ಮಾ.12-15 : ರಾಜ್ಯದಲ್ಲಿ ಅಡ್ವಾಣಿ ‘ಭಾರತ ಉದಯ ಯಾತ್ರೆ’
ಮಾ.12-15 : ರಾಜ್ಯದಲ್ಲಿ ಅಡ್ವಾಣಿ ‘ಭಾರತ ಉದಯ ಯಾತ್ರೆ’
ಬೆಂಗಳೂರು, ಶಿವಮೊಗ್ಗ , ಹುಬ್ಬಳ್ಳಿ, ಬಿಜಾಪುರಗಳಲ್ಲಿ ಬಹಿರಂಗ ಸಭೆ
ತಮಿಳುನಾಡಿನಿಂದ ಮಾರ್ಚ್ 12 ಕ್ಕೆ ಬೆಂಗಳೂರಿಗೆ ಭಾರತ ಉದಯ ಯಾತ್ರೆ ಆಗಮಿಸಲಿದೆ. ಅಂದು ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಉಪ ಪ್ರಧಾನಿ ಅಡ್ವಾಣಿ ಅವರು ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡುವರು.
ಬೆಂಗಳೂರಿನಿಂದ ಶಿವಮೊಗ್ಗ (ಮಾ.13), ಹುಬ್ಬಳ್ಳಿ (ಮಾ.14) ಹಾಗೂ ಬಿಜಾಪುರ (ಮಾ.15)ಗಳಲ್ಲಿ ಭಾರತ ಉದಯ ಯಾತ್ರೆ ಸಾಗಲಿದೆ. ಈ ಸಂದರ್ಭದಲ್ಲಿ ರಾಜ್ಯ ಬಿಜೆಪಿಯ ಬಹುತೇಕ ನಾಯಕರು ಅಡ್ವಾಣಿ ಅವರೊಂದಿಗಿರುವರು. ಭಾರತ ಉದಯ ಯಾತ್ರೆಯ ಯಶಸ್ಸಿಗಾಗಿ ಎಲ್ಲ ಸಿದ್ಧತೆಗಳನ್ನು ನಡೆಸಲು ಬಿಜೆಪಿ ಜಿಲ್ಲಾ ಘಟಕಗಳು ಈಗಾಗಲೇ ಸಿದ್ಧತೆ ನಡೆಸಿವೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications