ಪ್ರಧಾನಿ ಸಮ್ಮುಖದಲ್ಲಿ ಬಂಗಾರಪ್ಪ ಬಿಜೆಪಿಗೆ ಅಧಿಕೃತ ಸೇರ್ಪಡೆ
ಪ್ರಧಾನಿ ಸಮ್ಮುಖದಲ್ಲಿ ಬಂಗಾರಪ್ಪ ಬಿಜೆಪಿಗೆ ಅಧಿಕೃತ ಸೇರ್ಪಡೆ
ಬಂಗಾರಪ್ಪನವರ ನಿರ್ಗಮನದಿಂದ ಹಾನಿಯೇನೂ ಇಲ್ಲ -ಕೃಷ್ಣ
ಬಿಜೆಪಿಗೆ ಸೇರುವ ಮುನ್ನ ಪ್ರಧಾನಿ ವಾಜಪೇಯಿ ಅವರನ್ನು ಭೇಟಿ ಮಾಡಿದ ಬಂಗಾರಪ್ಪ , ರಾಜಕೀಯ ಬೆಳವಣಿಗೆಗಳ ಕುರಿತು ಚರ್ಚಿಸಿದರು. ಪ್ರಧಾನಿ ಅವರ ನಿವಾಸದಲ್ಲಿ ಜರುಗಿದ ಈ ಭೇಟಿಯ ಸಂದರ್ಭದಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ವೆಂಕಯ್ಯ ನಾಯ್ಡು ಹಾಗೂ ರಾಜ್ಯಾಧ್ಯಕ್ಷ ಅನಂತಕುಮಾರ್ ಹಾಜರಿದ್ದರು.
ಬಿಜೆಪಿಗೆ ಬಂಗಾರಪ್ಪನವರ ಸೇರ್ಪಡೆ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಯಡಿಯೂರಪ್ಪ , ಜಗದೀಶ್ ಶೆಟ್ಟರ್, ಬಂಗಾರಪ್ಪನವರ ಪುತ್ರ ಮಧು ಬಂಗಾರಪ್ಪ ಮುಂತಾದವರಿದ್ದರು.
ಬಂಗಾರಪ್ಪನವರಿಂದ ಕಾಂಗ್ರೆಸ್‌ಗೇನೂ ಧಕ್ಕೆಯಿಲ್ಲ -ಕೃಷ್ಣ
ಬಂಗಾರಪ್ಪನವರು ಬಿಜೆಪಿ ಸೇರಿರುವುದರಿಂದ ಕಾಂಗ್ರೆಸ್ ಪಕ್ಷಕ್ಕೆ ಯಾವುದೇ ನಷ್ಟ ಉಂಟಾಗಿಲ್ಲ ಎಂದು ಮುಖ್ಯಮಂತ್ರಿ ಕೃಷ್ಣ ಗುರುವಾರ ತಿಳಿಸಿದ್ದಾರೆ. ಪಕ್ಷಕ್ಕೆ ಹಾನಿ ಮಾಡುವುದಾಗಿ ಹೇಳಿ ದೂರವಾದ ನಾಯಕರು ಇತಿಹಾಸದಲ್ಲಿ ಸಾಕಷ್ಟಿದ್ದಾರೆ ಎಂದು ಕೃಷ್ಣ ಮಾರ್ಮಿಕವಾಗಿ ಹೇಳಿದ್ದಾರೆ.
ಬಂಗಾರಪ್ಪನವರೊಬ್ಬ ಸಹಜ ಪಕ್ಷಾಂತರಿ. ಅವರನ್ನು ಎರಡನೇ ಭಾರೀ ಪಕ್ಷಕ್ಕೆ ಸೇರಿಸಿಕೊಂಡು ತಪ್ಪು ಮಾಡಿದ್ದೇವೆ. ಕ್ಷಮಿಸುವುದು ಕಾಂಗ್ರೆಸ್‌ನ ಸಹಜ ಗುಣವಾಗಿದ್ದರೂ, ಮತ್ತೊಮ್ಮೆ ಅಂತಹ ತಪ್ಪು ಮಾಡುವುದಿಲ್ಲ ಎಂದು ಮುಖ್ಯಮಂತ್ರಿ ಕೃಷ್ಣ ಹೇಳಿದರು.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications