ಕರ್ನಾಟಕದಲ್ಲಿ ಸಮ್ಮಿಶ್ರ ಸರ್ಕಾರ! ವಾಟಾಳ್ ನಾಗರಾಜ್ ಭವಿಷ್ಯ
ಕರ್ನಾಟಕದಲ್ಲಿ ಸಮ್ಮಿಶ್ರ ಸರ್ಕಾರ! ವಾಟಾಳ್ ನಾಗರಾಜ್ ಭವಿಷ್ಯ
ಚುನಾವಣಾ ಪ್ರಚಾರ ಶುರು ಮಾಡಿದ ವಾಟಾಳ್
ಚಾಮರಾಜನಗರ ಜಿಲ್ಲೆಯ ಮುಕ್ಕಡಹಳ್ಳಿಯಲ್ಲಿ ನಡೆದ ಗ್ರಾಮೀಣ ಜನರ ಸಮಾವೇಶ (ಮಾ.9ರಂದು) ಉದ್ಘಾಟಿಸಿ ಮಾತನಾಡಿದ ವಾಟಾಳ್ ನಾಗರಾಜ್- ಚುನಾವಣೆ ನಂತರ ರಾಜ್ಯದಲ್ಲಿ ಸರ್ಕಾರ ರಚಿಸಲು ವಿವಿಧ ಪಕ್ಷಗಳ ನಡುವೆ ಹೊಂದಾಣಿಕೆ ಏರ್ಪಡಲಿದ್ದು , ಸಮ್ಮಿಶ್ರ ಸರ್ಕಾರ ರೂಪುಗೊಳ್ಳಲಿದೆ ಎಂದು ಭವಿಷ್ಯ ನುಡಿದರು.
ನೀರಾವರಿ ಕಾಮಗಾರಿಗಳನ್ನು ಅನುಷ್ಠಾನಕ್ಕೆ ತರುವಲ್ಲಿ ರಾಜ್ಯಸರ್ಕಾರ ಇನ್ನಷ್ಟು ಕ್ರಿಯಾಶಕ್ತಿಯನ್ನು ತೋರಬೇಕಿದೆ ಎಂದ ವಾಟಾಳ್, ರಾಜ್ಯದ ಹಿತಾಸಕ್ತಿಯನ್ನು ಕಡೆಗಣಿಸುತ್ತಿರುವ ಕೇಂದ್ರ ಸರ್ಕಾರದ ಧೋರಣೆಯನ್ನು ಖಂಡಿಸಿದರು.
ಚಾಮರಾಜನಗರ ಹೊಸ ಜಿಲ್ಲೆಯಾಗಿ ರೂಪುಗೊಂಡಿದ್ದು ಹಾಗೂ ಕಾವೇರಿ ನೀರು ಚಾಮರಾಜನಗರಕ್ಕೆ ಬಂದದ್ದು ತಮ್ಮ ಸಾಧನೆ ಎಂದು ಹೇಳಿಕೊಂಡರು. ಈ ಮೂಲಕ ವಿಧಾನಸಭಾ ಚುನಾವಣೆಗೆ ವಾಟಾಳ್ ಸ್ಪರ್ಧಿಸುವುದು ಹೆಚ್ಚೂಕಡಿಮೆ ಖಚಿತವಾಧಿಗಿದೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications