ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಳ್ಳಾರಿ : ಬರದ ಹಳ್ಳಿಗೆ ಅಕ್ಕಿ ಹಂಚಿದ ಬೆಂಗಳೂರ ಕನ್ನಡ ಬಳಗ

By Staff
|
Google Oneindia Kannada News

ಬಳ್ಳಾರಿ : ಬರದ ಹಳ್ಳಿಗೆ ಅಕ್ಕಿ ಹಂಚಿದ ಬೆಂಗಳೂರ ಕನ್ನಡ ಬಳಗ
ಬಳ್ಳಾರಿ ಜಿಲ್ಲೆಯ ಹೊನ್ನಳ್ಳಿ, ಹೊನ್ನಳ್ಳಿತಾಂಡ ಮತ್ತು ಹಾಲದಹಳ್ಳಿಗಳಲ್ಲಿ ಅಕ್ಕಿ ವಿತರಣೆ

ಬಳ್ಳಾರಿ: ಬೆಂಗಳೂರಿನ ಕನ್ನಡ ಗೆಳೆಯರ ಬಳಗ 8000 ಕೆಜಿ ಅಕ್ಕಿ ಸಂಗ್ರಹಿಸಿ ಬಳ್ಳಾರಿ ಜಿಲ್ಲೆಯ ಹೊನ್ನಳ್ಳಿ, ಹೊನ್ನಳ್ಳಿತಾಂಡ ಮತ್ತು ಹಾಲದಹಳ್ಳಿಗಳಲ್ಲಿ ವಿತರಣೆ ಮಾಡಿದೆ. ಅಕ್ಕಿ ವಿತರಣಾ ಕಾರ್ಯಕ್ಕೆ ಸ್ಥಳೀಯ ವೀರಶೈವ ಕಾಲೇಜಿನ ಎನ್‌ಎಸ್‌ಎಸ್‌ ವಿದ್ಯಾರ್ಥಿಗಳು ಸಹಕರಿಸಿದರು.

ರಾಜ್ಯದಲ್ಲಿನ ತೀವ್ರ ಬರಗಾಲದ ಹಿನ್ನೆಲೆಯಲ್ಲಿ ಬೆಂಗಳೂರಿನ ಕನ್ನಡ ಬಳಗವು ಅಕ್ಕಿಯನ್ನು ಸಂಗ್ರಹಿಸಿ, ಹಳ್ಳಿಗಳಲ್ಲಿನ ಅವಶ್ಯಕತೆಗೆ ಸ್ಪಂದಿಸಿ ವಿತರಿಸಿದೆ. ಈ ಬಳಗದ ಮಾನವೀಯ ಕಾರ್ಯವೈಖರಿಯು ಉಳಿದ ಸಂಘ ಸಂಸ್ಥೆಗಳಿಗೆ ಮಾದರಿಯಾಗಲಿ, ಉಳಿದ ಜನ-ಸಂಘಟನೆಗಳೂ ಬರ ಪೀಡಿತ ಜನತೆಗೆ ಸ್ಪಂದಿಸುವಂತಾಗಲಿ ಎಂದು ಅಕ್ಕಿ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಂದರ್ಭದಲ್ಲಿ ಮಾತನಾಡಿದ ಖ್ಯಾತ ಇತಿಹಾಸಕಾರ ಡಾ.ಎಂ.ಚಿದಾನಂದ ಮೂರ್ತಿ ಆಶಿಸಿದರು.

ಇಂತಹುದೇ ಅಕ್ಕಿ ವಿತರಣೆ ಕಾರ್ಯಕ್ರಮವೊಂದು ಫೆ.8 ರಂದು ಮಾಗಡಿ ತಾಲ್ಲೂಕಿನಲ್ಲಿ ಜರುಗಿದೆ. ಅಲ್ಲಿ ಅಕ್ಕಿ ಮತ್ತು ಆಹಾರ ಧಾನ್ಯ ವಿತರಿಸಲಾಯಿತು ಎಂದು ಚಿಮೂ ಹೇಳಿದರು.

ರಾಜ್ಯೋತ್ಸವದ ದಿನ ಅಕ್ಕಿಯನ್ನು ಸಂಗ್ರಹಿಸಿದೆವು. ಸ್ವಯಂ ಸ್ಫೂರ್ತಿಯಿಂದ ದಾನ ಮಾಡುವಂತೆ ಕೇಳಿಕೊಂಡೆವು. ಇದರಿಂದ ಬರಪೀಡಿತ ಪ್ರದೇಶದ ಜನತೆ ಪ್ರೀತಿಯಿಂದ ವಂಚಿತರಾಗಿಲ್ಲ ಎಂದು ತಿಳಿದುಕೊಳ್ಳಬೇಕಾಗಿದೆ ಎಂದು ಗೆಳೆಯರ ಬಳಗದ ಸಂಚಾಲಕ ಆರ್‌ಎಸ್‌ ಚಂದ್ರಶೇಖರ್‌ ಹೇಳಿದರು. ಈ ಸಂದರ್ಭದಲ್ಲಿ ಅಕ್ಕಿ ವಿತರಿಸಲು ಸಹಾಯ ಮಾಡಿದ ಕಾಲೇಜಿನ ಪ್ರಾಂಶುಪಾಲೆ ಪುಷ್ಪ ಹೀರೆಮಠ ಮತ್ತು ಎನ್‌ಎಸ್‌ಎಸ್‌ ಬಳಗಕ್ಕೆ ಚಂದ್ರಶೇಖರ್‌ ಕೃತಜ್ಞತೆ ಸಲ್ಲಿಸಿದರು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X