ಮಾಂಸಾಹಾರ ತ್ಯಜಿಸಿ ಸಸ್ಯಾಹಾರಿಯಾದ ದೊಣ್ಣೆಗುಡ್ಡ ದುರ್ಗಮ್ಮ!

ಮಾಂಸಾಹಾರ ತ್ಯಜಿಸಿ ಸಸ್ಯಾಹಾರಿಯಾದ ದೊಣ್ಣೆಗುಡ್ಡ ದುರ್ಗಮ್ಮ!
ದುರ್ಗಮ್ಮ ಹಾಗೂ ದುರ್ಗಮ್ಮನ ಭಕುತರಂಥವರ ಸಂತತಿ ಹೆಚ್ಚಲಿ

ಕೊಪ್ಪಳ : ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ದೊಣ್ಣೆಗುಡ್ಡದ ಶಕ್ತಿ ದೇವತೆ ದುರ್ಗಮ್ಮ ಈಗ ಅಪ್ಪಟ ಸಸ್ಯಾಹಾರಿ. ಎಲ್ಲವೂ ಭಕ್ತರ ಮಹಿಮೆ.

ದುರ್ಗಮ್ಮ ದೇವಿಯ ವಾರ್ಷಿಕ ಜಾತ್ರೆಯೆಂದರೆ ಅದು ರಕ್ತ ಮಾಂಸ ಇಟ್ಟಾಡುವ ಸಮಯ. ಸಾವಿರಾರು ಕುರಿಕೋಳಿ ಕೋಣಗಳು ದುರ್ಗಮ್ಮ ದೇವಿಯ ಹೆಸರಿನಲ್ಲಿ ಬಲಿಯಾಗುವುದು ಈವರೆಗೂ ನಡೆದುಕೊಂಡು ಬಂದ ಸಂಪ್ರದಾಯ. ಆದರೆ ಇತ್ತೀಚೆಗೆ (ಫೆ.22) ನಡೆದ ದುರ್ಗಮ್ಮ ದೇವಿ ಜಾತ್ರೆಯಲ್ಲಿ ಬೇರೆಯದೇ ಚಿತ್ರಗಳು. ಕುರಿಯೂ ಇಲ್ಲ , ಕೋಳಿಯೂ ಇಲ್ಲ- ದುರ್ಗಮ್ಮ ದೇವಿಗೆ ಸಂದದ್ದು ತೆಂಗಿನಕಾಯಿ, ಹಣ್ಣು , ಹೂ ಮಾತ್ರ !

ದೇವಿಯ ಹೆಸರಿನಲ್ಲಿ ನಡೆಯುವ ಪ್ರಾಣಿಬಲಿ ತಡೆಯಬೇಕೆನ್ನುವ ಕೆಲವು ಸಂಘಟನೆಗಳ ಪ್ರಯತ್ನ ಯಶಸ್ವಿಯಾಗಿದೆ. ಪ್ರಾಣಿ ಬಲಿ ವಿರೋಧಿ ಆಂದೋಲನ, ಹುಬ್ಬಳ್ಳಿ ಪಿಂಜರಾಪೋಲು ಸಂಸ್ಥೆ , ರಾಜ್ಯ ಪ್ರಾಣಿ ಕಲ್ಯಾಣ ಸಂಸ್ಥೆ , ರಾಷ್ಟ್ರೀಯ ಬಸವದಳ, ಎಬಿವಿಪಿ ಹಾಗೂ ಇನ್ನಿತರ ಸಂಸ್ಥೆಗಳು ಪ್ರಾಣಿ ಬಲಿಯ ಮೌಢ್ಯವನ್ನು ಗ್ರಾಮದ ಜನತೆಗೆ ಮನದಟ್ಟು ಮಾಡಿಸಲು ಯಶಸ್ವಿಯಾಗಿವೆ.

ಕೊಪ್ಪಳ ಜಿಲ್ಲಾಡಳಿತ ಹಾಗೂ ಜೈನಧರ್ಮದ ಬಂಧುಗಳು ಕೂಡ ಪ್ರಾಣಿ ಬಲಿ ತಡೆಯುವ ಆಂದೋಲನದಲ್ಲಿ ಭಾಗಿಯಾಗಿದ್ದರು. ಇದರಿಂದಾಗಿ ಈ ಬಾರಿ ಬಲಿಪೀಠದಲ್ಲಿ ಕಂಡುಬಂದದ್ದು ತೆಂಗಿನಕಾಯಿಗಳ ರಾಶಿ ಮಾತ್ರ. ಭಕ್ತರ ಬದಲಾದ ವರ್ತನೆ ಕಂಡು ದುರ್ಗಮ್ಮ ದೇವಿಗೂ ಸಂತೋಷವಾಗಿರಬೇಕು.

ದಾವಣಗೆರೆಯಲ್ಲಿ ರಕ್ತದೋಕುಳಿ :

ದೊಣ್ಣೆಗುಡ್ಡದ ದುರ್ಗಮ್ಮ ಮಾಂಸಾಹಾರ ತ್ಯಜಿಸಿ ಮೇಲ್ಪಂಕ್ತಿಯಾದರೆ, ದಾವಣಗೆರೆಯ ದುಗ್ಗಮ್ಮ ದೇವಿ ಜಾತ್ರೆಯಲ್ಲಿ (ಮಾ.4) ರಕ್ತದ ಕೋಡಿಯೇ ಹರಿದಿದೆ.

30 ಸಾವಿರಕ್ಕೂ ಹೆಚ್ಚು ಕುರಿ, 50 ಸಾವಿರಕ್ಕೂ ಹೆಚ್ಚು ಕೋಳಿ ಹಾಗೂ ಐದಾರು ಕೋಣಗಳನ್ನು ದುಗ್ಗಮ್ಮ ದೇವಿ ಹೆಸರಲ್ಲಿ ಬಲಿ ಕೊಡಲಾಗಿದೆಯಂತೆ !

ಎಲ್ಲ ಊರುಗಳ ಶಕ್ತಿದೇವತೆಯರೂ ಸಸ್ಯಾಹಾರಿಗಳಾದರೆ ಎಷ್ಟು ಚೆಂದ, ಅಲ್ಲವೇ ?

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+