‘ಚುನಾವಣೆ ನೀತಿ ಸಂಹಿತೆ’ ಕೈಬಿಟ್ಟ ಖರ್ಗೆ ವಿರುದ್ಧ ಬಿಜೆಪಿ ದೂರು

‘ಚುನಾವಣೆ ನೀತಿ ಸಂಹಿತೆ’ ಕೈಬಿಟ್ಟ ಖರ್ಗೆ ವಿರುದ್ಧ ಬಿಜೆಪಿ ದೂರು
ಗೃಹ ಸಚಿವರ ಮೇಲೆ ಸರಕಾರಿಯಂತ್ರ ದುರ್ಬಳಕೆ ಆರೋಪ

ಬೆಂಗಳೂರು: ರಾಜ್ಯ ಬಿಜೆಪಿ ಘಟಕ ಗೃಹಸಚಿವ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದೆ.

ಚುನಾವಣಾ ನೀತಿಸಂಹಿತೆ ಜಾರಿಗೆ ಬಂದ ಮೇಲೂ ಗೃಹ ಸಚಿವ ಮಲ್ಲಿಕಾರ್ಜುನ ಖರ್ಗೆ ಸರಕಾರಿ ಯಂತ್ರವನ್ನು ದುಬಳಕೆ ಮಾಡಿಕೊಂಡಿದ್ದಾರೆ. ಗುಲ್ಬರ್ಗಾದಲ್ಲಿ ಸರಕಾರಿ ಯೋಜನೆಯನ್ನು ಉದ್ಘಾಟನೆ ಮಾಡುವ ಮೂಲಕ ನೀತಿ ಸಂಹಿತೆಗೆ ಅಪಚಾರ ಎಸಗಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.

ಚುನಾವಣಾ ನೀತಿಸಂಹಿತೆಯನ್ನು ಗಾಳಿಗೆ ತೂರಿ ಗುಲ್ಬರ್ಗಾದ ಆಳಂದದಲ್ಲಿ ಆಭಿವೃದ್ಧಿ ಕಾರ್ಯಕ್ರಮಗಳನ್ನು ಖರ್ಗೆ ಉದ್ಘಾಟನೆ ಮಾಡಿದ್ದಾರೆ. ಅವರ ವಿರುದ್ಧ ಶೀಘ್ರ ಸಮರ್ಪಕ ಕ್ರಮ ಕೈಗೊಳ್ಳಬೇಕು ಎಂದು ಬಿಜಿಪಿ ತನ್ನ ದೂರಿನಲ್ಲಿ ಆಗ್ರಹಿಸಿದೆ. ಸರಕಾರಿ ಕಾರು, ಹೆಲಿಕಾಪ್ಟರ್‌ ಹಾಗೂ ಭಧ್ರತೆಯನ್ನು ನೀತಿ ಸಂಹಿತೆ ಜಾರಿಗೆ ಬಂದಿರುವ ನಂತರವೂ ಖರ್ಗೆ ಬಳಸಿದ್ದರು.

ರಾಜ್ಯದಾದ್ಯಂತ ಹಾಕಲಾಗಿರುವ ಕೃಷ್ಣ ಅವರ ಸರಕಾರದ ಜಾಹಿರಾತು ಫಲಕ ತೆಗೆಸುವಂತೆ ಹಾಗೂ ಬಸ್‌ಗಳಲ್ಲಿ ಅಳವಡಿಸಿರುವ ಸರಕಾರಿ ಜಾಹಿರಾತು ಕೀಳಿಸುವಂತೆ ಆಯೋಗವನ್ನು ಕೇಳಿಕೊಳ್ಳಲಾಗುವುದು ಎಂದು ಬಿಜೆಪಿ ವಕ್ತಾರ ಸುರೇಶ್‌ಕುಮಾರ್‌ ತಿಳಿಸಿದ್ದಾರೆ.

(ಪಿಟಿಐ)

ಮುಖಪುಟ / ವಾರ್ತೆಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+