Get Updates
Get notified of breaking news, exclusive insights, and must-see stories!

ಜನತಾಪರಿವಾರದಿಂದ ಕಾಂಗ್ರೆಸ್‌ಗೆ ಶ್ರೀನಿವಾಸ್‌-ಮೊಯಿದ್ದೀನ್‌

ಜನತಾಪರಿವಾರದಿಂದ ಕಾಂಗ್ರೆಸ್‌ಗೆ ಶ್ರೀನಿವಾಸ್‌-ಮೊಯಿದ್ದೀನ್‌
ಬಿಜೆಪಿ ಬಂಗಾರಪ್ಪನವರನ್ನು ಮುಗಿಸುತ್ತೆ - ಪೂಜಾರಿ

ಬೆಂಗಳೂರು: ಜಾತ್ಯತೀತ ಜನತಾದಳದ ಕೆ. ಎಚ್‌. ಶ್ರೀನಿವಾಸ್‌ ಮತ್ತು ಜನತಾ ಪರಿವಾರದ ಮುಖಂಡ ಬಿ.ಎ. ಮೊಯಿದ್ದೀನ್‌ ಸೋಮವಾರ (ಮಾ.8) ಕಾಂಗ್ರೆಸ್‌ ಪಕ್ಷವನ್ನು ಸೇರಿದರು.

ಕೆ.ಎಚ್‌.ಶ್ರೀನಿವಾಸ್‌ ಮತ್ತು ಮೊಯಿದ್ದೀನ್‌ ಮಾತ್ರವಲ್ಲದೆ, ಶಿವಮೊಗ್ಗ, ದಕ್ಷಿಣ ಕನ್ನಡ, ಬೀದರ್‌, ಚಿಕ್ಕಮಗಳೂರು ಮತ್ತು ಕೋಲಾರ ಪ್ರದೇಶಗಳ ಎಐಪಿಜೆಡಿ ಮತ್ತು ಜಾತ್ಯಾತೀತ ಜನತಾದಳದ ಅನೇಕ ನಾಯಕರು ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಮತ್ತು ಕೆಪಿಸಿಸಿ ಅಧ್ಯಕ್ಷ ಬಿ. ಜನಾರ್ದನ ಪೂಜಾರಿಯವರ ಸಮ್ಮುಖದಲ್ಲಿ ಸೋಮವಾರ ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆ ಹೊಂದಿದರು.

ಕಾಂಗ್ರೆಸ್‌ ಪಕ್ಷಕ್ಕೆ ಈ ನಾಯಕರ ಸೇರ್ಪಡೆ ಪಕ್ಷದ ಕುರಿತು ಅವರಿಗಿರುವ ವಿಶ್ವಾಸವನ್ನು ತೋರಿಸುತ್ತದೆ. ಅವರ ನಂಬಿಕೆಯು ಬರುತ್ತಿರುವ ಚುನಾವಣೆಯಲ್ಲಿ ಕಾರ್ಯರೂಪಕ್ಕೆ ಬರಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಜನಾರ್ಧನ ಪೂಜಾರಿ ಹೇಳಿದರು. ಪಕ್ಷಕ್ಕೆ ಬರುವವರು ಹೊಸಬರಿರಲಿ ಹಳಬರಿರಲಿ ನಾವು ಆದರಿಸುತ್ತೇವೆ. ಈಗಿರುವವರಿಗೆ ಸಿಗುತ್ತಿರುವ ಗೌರವ, ಸ್ಥಾನ ಅವರಿಗೂ ಕೊಡುತ್ತೇವೆ ಎಂದು ಪೂಜಾರಿ ಹೇಳಿದರು.

ಎಸ್‌. ಬಂಗಾರಪ್ಪ ಅವರ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಪೂಜಾರಿ- ಆ ಬಗ್ಗೆ ಯಾವುದೇ ಪ್ರಶ್ನೆಗಳನ್ನು ಕೇಳಬೇಡಿ. ನಾನು ಅದಕ್ಕೆ ಉತ್ತರಿಸಲೊಲ್ಲೆ. ಬಿಜೆಪಿಯು ಅನೇಕ ನಾಯಕರನ್ನು ತಟಸ್ಥವಾಗಿಸಿದೆ. ಉದಾಹರಣೆಗೆ ರಾಜಶೇಖರ ಮೂರ್ತಿ ಮತ್ತು ರಾಮಕೃಷ್ಣ ಹೆಗಡೆ ಎಂದ ಪೂಜಾರಿ, ಬಿಜೆಪಿಯು ಬಂಗಾರಪ್ಪನವರನ್ನು ಮುಗಿಸುವುವುದರಲ್ಲಿ ಸಂಶಯವೇ ಇಲ್ಲ ಎಂದರು.

(ಪಿಟಿಐ)

ಮುಖಪುಟ / ವಾರ್ತೆಗಳು

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+