‘ಮಠಗಳಿಗೆ ನಮನ, ಆ ಮಠಗಳೇ ಪ್ರಧಾನ’ ಎಂದರು ಎಸ್ಸೆಂ.ಕೃಷ್ಣ

‘ಮಠಗಳಿಗೆ ನಮನ, ಆ ಮಠಗಳೇ ಪ್ರಧಾನ’ ಎಂದರು ಎಸ್ಸೆಂ.ಕೃಷ್ಣ
ಮೈಸೂರಲ್ಲಿ ಬಾಲಗಂಗಾಧರನಾಥ ಸ್ವಾಮೀಜಿಯವರ ಅದ್ದೂರಿ ಷಷ್ಠ್ಯಬ್ಧಿ

ಮೈಸೂರು : ಸಾಮಾಜಿಕ ಅಭಿವೃದ್ಧಿಯಲ್ಲಿ ಧರ್ಮಗುರುಗಳ ಹಾಗೂ ಮಠಗಳ ಪಾತ್ರ ಮಹತ್ತರವಾದದ್ದು. ಇಂತಹ ಸಂಸ್ಥೆಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಎಸ್ಸೆಂ.ಕೃಷ್ಣ ಹೇಳಿದ್ದಾರೆ. ಅವರು ಆದಿಚುಂಚನಗಿರಿ ಮಠದ ಬಾಲಗಂಗಾಧರನಾಥ ಸ್ವಾಮೀಜಿಗಳ ವೈಭವಪೊರಿತ ಷಷ್ಠ್ಯಬ್ಧಿ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಮಠಗಳು ಆಧ್ಯಾತ್ಮಿಕ ಮತ್ತು ಧರ್ಮದ ಹೊರತಾಗಿ ಕೈಗೊಂಡಿರುವ ವಿದ್ಯಾ, ಆರೋಗ್ಯ, ಸಮಾಜಭಿವೃದ್ಧಿ ಸೇವೆಗಳನ್ನು ಶ್ಲಾಘಿಸಿದ ಕೃಷಣ - ಮಠಗಳಿಲ್ಲದಿದ್ದಲ್ಲಿ ಸರಕಾರಕ್ಕೆ ಹೆಚ್ಚಿನ ಹೊರೆ ಬೀಳುತ್ತಿತ್ತು ಎಂದರು.

ಭಾರತೀಯ ಸಂಸ್ಕೃತಿ ಸ್ವಾಭಾವಿಕವಾಗಿ ವೈವಿಧ್ಯಮಯವಾಗಿದೆ. ಇಲ್ಲಿ ಬೇರೆ ಬೇರೆ ಜಾತಿ ಪಂಗಡಗಳ ಜನರಿದ್ದಾರೆ. ಇಲ್ಲಿರುವ ಜಾತಿ ಮತಗಳ ಮಧ್ಯೆ ಸಾಮರಸ್ಯ ಬೆಸೆಯುವ ಕಾರ್ಯ ನಿರ್ವಹಿಸುವ ಮಠಗಳು ದೇಶಕ್ಕೆ ಅದ್ಭುತ ಸೇವೆ ನೀಡುತ್ತಿವೆ ಎಂದು ಬಣ್ಣಿಸಿದ ಕಷ್ಣ , ಶೈಕ್ಷಣಿಕ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸುತ್ತಿರುವ ಆದಿಚುಂಚನಗಿರಿ, ಸುತ್ತೂರು ಮಠ, ಸಿದ್ದಗಂಗಾ ಮಠಗಳನ್ನು ವಿಶೇಷವಾಗಿ ಹೆಸರಿಸಿದರು. ಈ ಸಂಸ್ಥೆಗಳು ವಿದ್ಯಾಸೇವೆ ಕೈಗೊಳ್ಳುತ್ತಿರುವುದರಿಂದ ಸಮಾಜದಲ್ಲಿ ಸಾಮಾಜಿಕ ನ್ಯಾಯ ನೆಲೆಸಲು ಸಹಕಾರಿಯಾಗಿದೆ ಎಂದು ಹೇಳಿದರು.

ಮೈಸೂರು ಒಡೆಯರು ಹಿಂದುಳಿದ ವರ್ಗಗಳ ರಾಜಕೀಯ ಪ್ರತಿನಿಧಿತ್ವ ಕುರಿತ ಅಧ್ಯಯನಕ್ಕಾಗಿ ಮಿಲ್ಲರ್‌ ಕಮಿಟಿ ಸ್ಥಾಪನೆ ಮಾಡಿದ್ದರು. ರಾಜನ ಶ್ರೇಷ್ಠತೆಯ ಪರಿಸ್ಥಿತಿಯಲ್ಲೂ ಅವರು ಸಾಮಾಜಿಕ ನ್ಯಾಯಕ್ಕಾಗಿ ಸೇವೆಸಲ್ಲಿಸಿದರು. ಆದು ಅವರ ವಂಶದ ರಕ್ತಗುಣ. ಆದರೆ ಈಗ ಪ್ರಜಾಪ್ರಭುತ್ವ ಇರುವುದರಿಂದ ಆಯ್ಕೆಗೊಂಡ ಸರಕಾರ ಆ ಕೆಲಸ ಮಾಡಬೇಕಾಗಿದೆ ಎಂದು ಹೇಳಿದರು.

ಸಮಾಜದ ಒಂದು ವರ್ಗ ಮಠಗಳ ಸೇವೆಯನ್ನು ನೋಡದೆ ಮಠವನ್ನು ಜರೆಯುತ್ತಿವೆ. ಸಮಾಜದ ಎಲ್ಲಾ ವರ್ಗದ ಜೊತೆ ಸಮನ್ವಯ ಸಾಧಿಸುವಲ್ಲಿ ಮಠದ ಸೇವೆ ಅಪಾರ ಎಂದು ಕೃಷ್ಣ ಕೊಂಡಾಡಿದರು.

ಇದಕ್ಕೆ ಮುನ್ನ, ಬಾಲಗಂಗಾಧರನಾಥ ಸ್ವಾಮಿಂಜಿ ಅವರನ್ನು ಅರಮನೆಯ ಪಕ್ಕದಿಂದ ಅದ್ದೂರಿ ಮೆರವಣಿಗೆಯಲ್ಲಿ ಕರೆತರಲಾಯಿತು. ಸಮಾರಂಭದಲ್ಲಿ ಸಂದೇಶ್‌ ನಾಗರಾಜ್‌ ಅರ್ಪಿಸಿದ ಚಿನ್ನದ ಕಿರೀಟವನ್ನು ಬಾಲಗಂಗಾಧರನಾಥರಿಗೆ ಕೃಷ್ಣ ತೊಡಿಸಿದರು. ಬೆಳ್ಳಿ ಪಾದುಕೆ, ತುಲಾಭಾರ, ಚಿನ್ನದ ರುದ್ರಾಕ್ಷಿ ಕಂಠಿಹಾರ ಮುಂತಾದ ದಕ್ಷಿಣೆಯನ್ನು ಭಕ್ತರು ಸ್ವಾಮಿಗೆ ಸಮರ್ಪಿಸಿದರು. ರಾಜ ಮನೆತನದ ಶ್ರಿಕಂಠದತ್ತ ಒಡೆಯರ್‌ ಕಾರ್ಯಕ್ರಮದಲ್ಲಿ ಹಾಜರಿದ್ದರು.

(ಇನ್ಫೋ ವಾರ್ತೆ)

ಮುಖಪುಟ / ಕೃಷ್ಣಗಾರುಡಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+