Get Updates
Get notified of breaking news, exclusive insights, and must-see stories!

ವಾಜಪೇಯಿ ನೈಜ ದೇಶಪ್ರೇಮಿ -ಚಿತ್ರದುರ್ಗ ಶ್ರೀಗಳ ಬಣ್ಣನೆ

ವಾಜಪೇಯಿ ನೈಜ ದೇಶಪ್ರೇಮಿ -ಚಿತ್ರದುರ್ಗ ಶ್ರೀಗಳ ಬಣ್ಣನೆ
ಸಾಮರಸ್ಯವನ್ನು ಹಾಳು ಮಾಡುವ ಪ್ರಯತ್ನಗಳಲ್ಲಿ ತೊಡಗದಂತೆ ಪಕ್ಷಗಳಿಗೆ ಕರೆ

ದಾವಣಗೆರೆ : ಪ್ರಧಾನಿ ವಾಜಪೇಯಿ ಅವರೊಬ್ಬ ಅಪರೂಪದ ದೇಶಪ್ರೇಮಿ ಎಂದು ಚಿತ್ರದುರ್ಗ ಮಠದ ಶ್ರೀ ಶಿವಮೂರ್ತಿ ಮುರುಘರಾಜೇಂದ್ರ ಶರಣರು ಬಣ್ಣಿಸಿದ್ದಾರೆ.

ದೇಶದ ಬಾಹ್ಯ ಬಿಕ್ಕಟ್ಟುಗಳು ಹಾಗೂ ಆಂತರಿಕ ಸಮಸ್ಯೆಗಳನ್ನು ಪರಿಹರಿಸುವಲ್ಲಿ ವಾಜಪೇಯಿ ನೆರವಾಗಿದ್ದಾರೆ ಎಂದು ಶಿವಮೂರ್ತಿ ಶರಣರು ಹೇಳಿದರು. ಜಯದೇವ ಮುರುಘರಾಜೇಂದ್ರ ಮಹಾಸ್ವಾಮಿಗಳ ಸ್ಮರಣಾರ್ಥ ಮಾ.4ರಂದು ದಾವಣಗೆರೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಶರಣರು ಮಾತನಾಡುತ್ತಿದ್ದರು.

ವಾಜಪೇಯಿ ಅವರೊಬ್ಬ ನೈಜ ದೇಶಪ್ರೇಮಿ. ದುರಾದೃಷ್ಟವಶಾತ್‌ ಅವರು ಪ್ರತಿನಿಧಿಸುತ್ತಿರುವ ಪಕ್ಷ ಮೂಲಭೂತವಾದದ ನೆಲೆಯಾಗಿದೆ. ಆದರೂ ದೇಶದ ಆಂತರಿಕ ಹಾಗೂ ಬಾಹ್ಯ ಸಮಸ್ಯೆಗಳನ್ನು ಪರಿಹರಿಸುವಲ್ಲಿ ವಾಜಪೇಯಿ ಯಶಸ್ವಿಯಾಗಿದ್ದಾರೆ. ಪ್ರತಿಯಾಬ್ಬರೂ ವಾಜಪೇಯಿ ಅವರಂತೆ ಕೆಲಸವನ್ನು ಮಾಡಿದರೆ ಬಲಾಢ್ಯ ಭಾರತ ಮತ್ತು ರಾಷ್ಟ್ರೀಯ ಧರ್ಮವನ್ನು ರೂಪಿಸಬಹುದು ಎಂದು ಶಿವಮೂರ್ತಿ ಶರಣರು ಅಭಿಪ್ರಾಯಪಟ್ಟರು.

ಜನತೆಯಲ್ಲಿನ ಮತೀಯ ಭಾವನೆಗಳನ್ನು ಕೆರಳಿಸುವ ಮೂಲಕ ಅಧಿಕಾರಕ್ಕೆ ಬರಲು ಯಾವುದೇ ಪಕ್ಷ ಪ್ರಯತ್ನಿಸಬಾರದು. ಸಮಾಜದಲ್ಲಿನ ಸಾಮರಸ್ಯವನ್ನು ಹಾಳು ಮಾಡುವ ಪ್ರಯತ್ನಗಳಲ್ಲಿ ರಾಜಕೀಯ ಪಕ್ಷಗಳು ತೊಡಗಬಾರದು ಎಂದು ಸ್ವಾಮೀಜಿ ಕರೆ ನೀಡಿದರು.

ಭಾರತೀಯರಾದ ನಾವು ಅಹಿಂಸೆ, ಶಾಂತಿ ಹಾಗೂ ಸೌಹಾರ್ದತೆಯ ಜಾಗತಿಕ ಪ್ರತಿನಿಧಿಗಳಾಗಿದ್ದೇವೆ. ಬುದ್ಧ, ಬಸವ, ಗಾಂಧಿ ಮುಂತಾದ ನಾಯಕರು ಸಮಾಜದ ವಿವಿಧ ವರ್ಗಗಳಲ್ಲಿ ಸಮಾನತೆ ಮತ್ತು ಸಾಮರಸ್ಯ ಮೂಡಿಸುವ ನಿಟ್ಟಿನಲ್ಲಿ ಕೆಲಸ ಮಾಡಿದರು ಎಂದು ಶಿವಮೂರ್ತಿ ಮರುಘರಾಜೇಂದ್ರ ಶರಣರು ಹೇಳಿದರು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+