ಅತ್ತೆಗೆ ‘ಕೈ’ಕೊಟ್ಟು ಕಾಂಗ್ರೆಸ್ ‘ಕೈ’ ಹಿಡಿದ ನಾಗಪ್ಪನವರ ಅಳಿಯ
ಅತ್ತೆಗೆ ‘ಕೈ’ಕೊಟ್ಟು ಕಾಂಗ್ರೆಸ್ ‘ಕೈ’ ಹಿಡಿದ ನಾಗಪ್ಪನವರ ಅಳಿಯ
ವೀರಪ್ಪನ್ ಪ್ರಕರಣದಲ್ಲಿ ಸರ್ಕಾರದ ಪಾತ್ರಕ್ಕೆ ಕಿರಣ್ ತೃಪ್ತಿ
ಕೃಷ್ಣ ಸರಕಾರ ನಾಗಪ್ಪನವರನ್ನು ಒತ್ತೆಯಿಂದ ಬಿಡಿಸಲು ಪ್ರಯತ್ನ ಪಟ್ಟಿತ್ತು. ದುರಾದೃಷ್ಟ ವಶಾತ್ ಆ ಪ್ರಯತ್ನ ಫಲಕಾರಿಯಾಗದೆ, ನಾಗಪ್ಪ ಚೆಂಗಾಡಿಯಲ್ಲಿ ಹೆಣವಾಗಿ ದೊರೆತರು. ಪ್ರಕರಣದ ಕುರಿತಂತೆ ಸರ್ಕಾರ ಹಾಗೂ ನಮ್ಮ ನಡುವೆ ಸಂವಹನದ ಕೊರತೆಯಿತ್ತು ಎಂದು ಕಾಂಗ್ರೆಸ್‌ಗೆ ಸೇರ್ಪಡೆಯಾದ ಸಂದರ್ಭದಲ್ಲಿ ಕಿರಣ್ ಹೇಳಿದರು.
ನಾಗಪ್ಪನವರ ಹತ್ಯೆ ಪ್ರಕರಣವನ್ನು ಸಿಬಿಐ ತನಿಖೆಗೆ ಒಳಪಡಿಸಬೇಕೆಂಬ ಮನವಿಯನ್ನು ಹೈಕೋರ್ಟ್‌ನಿಂದ ಹಿಂತೆಗೆಯುವುದರ ಕುರಿತು ಆಲೋಚಿಸಿ ನಿರ್ಧಾರ ಕೈಗೊಳ್ಳುವೆ. ನಾವು ಕಳೆದ ಒಂದೂವರೆ ವರ್ಷದಲ್ಲಿ ಸತ್ಯದ ಸಮೀಪ ಬರಲು ಪ್ರಯತ್ನಿಸಿದ್ದೇವೆ. ಇತ್ತೀಚಿನ ದಿನಗಳಲ್ಲಿ ಪ್ರಕರಣ ಕುರಿತು ಮುಖ್ಯಮಂತ್ರಿ ಕೃಷ್ಣ ಅವರೊಂದಿಗೆ ಚರ್ಚೆ ಮಾಡಿರುವುದಾಗಿ ತಿಳಿಸಿದರು.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications