ಅಡ್ವಾಣಿ ನೇತೃತ್ವದಲ್ಲಿ ಬಿಜೆಪಿಯ ‘ಭಾರತ ಉದಯ’ ರಥ ಯಾತ್ರೆ
ಅಡ್ವಾಣಿ ನೇತೃತ್ವದಲ್ಲಿ ಬಿಜೆಪಿಯ ‘ಭಾರತ ಉದಯ’ ರಥ ಯಾತ್ರೆ
ಕನ್ಯಾಕುಮಾರಿಯಿಂದ ಅಮೃತಸರದವರೆಗೆ ಸಂಚಾರ, ಎನ್‌ಡಿಎ ಸಾಧನೆಗಳ ಬಿತ್ತರ
ಕಾಂಗ್ರೆಸ್‌ನ ಸೋನಿಯಾ ಗಾಂಧಿ ಅವರ ರಸ್ತೆ ರ್ಯಾಲಿಗೆ ಉತ್ತರವೆಂಬಂತೆ ಮಾರ್ಚ್ 15ರಿಂದ ಅಡ್ವಾಣಿ ನೇತೃತ್ವದಲ್ಲಿ ರಥಯಾತ್ರೆಯನ್ನು ಬಿಜೆಪಿ ಸಂಘಟಿಸಿದೆ. ಈ ಯಾತ್ರೆಯನ್ನು ‘ಭಾರತ ಉದಯ’ ಎಂದು ಹೆಸರಿಸಲಾಗಿದೆ. ಈ ಮುನ್ನಿನ ರಥಯಾತ್ರೆಗಳ ಭಾರೀ ಯಶಸ್ಸಿನಿಂದ ‘ಭಾರತ ಉದಯ’ ರಥಯಾತ್ರೆಯನ್ನು ಬಿಜೆಪಿ ಹಮ್ಮಿಕೊಂಡಿದೆ.
ಕನ್ಯಾಕುಮಾರಿಯಿಂದ ಹೊರಟು ಅಮೃತಸರದವರೆಗೂ ‘ಭಾರತ ಉದಯ’ ರಥಯಾತ್ರೆ ನಡೆಯಲಿದೆ ಎಂದು ತಲುಪಲಿದೆ. ಯಾತ್ರೆಯುದ್ದಕ್ಕೂ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ ಸರ್ಕಾರದ ಸಾಧನೆಗಳನ್ನು ಬಿಂಬಿಸಲಾಗುವುದು. ಪ್ರಧಾನಿ ವಾಜಪೇಯಿ ಈ ರಥಯಾತ್ರೆಗೆ ಒಪ್ಪಿಗೆ ನೀಡಿದ್ದಾರೆ ಎಂದು ಬಿಜೆಪಿ ವಕ್ತಾರ ಮುಖ್ತಾರ್ ಅಬ್ಬಾಸ್ ನಕ್ವಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
(ಏಜನ್ಸೀಸ್)
ಮುಖಪುಟ / ವಾರ್ತೆಗಳು












Click it and Unblock the Notifications