ಟಿಕೆಟ್ ಹಂಚಿಕೆಯಿಂದ ಡಿಕೇಶಿ ದೂರವಿಡಿ -ಎಚ್. ವಿಶ್ವನಾಥ್
ಟಿಕೆಟ್ ಹಂಚಿಕೆಯಿಂದ ಡಿಕೇಶಿ ದೂರವಿಡಿ -ಎಚ್. ವಿಶ್ವನಾಥ್
ಕೃಷ್ಣ ಸ್ವಾತಂತ್ರೋತ್ತರ ಭಾರತದ ಒಳ್ಳೆಯ ನಾಯಕ...
ಸರ್ವಾಧಿಕಾರಿಯಂತೆ ವರ್ತಿಸುವ ನಗರಾಭಿವೃದ್ಧಿ ಸಚಿವ ಡಿಕೆ ಶಿವಕುಮಾರ ಅವರನ್ನು ಟಿಕೆಟ್ ಹಂಚಿಕೆ ಕಾರ್ಯದಿಂದ ಹೊರಗಿಡಬೇಕು. ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯು ಟಿಕೆಟ್ ಹಂಚಿಕೆಯ ಸಮಸ್ಯೆ ಬಗೆಹರಿಸಲು ಶಕ್ತಿ ಮೀರಿ ಕೆಲಸ ಮಾಡುತ್ತಿದೆ. ಈ ಪ್ರಕ್ರಿಯೆಯಿಂದ ಶಿವಕುಮಾರ್ ಅವರನ್ನು ದೂರವಿಡಬೇಕು ಎಂದು ಸಹಕಾರಿ ಸಚಿವ ಎಚ್.ವಿಶ್ವನಾಥ್ ಗುರುವಾರ ಸುದ್ದಿಗಾರರಿಗೆ ತಿಳಿಸಿದರು.
ಕೆಲವು ತಿಂಗಳಿಂದ ಶಿವಕುಮಾರ್ ಕಾರ್ಯವೈಖರಿಯನ್ನು ನಾನು ಇಷ್ಟಪಡುತ್ತಿಲ್ಲ. ಈ ಕುರಿತು ಹೈಕಮಾಂಡ್ ಟಿಕೆಟ್ ಹಂಚಿಕೆ ಮೇಲ್ವಿಚಾರಕ ಸಮಿತಿಗೆ ದೂರು ನೀಡುತ್ತೇನೆ ಎಂದು ಹಿಂದುಳಿದ ವರ್ಗದ ಪ್ರಬಲ ನಾಯಕರಾದ ವಿಶ್ವನಾಥ್ ಹೇಳಿದರು. ಪಕ್ಷದಲ್ಲಿ ಕೆಲವರು ಪುಡಿ ನಾಯಕರು ಬೆಳೆದಿದ್ದಾರೆ. ಅವರ ಬಗ್ಗೆ ಪಕ್ಷ ಎಚ್ಚರದಿಂದಿರಬೇಕು. ಇಲ್ಲದಿದ್ದರೆ ಪಕ್ಷಕ್ಕೆ ಹಾನಿಯುಂಟಾಗುತ್ತದೆ ಎಂದು ವಿಶ್ವನಾಥ್ ಎಚ್ಚರಿಸಿದರು.
ಕೃಷ್ಣ ಅವರ ನಾಯಕತ್ವದ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ ವಿಶ್ವನಾಥ್- ಕಳೆದ ನಾಲ್ಕು ವರ್ಷಗಳಿಂದ ಅವರು ನಮ್ಮ ನಾಯಕ. ಸ್ವಾತಂತ್ರೋತ್ತರ ಭಾರತದಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸಿದ ನಾಯಕ ಎಂದು ಬಣ್ಣಿಸಿದರು.
ಗೆಲ್ಲುವ ಸಾಮರ್ಥ್ಯದೊಂದಿಗೆ ಸಾಮಾಜಿಕ ನ್ಯಾಯವನ್ನೂ ಟಿಕೆಟ್ ಹಂಚಿಕೆ ಸಂದರ್ಭದಲ್ಲಿ ಕೆಪಿಸಿಸಿ ಪರಿಗಣಿಸಬೇಕು ಎಂದು ವಿಶ್ವನಾಥ್ ಹೇಳಿದರು. ಗೆಲ್ಲುವ ಸಾಮರ್ಥ್ಯವಿದ್ದವರಿಗೆ ಮಾತ್ರ ಟಿಕೆಟ್ ಎನ್ನುವ ಮುಖ್ಯಮಂತ್ರಿ ಎಸ್ಸೆಂ.ಕೃಷ್ಣ ಅವರ ಹೇಳಿಕೆಗೆ ವಿಶ್ವನಾಥ್ ಅವರ ಪ್ರತಿಕ್ರಿಯೆಯಿದು.
ಬಂಗಾರಪ್ಪನವರ ಕುರಿತು ಅವರು ‘ಸಾಂಪ್ರದಾಯಿಕ ಅಸುಂತಷ್ಟ’ರು ಎಂದು ಬಣ್ಣಿಸಿದ ವಿಶ್ವನಾಥ್- ಬಂಗಾರಪ್ಪನವರ ನಿರ್ಗಮನದಿಂದಾಗಿ ಪಕ್ಷಕ್ಕೆ ಹಾನಿ ಉಂಟಾಗುವುದಿಲ್ಲ ಎಂದು ನಾನು ಹೇಳಲಾರೆ. ಆದರೆ ಈ ಕೊರತೆಯನ್ನು ತುಂಬಲು ಪಕ್ಷ ತಂತ್ರಗಾರಿಕೆ ರೂಪಿಸಲಿದೆ ಎಂದರು.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications