ಕಾಮುಕ ತಂದೆಗೆ ಬಲಿಯಾದ ಹುಡುಗಿಯರಿಗೆ ನಾಲ್ಕು ಮಕ್ಕಳು
ಕಾಮುಕ ತಂದೆಗೆ ಬಲಿಯಾದ ಹುಡುಗಿಯರಿಗೆ ನಾಲ್ಕು ಮಕ್ಕಳು
ಎನ್‌ಡಿ ಟೀವಿಯಲ್ಲಿ ಪ್ರಕಟವಾದ ಈ ಅಮಾನವೀಯ ವರದಿಯನ್ನು ಓದಿ....
ಅವನ ಹೆಸರು ಮಹಮ್ಮದ್ ಹಸೀಂ. ಲಕ್ನೋ ನಗರದ ವಾರಿkುರ್‌ಗಂಜ್‌ನ ನಿವಾಸಿ. ಆ ಮನೆಯೇ ಹಸೀಮ್‌ನ ಇಬ್ಬರು ಹೆಣ್ಣು ಮಕ್ಕಳಿಗೂ ಅವರ 8 ನೇ ವಯಸ್ಸಿನಿಂದಲೇ ಲೈಂಗಿಕ ಶೋಷಣೆಯ ನರಕವಾಗಿತ್ತು. ಸ್ವಂತ ತಂದೆಯೇ ಆ ಹೆಣ್ಣು ಮಕ್ಕಳಿಗೆ ದುಃಸ್ವಪ್ನವಾಗಿದ್ದ. ಕಾಮುಕ ತಂದೆಯಿಂದಲೇ ಇಬ್ಬರು ಮಕ್ಕಳು, ನಾಲ್ಕು ಮಕ್ಕಳ ತಾಯಿಯೆನಿಸಿದ್ದರು.
ಹಿರಿಯ ಮಗಳಾದ ಸುರಯ್ಯ ಜೊತೆ ಪ್ರಾರಂಭವಾದ ಈ ಸಂಬಂಧ ಚಿಕ್ಕವಳನ್ನೂ ಬಿಡಲಿಲ್ಲ. ಆ ಹುಡುಗಿಯರಿಗೆ ಅವರ ತಂದೆಯಿಂದಲೇ ನಾಲ್ಕು ಮಕ್ಕಳಾಗಿವೆ ಎಂದು ಮಹಮದ್ ಹಸೀಂನ ಹೆಂಡತಿ ತನ್ನ ಗಂಡನ ಕೃತ್ಯವನ್ನು ಹೇಸುತ್ತ ಪೊಲೀಸರಿಗೆ ತಿಳಿಸಿದ್ದಾಳೆ.
ಹಸೀಂನ ಹೇಸಿಗೆ ಕೆಲಸ ದಿನವೂ ನಡೆಯುತ್ತಿತ್ತು. ಅವನನ್ನು ವಿರೋಧಿಸಲು ಬಂದರೆ ಸಿಗುವುದು ಹೊಡೆತ ಮತ್ತು ಉಪವಾಸ. ಬಹಳ ವರ್ಷಗಳಿಂದಲೂ ಹಸೀಮ್‌ನ ಇಬ್ಬರು ಹೆಣ್ಣುಮಕ್ಕಳೂ ಎಲ್ಲ ತಂದೆಯರ ಹಣೆಬರಹವೇ ಇಷ್ಟು ಎಂದು ತಿಳಿದಿದ್ದರು. ಇದು ಎಲ್ಲರ ಮನೆಯಲ್ಲೂ ನಡೆಯುವಂತಹದು ಎಂದೇ ನಾನು ತಿಳಿದಿದ್ದೆ. ನಮ್ಮ ತಂದೆ ನಮ್ಮ ಮೇಲೆ ಬಲಾತ್ಕಾರ ನಡೆಸುವಾಗಲೂ ಇದು ಅಪರಾಧವೆಂದು ನಾನರಿತಿರಲಿಲ್ಲ ಎಂದು ಹಸೀಂನ ಕಿರಿಯ ಮಗಳು ಸಾಫಿಯಾ ಹೇಳುತ್ತಾಳೆ.
ಇಡೀ ಕೇರಿಯವರಿಗೂ ಈ ವಿಷಯ ತಿಳಿದಿದ್ದರೂ ನತದೃಷ್ಟ ಬಾಲಕಿಯರ ನೆರವಿಗೆ ಯಾರೂ ಮುಂದಾಗಿಲ್ಲ . ಆ ಹುಡುಗಿಯರಿಗಿರುವ ಚಿಕ್ಕ ಮಕ್ಕಳ ಬಗ್ಗೆ ಸುತ್ತಮುತ್ತಲ ಜನರಾಡುವ ಮಾತು ಕೇಳಲಾಗದೇ ಹುಡುಗಿಯರು ಮನೆಯೆಂಬ ಕೂಪದಿಂದ ಹೊರ ಬರುತ್ತಲೇ ಇರಲಿಲ್ಲ.
ಮಿತಿ ಮೀರಿದಾಗ, ಮಾತು ಹೊರ ಬಂತು
ಅಂತಿಮವಾಗಿ ತಂದೆಯ ಕಿರುಕುಳ ತಾಳಲಾರದೇ ಕಿರಿಯ ಮಗಳಾದ ಸಾಫಿಯಾ ಹತ್ತಿರದ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾಳೆ. ತಕ್ಷಣವೇ ಪೊಲೀಸ್ ಅಧಿಕಾರಿಗಳು ಮುಂದಿನ ಕ್ರಮ ಕೈಗೊಂಡು ಮಹಮದ್ ಹಸೀಂನನ್ನು ಬಂಧಿಸಿದ್ದಾರೆ. ಸುದ್ದಿ ತಿಳಿದ ಇಡೀ ನಗರವೇ ಕಂಗಾಲಾಗಿಬಿಟ್ಟಿದೆ. ಹಲವಾರು ಸಂಘಸಂಸ್ಥೆಗಳು ಮುಂದೆ ಬಂದು ಯಾವುದೇ ಕಾರಣಕ್ಕೂ ಹಸೀಂಗೆ ಜಾಮೀನು ಕೊಡಬಾರದೆಂದು ಒತ್ತಾಯಿಸಿವೆ.
ಕೋರ್ಟ್ ಮೆಟ್ಟಿಲು ಹತ್ತಿದ ಈ ಮಹಮದ್ ಹಸೀಂ ಅಲ್ಲಿ ಹೇಳಿದ್ದೇನು ಗೊತ್ತೇ? ನಾನು ಬಲಾತ್ಕಾರ ಮಾಡಿರಬಹುದು. ಆದರೆ ಈಕೆ ನನ್ನ ಹೆಂಡತಿಯೇ ಅಲ್ಲ , ಅವರು ನನ್ನ ಮಕ್ಕಳೇ ಅಲ್ಲ .
ಇಂಥವರಿಗೆ ಏನನ್ನೋದು ?
ಮುಖಪುಟ / ವಾಟ್ಸ್ ಹಾಟ್












Click it and Unblock the Notifications