟೋರಿಯಾ ಹಾಗೂ ಐಸೊಲೇಷನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಈಗ ತೆಲಗಿ ಚೇತರಿಸಿಕೊಂಡಿದ್ದು ಆತನನ್ನು ಮಾ.9 ರಂದೇ ಕಾರಾಗೃಹಕ್ಕೆ ಮರಳಿ ಕರೆತರಲಾಗಿದೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications