Get Updates
Get notified of breaking news, exclusive insights, and must-see stories!

ಅಡ್ವಾಣಿ ಯಾತ್ರೆ ಜಾತ್ರೇನ ಕಾಂಗ್ರೆಸ್‌ ಕೇರ್‌ ಮಾಡೊಲ್ಲ - ಕೃಷ್ಣ

ಅಡ್ವಾಣಿ ಯಾತ್ರೆ ಜಾತ್ರೇನ ಕಾಂಗ್ರೆಸ್‌ ಕೇರ್‌ ಮಾಡೊಲ್ಲ - ಕೃಷ್ಣ
ಅನಂತಮೂರ್ತಿ ಚುನಾವಣಾ ಸ್ಪರ್ಧೆಯ ಕುರಿತು ಕೃಷ್ಣ ಒಲವು

ಬೆಂಗಳೂರು: ರಾಜಕೀಯವಾಗಿ ಅತ್ಯಂತ ಬಲಿಷ್ಠವಾಗಿರುವ ಕಾಂಗ್ರೆಸ್‌ ಪಕ್ಷ ಯಾತ್ರೆ ಜಾತ್ರೆಗಳನ್ನು ಕೇರು ಮಾಡುವುದಿಲ್ಲ ಎಂದು ಮುಖ್ಯಮಂತ್ರಿ ಎಸ್ಸೆಂ.ಕೃಷ್ಣ ಹೇಳಿದ್ದಾರೆ.ಉಪ ಪ್ರಧಾನಿ ಎಲ್‌.ಕೆ.ಅಡ್ವಾಣಿಯವರ ಭಾರತ ಉದಯ ರಥಯಾತ್ರೆಯ ಕುರಿತು ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಕೃಷ್ಣ - ಇಂಥ ಯಾತ್ರೆಗಳ ಬಗ್ಗೆ ಕಾಂಗ್ರೆಸ್‌ ತಲೆ ಕೆಡಿಸಿಕೊಳ್ಳುವುದಿಲ್ಲ . ಇಂಥ ಅನೇಕ ಯಾತ್ರೆಗಳನ್ನು ಎದುರಿಸಿಯೇ ಪಕ್ಷ ಬಲಗೊಂಡಿದೆ ಎಂದರು. ಅಡ್ವಾಣಿಯವರ ಯಾತ್ರೆಯನ್ನು ರಾಜ್ಯ ಸರ್ಕಾರ ತಡೆಗಟ್ಟುವ ಸಾಧ್ಯತೆಗಳನ್ನು ಕೃಷ್ಣ ಸ್ಪಷ್ಟವಾಗಿ ತಳ್ಳಿಹಾಕಿದರು. ಅವರು ಸುದ್ದಿಗಾರರೊಂದಿಗೆ (ಮಾ.11ರ ಗುರುವಾರ) ಅನೌಪಚಾರಿಕವಾಗಿ ಮಾತನಾಡಿದ ಸಂದರ್ಭದಲ್ಲಿ ಈ ವಿಷಯ ತಿಳಿಸಿದರು.ಭಾರತ ಪ್ರಕಾಶಿಸಿದ್ದಾದರೂ ಯಾವಾಗ ? ಶತಮಾನಗಳ ಹಿಂದೆಯಲ್ಲವೇ ! ಸುಳ್ಳುಗಳನ್ನು ಹೇಳುವ ಬಿಜೆಪಿ ಈಗ ಭಾರತ ಉದಯದ ಕುರಿತು ಮಾತನಾಡುತ್ತಿದೆ ಎಂದು ಕೃಷ್ಣ ಛೇಡಿಸಿದರು.ನಿರ್ಭೀತ ವಾತಾವರಣದಲ್ಲಿ ಪಾರದರ್ಶಕ ಹಾಗೂ ಮುಕ್ತ ಚುನಾವಣೆಗಳನ್ನು ನಡೆಸುವ ಕುರಿತು ಕಾಂಗ್ರೆಸ್‌ ಸರ್ಕಾರ ಬದ್ಧವಾಗಿದೆ ಎಂದು ಕೃಷ್ಣ ಹೇಳಿದರು.ಅನಂತಮೂರ್ತಿ ಕುರಿತು ಒಲವು : ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಬಯಸಿರುವ ಅನಂತಮೂರ್ತಿ , ದೂರವಾಣಿಯಲ್ಲಿ ತಮ್ಮೊಂದಿಗೆ ಚರ್ಚಿಸಿದ್ದಾರೆ. ಅವರು ಪಕ್ಷದ ನೆರವನ್ನು ಕೋರಿದ್ದಾರೆ. ಈ ಕುರಿತು ಪಕ್ಷದ ಸಭೆಯಲ್ಲಿ ಪ್ರಸ್ತಾಪಿಸಲಾಗುವುದು. ಅನಂತಮೂರ್ತಿಯಂಥ ಬರಹಗಾರರು ಚುನಾವಣೆಗಳಲ್ಲಿ ಸ್ಪರ್ಧಿಸುವ ವಿಷಯವನ್ನು ಗೌರವಿಸುತ್ತೇನೆ ಎಂದು ಮುಖ್ಯಮಂತ್ರಿ ಕೃಷ್ಣ ಹೇಳಿದರು.ಅನಂತಮೂರ್ತಿ ಅವರಿಗೆ ನೆರವು ನೀಡುವ ವಿಷಯದ ಕುರಿತು ಪ್ರತಿಕ್ರಿಯಿಸಿರುವ ಜಾತ್ಯತೀತ ಜನತಾದಳದ ಮುಖಂಡ ಪಿಜಿಆರ್‌ ಸಿಂಧ್ಯಾ, ಈ ವಿಷಯವನ್ನು ಪಕ್ಷದ ಸಭೆ ತೀರ್ಮಾನಿಸಲಿದೆ ಎಂದಿದ್ದಾರೆ.(ಪಿಟಿಐ)

ಮುಖಪುಟ / ವಾರ್ತೆಗಳು

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+