ಚಿತ್ತಾಪುರದಲ್ಲಿ ಮಾಜಿ ಶಾಸಕನ ಪತ್ನಿ , ಪುತ್ರಿಯರ ದಾರುಣ ಹತ್ಯೆ
ಚಿತ್ತಾಪುರದಲ್ಲಿ ಮಾಜಿ ಶಾಸಕನ ಪತ್ನಿ , ಪುತ್ರಿಯರ ದಾರುಣ ಹತ್ಯೆ
ತೀವ್ರ ಗಾಯಗೊಂಡ ಮಾಜಿ ಶಾಸಕ ಶರಣಪ್ಪ ಆಸ್ಪತ್ರೆಗೆ ದಾಖಲು
ಮಾರಕಾಸ್ತ್ರಗಳನ್ನು ಹೊಂದಿದ್ದ ಗುಂಪೊಂದು ಶರಣಪ್ಪ ಅವರ ಮನೆಗೆ ಸೋಮವಾರ ನುಗ್ಗಿದ್ದು - ಶರಣಪ್ಪನವರ ಪತ್ನಿ ಹಾಗೂ ಇಬ್ಬರು ಪುತ್ರಿಯರ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಘಟನೆಯಲ್ಲಿ ಹಲ್ಲೆಗೊಳಗಾದ ಲಕ್ಷ್ಮಿಬಾಯಿ (60), ಚಂದ್ರಕಲಾ (20), ಮತ್ತು ರೇಣುಕಾ (24) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮಾಜಿ ಶಾಸಕ ಶರಣಪ್ಪನವರ ಮೇಲೂ ಹಲ್ಲೆ ನಡೆದಿದ್ದು , ತೀವ್ರವಾಗಿ ಗಾಯಗೊಂಡಿರುವ ಅವರು ಗುಲ್ಬರ್ಗಾದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಹಲ್ಲೆಗೆ ಆಸ್ತಿ ವಿವಾದವೇ ಕಾರಣವಿರಬಹುದೆಂದು ಶಂಕಿಸಲಾಗಿದೆ. ಘಟನೆ ನಡೆದ ಸ್ಥಳಕ್ಕೆ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮಚಂದ್ರ ರಾವ್ ಭೇಟಿ ನೀಡಿದ್ದು , ತನಿಖೆ ಮುಂದುವರಿದಿದೆ.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications