ದಕ್ಷ- ಪ್ರಾಮಾಣಿಕರಿಗೆ ಓಟು ನೀಡಲು ವೀರಶೈವ ಮಹಾಸಭಾ ಕರೆ
ದಕ್ಷ- ಪ್ರಾಮಾಣಿಕರಿಗೆ ಓಟು ನೀಡಲು ವೀರಶೈವ ಮಹಾಸಭಾ ಕರೆ
ಮಹಾಸಭಾದಿಂದ ಪ್ರಾಮಾಣಿಕರ ಕುರಿತು ಅರಿವು ಹಾಗೂ ಭ್ರಷ್ಟರ ವಿರುದ್ಧ ಜಾಗೃತಿ ಆಂದೋಲನ
ದೇಶ ಹಾಗೂ ಧರ್ಮದ ವಿರುದ್ಧ ಕೆಲಸ ಮಾಡುವವರ ವಿರುದ್ಧ ವೀರಶೈವ ಮಹಾಸಭಾ ಆಂದೋಲನ ಹಮ್ಮಿಕೊಳ್ಳಲಿದೆ ಎಂದು ಮಹಾಸಭಾದ ಅಧ್ಯಕ್ಷ ಭೀಮಣ್ಣ ಖಂಡ್ರೆ ಹೇಳಿದ್ದಾರೆ. ಅಭ್ಯರ್ಥಿ ಯಾವ ಜಾತಿಗೆ ಸೇರಿದ್ದಾನೆ ಎನ್ನುವುದನ್ನು ಚಿಂತಿಸದೆ, ಆತ ಅಭಿವೃದ್ಧಿ ಪರವಾಗಿದ್ದಲ್ಲಿ ಮತ ಚಲಾಯಿಸಿ ಎಂದು ಮಹಾಸಭಾದ ಪರವಾಗಿ ಭೀಮಣ್ಣ ಖಂಡ್ರೆ ಮತದಾರರಿಗೆ ಕರೆ ನೀಡಿದ್ದಾರೆ.
ಓಟು ಚಲಾಯಿಸುವ ಮುನ್ನ ಅಭ್ಯರ್ಥಿಯ ಒಲವು ನಿಲುವುಗಳನ್ನು ಖಚಿತ ಪಡಿಸಿಕೊಳ್ಳಿ. ಆತ ಧರ್ಮಾಂಧನೇ, ಭ್ರಷ್ಟನೇ, ಲಿಕ್ಕರ್ ಲಾಬಿಗೆ ನಿಷ್ಠನೇ ಎನ್ನುವ ಕಡೆ ಗಮನ ಹರಿಸಿ. ಇಂಥ ಅಭ್ಯರ್ಥಿಗಳ ವಿರುದ್ಧ ಮತ ಚಲಾಯಿಸಿ. ಮಹಾಸಭಾ ಕೂಡ ಇಂಥ ರಾಜಕಾರಣಿಗಳ ವಿರುದ್ಧ ಆಂದೋಲನ ಹಮ್ಮಿಕೊಳ್ಳುವುದು ಎಂದು ಖಂಡ್ರೆ ಹೇಳಿದರು.
ಭ್ರಷ್ಟರು ಹಾಗೂ ಸಮಾಜಘಾತುಕರು ಎಲ್ಲ ರಾಜಕೀಯ ಪಕ್ಷಗಳಲ್ಲೂ ಇದ್ದಾರೆ. ಇದರಿಂದಾಗಿ ಮತದಾರ ಗೊಂದಲಗೊಂಡಿದ್ದಾನೆ. ಮತದಾರನ ಗಲಿಬಿಲಿಯಮನ್ನು ನಿವಾರಿಸಲು ವೀರಶೈವ ಮಹಾಸಭಾ ಪ್ರಯತ್ನಿಸುವುದು. ಪ್ರಾಮಾಣಿಕರ ಕುರಿತು ಅರಿವು ಹಾಗೂ ಭ್ರಷ್ಟರ ವಿರುದ್ಧ ಜಾಗೃತಿ ಮೂಡಿಸುವ ಕೆಲಸವನ್ನು ವೀರಶೈವ ಮಹಾಸಭಾ ಮಾಡಲಿದೆ ಎಂದು ಭೀಮಣ್ಣ ಖಂಡ್ರೆ ಹೇಳಿದರು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications