ವೀರಪ್ಪನ್‌ ಹಿಡಿಯೋದು ಹೇಗೆ ? ಇಸ್ರೇಲ್‌ ತಂಡದಿಂದ ವರದಿ

ವೀರಪ್ಪನ್‌ ಹಿಡಿಯೋದು ಹೇಗೆ ? ಇಸ್ರೇಲ್‌ ತಂಡದಿಂದ ವರದಿ
ವರದಿ ಸಿದ್ಧಪಡಿಸುತ್ತಿರುವ ಇಸ್ರೇಲ್‌ ಮಿಲಿಟರಿ ಅಂತರ್‌ ಶಿಸ್ತು ಮಂಡಳಿ ತಂಡ

ಬೆಂಗಳೂರು: ಕಾಡುಗಳ್ಳ ವೀರಪ್ಪನ್‌ ಸೆರೆ ಹಿಡಿಯುವುದು ಹೇಗೆ ?

ಕರ್ನಾಟಕ ವಿಶೇಷ ಕಾರ್ಯಪಡೆಗೆ ವೀರಪ್ಪನ್‌ ಶಿಕಾರಿ ದಿನದಿಂದ ದಿನಕ್ಕೆ ಕಗ್ಗಂಟಾಗುತ್ತಿರುವಾಗ- ‘ವೀರಪ್ಪನ್‌ ಬಂಧನ ಕಾರ್ಯ ಸಾಧ್ಯತೆ’ ಎನ್ನುವ ವರದಿಯನ್ನು ಇಸ್ರೇಲ್‌ನ ಭದ್ರತಾ ತಜ್ಞರ ತಂಡವೊಂದು ಸಿದ್ಧಪಡಿಸಿ, ಶೀಘ್ರದಲ್ಲೇ ರಾಜ್ಯಸರಕಾರಕ್ಕೆ ಸಲ್ಲಿಸಲಿದೆ.

ರಾಜ್ಯ ಸರಕಾರದ ಆಹ್ವಾನದ ಮೇರೆಗೆ 2004ರ ಜನವರಿಯಲ್ಲಿ ಇಸ್ರೇಲ್‌ ಮಿಲಿಟರಿ ಅಂತರ್‌ ಶಿಸ್ತು ಮಂಡಳಿಯ ತಂಡವೊಂದು ಬೆಂಗಳೂರಿಗೆ ಆಗಮಿಸಿದೆ. ಈ ಸಮಿತಿ ವೀರಪ್ಪನ್‌ ಬಂಧನ ಸಾಧ್ಯಾಸಾಧ್ಯತೆ ಕುರಿತು ಅಧ್ಯಯನ ನಡೆಸುತ್ತಿದೆ. ಈ ತಂಡವು ತಮ್ಮ ಪರಿಣತಿಯನ್ನು ಕರ್ನಾಟಕ ಪಡೆಗೆ ಧಾರೆ ಎರೆಯಲಿದೆ ಎಂದು ಇಸ್ರೇಲಿ ಪತ್ರಿಕೆಯಾಂದು ವರದಿ ಮಾಡಿದೆ.

ಈ ಹಿಂದೆ ವೀರಪ್ಪನ್‌ ಶೀಘ್ರ ಬಂಧನಕ್ಕಾಗಿ ಯಾವುದೇ ದೇಶದ ತಂತ್ರಜ್ಞಾನ ಬಳಸಿಕೊಳ್ಳಲು ನಾವು ಸಿದ್ಧರಿದ್ಧೇವೆ ಎಂದು ಪೊಲೀಸ್‌ ಮಹಾನಿರ್ದೇಶಕ ಟಿ. ಮಡಿಯಾಳ್‌ ಹೇಳಿದ್ದರು.

(ಇನ್ಫೋ ವಾರ್ತೆ)

ಮುಖಪುಟ / ವೀರಪ್ಪನ್‌

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+