ಸೋಮವಾರ ಪೇಟೆಯಲ್ಲಿ ಕಾಳ್ಗಿಚ್ಚು ಜಾಗೃತಿ ಮೂಡಿಸುವ ಜಾಥಾ
ಸೋಮವಾರ ಪೇಟೆಯಲ್ಲಿ ಕಾಳ್ಗಿಚ್ಚು ಜಾಗೃತಿ ಮೂಡಿಸುವ ಜಾಥಾ
ನಾಗರಹೊಳೆ ವನ್ಯಜೀವಿ ಸಂರಕ್ಷಣೆ ಶೈಕ್ಷಣಿಕ ಸಮಿತಿ ಹಾಗೂ ಜನ ವಿಕಾಸ ಶಾಲೆಯಿಂದ ಜಾಥಾ ಸಂಘಟನೆ
ನಾಗರಹೊಳೆ ವನ್ಯಜೀವಿ ಸಂರಕ್ಷಣೆ ಶೈಕ್ಷಣಿಕ ಸಮಿತಿ ಹಾಗೂ ಜನ ವಿಕಾಸ ಶಾಲೆ ಈ ಜಾಥಾವನ್ನು ಜಂಟಿಯಾಗಿ ಹಮ್ಮಿಕೊಂಡಿದ್ದವು. ಜನ ವಿಕಾಸ ಶಾಲೆಯ ಪ್ರಾಂಶುಪಾಲರಾದ ಅನಿತಾ ಜಾಥಾಕ್ಕೆ ಚಾಲನೆ ನೀಡಿದರು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ಜಾಥಾ, ಕಾಳ್ಗಿಚ್ಚಿನ ಬಗ್ಗೆ ಅರಿವು ಮೂಡಿಸುವ ಕರಪತ್ರಗಳನ್ನು ಜನರಿಗೆ ವಿತರಿಸಿತು.
ಬಹಳಷ್ಟು ಸಾರಿ ಮನುಷ್ಯನ ಅಜಾಗರೂಕತೆಯಿಂದಲೇ ಕಾಳ್ಗಿಚ್ಚು ಉಂಟಾಗುತ್ತದೆ. ಜಾನುವಾರುಗಳಿಗೆ ಹೊಸ ಹುಲ್ಲು ಬೆಳೆಯಲೆಂದು, ಒಣಗಿದ ಹುಲ್ಲಿಗೆ ಬೆಂಕಿ ಹಚ್ಚುವವರೂ ಇದ್ದಾರೆ. ಇದರಿಂದಾಗಿ ಕಾಳ್ಗಿಚ್ಚು ಉಂಟಾಗುತ್ತದೆ. ಕಾಳ್ಗಿಚ್ಚಿನಿಂದಾಗಿ ಅನೇಕ ವನ್ಯಜೀವಿಗಳು ಹಾಗೂ ಸಸ್ಯಸಂಕುಲ ನಾಶವಾಗುತ್ತದೆ. ಅಪರೂಪದ ಪ್ರಬೇಧಗಳು ಸರ್ವನಾಶವಾಗುವುದೂ ಉಂಟು ಎಂದು ವನ್ಯಜೀವಿ ಸಂರಕ್ಷಣಾ ಸಮಿತಿಯ ಚಿತ್ತರಂಜನ್ ಜಾಥಾ ಸಂದರ್ಭದಲ್ಲಿ ತಿಳಿಸಿದರು.
ಕಾಳ್ಗಿಚ್ಚಿನಿಂದಾಗಿ ಮಣ್ಣಿನ ಫಲವತ್ತತೆ ಕುಸಿಯುತ್ತದೆ. ಪರಿಸರ ಮಾಲಿನ್ಯವೂ ಉಂಟಾಗುತ್ತದೆ. ಆ ಕಾರಣದಿಂದಾಗಿ ವಿದ್ಯಾರ್ಥಿಗಳು ಹಾಗೂ ಜನತೆ ಕಾಳ್ಗಿಚ್ಚು ಉಂಟಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಚಿತ್ತರಂಜನ್ ಹೇಳಿದರು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications