ವಾಜಪೇಯಿ ವಿಶ್ವದ ಶ್ರೇಷ್ಠ ನಾಯಕ -‘ಕಮಲ’ಧಾರಿ ಬಂಗಾರಪ್ಪ
ವಾಜಪೇಯಿ ವಿಶ್ವದ ಶ್ರೇಷ್ಠ ನಾಯಕ -‘ಕಮಲ’ಧಾರಿ ಬಂಗಾರಪ್ಪ
ಕೈಯಲ್ಲಿ ‘ಕಮಲ’ ಹಿಡಿದು ಬಲಪಡಿಸುವಂತೆ ಅಭಿಮಾನಿಗಳ ಕೋರಿದ ಬಂಗಾರಪ್ಪ
ತವರು ಜಿಲ್ಲೆ ಶಿವಮೊಗ್ಗದಲ್ಲಿ ಅಭಿಮಾನಿಗಳೊಂದಿಗೆ ಚರ್ಚಿಸಿದ ಬಂಗಾರಪ್ಪ , ಕೈಯಲ್ಲಿ ಕಮಲದ ಹೂವನ್ನು ಹಿಡಿದು, ಇದನ್ನು ಬಲಪಡಿಸಿ ಎಂದು ತಮ್ಮ ಬೆಂಬಲಿಗರನ್ನು ಮಂಗಳವಾರ ಕೋರಿದರು. ಬಂಗಾರಪ್ಪನವರ ನಿಕಟವರ್ತಿಗಳ ಪ್ರಕಾರ, ಫೆ.3ರ ಬುಧವಾರ ದೆಹಲಿಯಲ್ಲಿ ಪ್ರಧಾನಿ ವಾಜಪೇಯಿ ಅವರ ಸಮ್ಮುಖದಲ್ಲಿ ಬಂಗಾರಪ್ಪ ಬಿಜೆಪಿಗೆ ಸೇರ್ಪಡೆಯಾಗುವರು.
ಕಾಂಗ್ರೆಸ್ ಪಕ್ಷವನ್ನು ಮುಳುಗುತ್ತಿರುವ ಹಡಗು ಎಂದು ಬಣ್ಣಿಸಿದ ಬಂಗಾರಪ್ಪ , ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿಗೆ ದೇಶವನ್ನು ಮುನ್ನಡೆಸುವ ಸಾಮರ್ಥ್ಯವಿಲ್ಲ ಎಂದರು. ವಾಜಪೇಯಿ ಅವರನ್ನು ವಿಶ್ವದ ಅತ್ಯುತ್ತಮ ನಾಯಕ ಎಂದು ಬಂಗಾರಪ್ಪ ಬಣ್ಣಿಸಿದರು.
ಭಾರತ್ ಹಾಗೂ ಪಾಕಿಸ್ತಾನಗಳ ನಡುವಣ ಸಂಬಂಧ ಸುಧಾರಣೆ ಮಾತ್ರವಲ್ಲದೆ, ಮುಸ್ಲಿಮರು ಹಾಗೂ ಇನ್ನಿತರ ಅಲ್ಪಸಂಖ್ಯಾತರ ವಿಶ್ವಾಸವನ್ನು ವಾಜಪೇಯಿ ಹೆಚ್ಚಿಸಿದ್ದಾರೆ. ಈಮುನ್ನ ಅಲ್ಪಸಂಖ್ಯಾಕರಿಗೆ ಕಾಂಗ್ರೆಸ್ ನೀಡಿದ ನೆರವಿಗಿಂತ ಹೆಚ್ಚಿನ ಪ್ರಮಾಣದ ನೆರವು ಬಿಜೆಪಿಯಿಂದ ದೊರೆತಿದೆ ಎಂದು ಬಂಗಾರಪ್ಪ ಶ್ಲಾಘಿಸಿದರು. ಅಯೋಧ್ಯೆ ಸಮಸ್ಯೆಯನ್ನು ಸ್ನೇಹಯುತವಾಗಿ ಪರಿಹರಿಸಲು ವಿಶ್ವ ಹಿಂದೂ ಪರಿಷತ್ ಹಾಗೂ ಸಂಘ ಪರಿವಾರ ಪ್ರಯತ್ನಿಸುತ್ತಿವೆ ಎಂದೂ ಬಂಗಾರಪ್ಪ ಉದಾರವಾಗಿ ಶ್ಲಾಘಿಸಿದರು.
ತಾವು ರಾಜ್ಯಾದ್ಯಂತ ಪ್ರವಾಸ ಕೈಗೊಂಡು ಕಾಂಗ್ರೆಸ್ ಬಿಡಬೇಕಾದ ಕಾರಣವನ್ನು ಜನರಿಗೆ ತಿಳಿಸುವುದಾಗಿ ಹೇಳಿದ ಬಂಗಾರಪ್ಪ , ತಮ್ಮೊಂದಿಗೆ ಅನೇಕ ನಾಯಕರು ಕಾಂಗ್ರೆಸ್ ತ್ಯಜಿಸುವ ವಿಶ್ವಾಸ ವ್ಯಕ್ತಪಡಿಸಿದರು.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications