ಅಸ್ನೋಟಿಕರ್ ಹತ್ಯೆಆರೋಪಿ ದಿಲೀಪ್ ಕೊಲೆ;ಕಾರವಾರ ತತ್ತರ
ಅಸ್ನೋಟಿಕರ್ ಹತ್ಯೆಆರೋಪಿ ದಿಲೀಪ್ ಕೊಲೆ;ಕಾರವಾರ ತತ್ತರ
‘ಹೊಟೇಲ್ ಕಾರವಾರ’ ದ ಮಾಲೀಕನಾದ ಉದಯ ಶೆಟ್ಟಿ ಬಂಧನ
‘ಹೊಟೇಲ್ ಕಾರವಾರ’ ದ ಮಾಲೀಕನಾದ ಉದಯ ಶೆಟ್ಟಿ (42) ಮತ್ತು ಮೇಲ್ವಿಚಾರಕನಾದ ಚಂದ್ರು(24) ಅವರನ್ನು ದಿಲೀಪ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದೆ. ಆರೋಪಿಗಳು ಪೊಲೀಸರಿಗೆ ಸ್ವತಃ ಶರಣಾಗಿದ್ದು , ಕೊಲೆ ಮಾಡಿದುದನ್ನು ಒಪ್ಪಿಕೊಂಡಿದ್ದಾರೆ.
ಮಾರುತಿ ವ್ಯಾನನ್ನು ದಿಲೀಪ್ ಮೇಲೆ ಹಾಯಿಸಿ ಕೊಲೆ ಮಾಡಿರುವುದಾಗಿ ಆರೋಪಿಗಳು ತಿಳಿಸಿದ್ದಾರೆ. ವ್ಯಾನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದು, ದಿಲೀಪ್ ಕೊಲೆ ಹೇಗಾಗಿದೆಯೆಂದು ಪರಿಣತ ತನಿಖಾಧಿಕಾರಿಗಳ ಸಹಾಯದೊಂದಿಗೆ ಸೂಕ್ಷ್ಮವಾಗಿ ತನಿಖೆ ನಡೆಸಲಿದ್ದೇವೆ ಎಂದು ಉತ್ತರ ಕನ್ನಡ ಪೊಲೀಸ್ ನಿರ್ದೇಶಕ ಸೌಮೇಂದು ಮುಖರ್ಜಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಅಸ್ನೋಟಿಕರ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉದಯ ಶೆಟ್ಟಿ ಪ್ರತ್ಯಕ್ಷ ಸಾಕ್ಷಿಯಾಗಿದ್ದು , ಈತನಿಗೆ ದಿಲೀಪ್ ನಾಯ್ಕ ಬೆದರಿಕೆ ಒಡ್ಡಿದ್ದ ಎನ್ನಲಾಗಿದೆ. ಈ ಬೆದರಿಕೆಯ ಕಾರಣದಿಂದಲೇ ದಿಲೀಪ್ ನಾಯ್ಕನನ್ನು ಕೊಂದಿರುವುದಾಗಿ ಉದಯ ಶೆಟ್ಟಿ ತಿಳಿಸಿರುವುದಾಗಿ ಪೊಲೀಸ್ ಮೂಲಗಳೂ ತಿಳಿಸಿವೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications