ಬೆಂಗಳೂರಿನ ಗಾಂಧಿನಗರ, ಕೆಜಿಎಫ್‌ನಿಂದ ಎಐಡಿಎಂಕೆ ಸ್ಪರ್ಧೆ?
ಬೆಂಗಳೂರಿನ ಗಾಂಧಿನಗರ, ಕೆಜಿಎಫ್‌ನಿಂದ ಎಐಡಿಎಂಕೆ ಸ್ಪರ್ಧೆ?
ರಾಜ್ಯದ 5 ವಿಧಾನಸಭಾ ಕ್ಷೇತ್ರಗಳಲ್ಲಿ ಅಣ್ಣಾಡಿಎಂಕೆ ಸ್ಪರ್ಧೆ ಸಂಭವ
ಕೆಜಿಎಫ್ ವಿಧಾನ ಸಭಾ ಕ್ಷೇತ್ರ ಮೊದಲಿನಿಂದಲೂ ಎಐಡಿಎಂಕೆ ವಶದಲ್ಲಿರುವ ಕ್ಷೇತ್ರ. ಈ ವರ್ಷವೂ ಶಾಸಕ ಭಕ್ತವತ್ಸಲಂ ಗೆಲ್ಲುವ ಕುದುರೆ. ತಮಿಳರು ಗಣನೀಯವಾಗಿ ಇರುವ ಕನ್ನಡಿಗ ಚಿತ್ರೋದ್ಯಮದ ಹೃದಯಭಾಗ ಗಾಂಧೀನಗರವನ್ನು ಕೂಡಾ ಬಿಜೆಪಿ ಎಐಡಿಎಮ್‌ಕೆಗೆ ಬಿಟ್ಟುಕೊಡುವ ಸಾಧ್ಯತೆ ಇದೆ. ಈ ಕುರಿತು ರಾಜ್ಯ ಬಿಜೆಪಿ ಘಟಕ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ವೆಂಕಯ್ಯ ನಾಯ್ಡು, ಹಾಗೂ ಎಐಡಿಎಂಕೆ ಮುಖ್ಯಸ್ಥೆ ಜಯಲಲಿತಾ ಮಾತುಕತೆ ನಡೆಸಿ ನಿರ್ಧರಿಸಲಿದ್ದಾರೆ.
ಈ ಹಿಂದೆ ರಾಜ್ಯ ಬಿಜಿಪಿ ಅಧ್ಯಕ್ಷ ಅನಂತಕುಮಾರ್ ಮತ್ತು ರಾಜ್ಯ ಎಐಡಿಎಂಕೆ ನಾಯಕರ ನಡುವೆ ನಡೆದ ಮಾತುಕತೆ ವಿಫಲವಾಗಿದೆ. ಮತ್ತೆ ಕಾವೇರಿ ವಿವಾದ ಉದ್ಭವಿಸಿದಲ್ಲಿ ಈ ಹೊಂದಾಣಿಕೆಯಿಂದಾಗಿ ರಾಜ್ಯ ಬಿಜೆಪಿ ಘಟಕ ಮುಜುಗರಕ್ಕೆ ಒಳಗಾಗಲಿದೆ. ಬಿಜೆಪಿ ರಾಜ್ಯ ಹಿತದೃಷ್ಟಿಯ ನಿಲುವುಗಳಿಗೆ ಹಿನ್ನಡೆಯಾಗುವ ಕಾರಣ ಮಾತುಕತೆ ನಿಧಾನವಾಗಿದೆ ಎನ್ನಲಾಗಿದೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications