ಕಾವೇರಿ ಸಂತ್ರಸ್ತರಿಗೆ 6 ತಿಂಗಳಲ್ಲಿ ಪರಿಹಾರಕ್ಕೆ ಕೋರ್ಟ್ ಆದೇಶ
ಕಾವೇರಿ ಸಂತ್ರಸ್ತರಿಗೆ 6 ತಿಂಗಳಲ್ಲಿ ಪರಿಹಾರಕ್ಕೆ ಕೋರ್ಟ್ ಆದೇಶ
ಪ್ರಾಧಿಕಾರದ ತೀರ್ಪಿನಲ್ಲಿ ಮಧ್ಯಪ್ರವೇಶಿಸಲು ನಿರಾಕರಣೆ
ತಮಿಳುನಾಡಿನೊಂದಿಗೆ ನೀರು ಹಂಚಿಕೊಳ್ಳುವ ಸಂಬಂಧ 1991ರಲ್ಲಿ ನಡೆದ ಗಲಭೆಗಳಲ್ಲಿ ನೊಂದವರಿಗೆ ಪರಿಹಾರ ನೀಡುವಂತೆ ಕಾವೇರಿ ಪರಿಹಾರ ಪ್ರಾಧಿಕಾರ ತಿಳಿಸಿತ್ತು . ಈ ಕುರಿತು ಪ್ರಾಧಿಕಾರದ ತೀರ್ಪಿನಲ್ಲಿ ಮಧ್ಯಪ್ರವೇಶಿಸಲು ನಿರಾಕರಿಸಿರುವ ಸುಪ್ರಿಂಕೋರ್ಟ್, 6 ತಿಂಗಳಲ್ಲಿ ಸಂತ್ರಸ್ತರಿಗೆ ಪರಿಹಾರ ನೀಡಬೇಕೆಂದು ಮಂಗಳವಾರ ಆದೇಶಿಸಿತು.
ನ್ಯಾಯಮೂರ್ತಿ ಎಸ್.ರಾಜೇಂದ್ರಬಾಬು, ನ್ಯಾಯಮೂರ್ತಿ ಎ.ಆರ್.ಲಕ್ಷ್ಮಣನ್ ಹಾಗೂ ನ್ಯಾಯಮೂರ್ತಿ ಜಿ.ಪಿ.ಮಾಥುರ್ ಅವರನ್ನೊಳಗೊಂಡ ನ್ಯಾಯಪೀಠ ಈ ತೀರ್ಪು ನೀಡಿದೆ. ಸುಮಾರು 10 ಸಾವಿರ ಸಂತ್ರಸ್ತರಿಗೆ ಪರಿಹಾರ ಬರಬೇಕಾಗಿದೆ.
ಕರ್ನಾಟಕ ಹಾಗೂ ತಮಿಳುನಾಡುಗಳಲ್ಲಿ ಚುನಾವಣೆ ಜ್ವರ ಏರುಮುಖವಾಗಿರುವುದರಿಂದ ಸದ್ಯಕ್ಕೆ ಕಾವೇರಿ ನೀರು ಹಂಚಿಕೆ ವಿವಾದ ತಣ್ಣಗಿದೆ.
(ಪಿಟಿಐ)
ಮುಖಪುಟ / ಕಾವೇರಿ












Click it and Unblock the Notifications