ಬೆಂಗಳೂರ ಟೀವಿಗಳಲ್ಲಿ ಭಾರತ-ಪಾಕ್ ಕ್ರಿಕೆಟ್ ಪ್ರಸಾರ ಇಲ್ಲ ?
ಬೆಂಗಳೂರ ಟೀವಿಗಳಲ್ಲಿ ಭಾರತ-ಪಾಕ್ ಕ್ರಿಕೆಟ್ ಪ್ರಸಾರ ಇಲ್ಲ ?
ಕೇಬಲ್ ಮಾಲೀಕರು ಹಾಗೂ ಚಾನಲ್ ಒಡೆಯರ ಜಗಳದಲ್ಲಿ ಬಡವಾಗುತ್ತಿರುವ ಗ್ರಾಹಕ
ಕ್ರಿಕೆಟ್ ಮ್ಯಾಚನ್ನು ಪ್ರಸಾರ ಮಾಡಲು ಅಧಿಕೃತ ಹಕ್ಕು ಪಡೆದಿರುವ ಟೆನ್ ಸ್ಪೋರ್ಟ್ಸ್ ಚಾನೆಲ್‌ನ ಅಸ್ಪಷ್ಟ ನೀತಿಯಿಂದಾಗಿ ಬೆಂಗಳೂರಿಗರು ಕ್ರಿಕೆಟ್ ಹಬ್ಬದಿಂದ ವಂಚಿತರಾಗುವ ಸಂದರ್ಭ ಸೃಷ್ಟಿಯಾಗಿದೆ. ಕ್ರಿಕೆಟ್ ಸರಣಿ ಪ್ರಾರಂಭವಾಗಲು ಕೇವಲ 4 ದಿನಗಳು ಉಳಿದಿರುವಾಗ, ಟೆನ್ ಸ್ಪೋರ್ಟ್ಸ್ ಚಾನೆಲ್ ಕೇಬಲ್ ಆಪರೇಟರ್‌ಗಳ ಕಾಲು ಕೆರೆದು ಜಗಳಕ್ಕಿಳಿಯುತ್ತಿದೆ.
ಟೆನ್ ಸ್ಪೋರ್ಟ್ಸ್ ಚಾನೆಲ್ ಈಗಿನ ದರದಲ್ಲಿ ಹೆಚ್ಚಳವನ್ನು ಬಯಸುತ್ತಿದೆ ಮತ್ತು ಆ ದರವನ್ನೂ ಕೂಡ ನಿರ್ದಿಷ್ಟವಾಗಿ ಸೂಚಿಸಲು ಹಿಂಜರಿಯುತ್ತಿದೆ. ನಾವು ಇಂತಿಷ್ಟೇ ಹಣ ಪಾವತಿಸಬೇಕೆಂದು ಹೇಳುತ್ತಿಲ್ಲ. ಆದರೆ ಕೇಬಲ್ ಆಪರೇಟರ್‌ಗಳೇ ಸರಿಯಾದ ಒಂದು ದರವನ್ನು ನಿಗದಿ ಮಾಡಬೇಕು. ಈ ಮುನ್ನ ನಿರ್ಧರಿಸಿದಂತೆ ಈಗಿರುವ ಚಂದಾದಾರರನ್ನು 5% ರಿಂದ 30% ಕ್ಕೆ ಏರಿಸಬೇಕು. ಈ ಕುರಿತು ಏಕೆಂದರೆ ಅವರ ಜೊತೆ ಸೇರಿಯೇ ಮೊದಲು ಈ ನಿರ್ಧಾರ ಕೈಗೊಳ್ಳಲಾಗಿತ್ತು ಎಂದು ಟೆನ್ ಸ್ಪೋರ್ಟ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಶರ್ಮಿಷ್ಟ ಹೇಳಿದ್ದಾರೆ.
ಇತ್ತ ಕೇಬಲ್ ಆಪರೇಟರುಗಳು ಹೇಳುತ್ತಿರುವುದೇನೆಂದರೆ- ಈಗಿರುವ ಚಂದಾದಾರರಿಗೆ 5% ರಷ್ಟು ಹೆಚ್ಚು ಹಣ ಪಾವತಿಸಲು ಕೇಳಲಾಗುತ್ತದೆ. ಇದರಿಂದ ಬಾಡಿಗೆ ಹೆಚ್ಚುತ್ತದೆ. ಆದರೆ ಒಮ್ಮೆಲೆ 30% ಚಂದಾದಾರರನ್ನು ಹೆಚ್ಚಿಸಿ ಎಂದರೆ ಅದು ಆಗದ ಮಾತು! ಟೆನ್ ಸ್ಪೋರ್ಟ್ಸ್ ಚಾನಲ್ ತನ್ನ ಆದಾಯವನ್ನು ಒಮ್ಮೆಗೇ ಹೆಚ್ಚಿಸಿಕೊಳ್ಳಲು ಹವಣಿಸುತ್ತಿದೆ ಎಂದು ಕೇಬಲ್ ಆಪರೇಟರುಗಳ ನಿರ್ದೇಶಕ ಪ್ರತಾಪ್ ದೂರುತ್ತಾರೆ.
ಟೆನ್ ಸ್ಪೋರ್ಟ್ಸ್ ಚಾನೆಲ್ ಕ್ರಿಕೆಟ್ ಸರಣಿಯ ಪ್ರಸಾರದ ಹಕ್ಕು ಪಡೆದ ತಕ್ಷಣವೇ ರಷ್ಯಾ ಮತ್ತು ಚೈನಾದ ಕೆಲವು ಚಾನಲ್‌ಗಳ ಪ್ರಸಾರವನ್ನೂ ತಡೆಹಿಡಿದಿದೆ. ಪ್ರತಿ ಚಾನೆಲ್‌ಗೂ ಶುಲ್ಕ ಹೆಚ್ಚಿಸುತ್ತಿರುವ ಟೆನ್ ಸ್ಪೋರ್ಟ್ಸ್ ನೀತಿ ಬಳಕೆದಾರರಿಗೂ ಕೇಬಲ್ ಮಾಲೀಕರಿಗೂ ಹೊರೆಯಾಗಲಿದೆ ಎಂದು ರಾಜ್ಯ ಕೇಬಲ್ ಆಪರೇಟರುಗಳ ಸಂಘದ ಸುದೀಶ್ ಕುಮಾರ್ ಹೇಳುತ್ತಾರೆ.
ಗಂಡ ಹೆಂಡಿರ ಜಗಳದಲ್ಲಿ ಕೂಸು ಬಡವಾಯ್ತು ಎನ್ನುವ ಮಾತಿದೆಯಲ್ಲ , ಹಾಗೆ ಟೆನ್ ಸ್ಪೋರ್ಟ್ಸ್ ಮತ್ತು ಕೇಬಲ್ ಆಪರೇಟರ್‌ಗಳ ನಡುವಿನ ಜಗಳದಲ್ಲಿ ರಾಜ್ಯದ ಕೇಬಲ್ ಗ್ರಾಹಕರು ಕ್ರಿಕೆಟ್ ರಸಕವಳದಿಂದ ವಂಚಿರಾಗುವ ಸಾಧ್ಯತೆಯಿದೆ. ಹಾಗಾದರೆ ಒಳ್ಳೆಯದೇನೇ ಎನ್ನುವುದು ಕೆಲವು ಪೋಷಕರ ಅಭಿಪ್ರಾಯ. ಏಕೆಂದರೆ ಮಕ್ಕಳ ಪರೀಕ್ಷೆಗಳು ಹೊಸಿತಿಲಲ್ಲೇ ಇವೆ.
ಮುಖಪುಟ / ಬೆಂಗಳೂರು ಡೈರಿ












Click it and Unblock the Notifications