ಜಾತ್ಯತೀತ ಜನತಾದಳ ತೊರೆಯುವುದಿಲ್ಲ , ಕಾಂಗ್ರೆಸ್ ಸೇರುವ ಪ್ರಶ್ನೆಯೇ ಇಲ್ಲ ...
ಜಾತ್ಯತೀತ ಜನತಾದಳ ತೊರೆಯುವುದಿಲ್ಲ , ಕಾಂಗ್ರೆಸ್ ಸೇರುವ ಪ್ರಶ್ನೆಯೇ ಇಲ್ಲ ...
ಅಳಿಯ ಕಿರಣ್ ಪಟೇಲ್ ಮುಖ್ಯಮಂತ್ರಿ ಭೇಟಿ ತನಗೇನು ತಿಳಿಯದು ಎಂದ ಪರಿಮಳಾ
ಹನೂರು ಕ್ಷೇತ್ರದ ಜನತೆ ನಾಗಪ್ಪ ಸಾವಿಗೆ ಕಾರಣರಾದ ಕಾಂಗ್ರೆಸ್ ಸರಕಾರದ ವಿರುದ್ಧ ಸೇಡು ತೀರಿಸಿಕೊಳ್ಳಲು ಸಜ್ಜಾಗಿದ್ದಾರೆ. ಅದರಲ್ಲೂ ಮಹಿಳೆಯರು ಕಾತುರವಾಗಿದ್ದಾರೆ. ಇಂಥ ಸಂದರ್ಭದಲ್ಲಿ ತಾವು ಕಾಂಗ್ರೆಸ್ ಸೇರುವ ಪ್ರಶ್ನೆಯೇ ಇಲ್ಲ ಎಂದು ರಾಜ್ಯ ಜೆಡಿಎಸ್ ಹಿರಿಯ ಉಪಾಧ್ಯಕ್ಷೆ ಪರಿಮಳಾ ನಾಗಪ್ಪ ಹೇಳಿದ್ದಾರೆ.
ಹನೂರು ಕ್ಷೇತ್ರದಲ್ಲಿ ತಾವು ಜಯಗಳಿಸುವುದು ನಿಶ್ಚಿತ. ರಾಜೂಗೌಡ ಒಳಗೊಂಡಂತೆ ಕಾಂಗ್ರೆಸಿಗರನ್ನು ಕ್ಷೇತ್ರದೊಳಗೆ ಬರಲು ಬಿಡಬಾರದು ಎಂದು ಕಾರ್ಯಕರ್ತರು ನಿರ್ಧರಿಸಿದ್ದಾರೆ. ಅದಕ್ಕಾಗಿ ನಾನು ಕಾಂಗೈ ಸೇರುತ್ತೇನೆ ಎಂಬ ಪುಕಾರು ಹಬ್ಬಿಸಿದ್ದಾರೆ. ಕುಟುಂಬದ ಮಧ್ಯೆ ವೈಮನಸ್ಸು ತರಲು ಪ್ರಯತ್ನಿಸುತ್ತಿದ್ದಾರೆ. ಈ ರೀತಿಯಲ್ಲಿ ಅಪಪ್ರಚಾರದಲ್ಲಿ ತೊಡಗಿದ್ದಾರೆ ಎಂದು ಪರಿಮಳಾ ಹೇಳಿದರು.
ನಾಗಪ್ಪ ನವರಿದ್ದಾಗ ಪ್ರತಿ ಹೋಬಳಿಯಲ್ಲಿ ನಡೆಸುತ್ತಿದ್ದ ‘ಮಾಸದ ನೆನಪು’ ಕಾರ್ಯಕ್ರಮದ ಮೂಲಕ ಈ ಕ್ಷೇತ್ರದ ಜನತೆ ತನಗೆ ಚಿರಪರಿಚಿತ ಎಂದು ಪರಿಮಳಾ ಹೇಳಿದರು. ತಮ್ಮ ಅಳಿಯ ಕಿರಣ್ ಪಟೇಲ್ ಮುಖ್ಯಮಂತ್ರಿ ಕೃಷ್ಣರ ಜೊತೆ ಸಮಾಲೋಚಿಸಿರುವ ಬಗ್ಗೆ ತನಗೇನೂ ತಿಳಿಯದು ಎಂದು ಉತ್ತರಿಸಿದರು. ಮಾಜಿ ಶಾಸಕ ಮಹದೇವ್ ಪ್ರಸಾದ್, ನಾರಾಯಣ ಸ್ವಾಮಿ, ಪುತ್ರ ಪ್ರೀತಂ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications