ಮೇ13 : ಅಣ್ವಸ್ತ್ರ ಪರೀಕ್ಷೆ ದಿನದಂದೇ ಮತ ಎಣಿಕೆ-ಜಸ್ವಂತ್ ಖುಷಿ
ಮೇ13 : ಅಣ್ವಸ್ತ್ರ ಪರೀಕ್ಷೆ ದಿನದಂದೇ ಮತ ಎಣಿಕೆ-ಜಸ್ವಂತ್ ಖುಷಿ
ಚುನಾವಣೆ ನಂತರ ಕಾಂಗ್ರೆಸ್ ಪರಿಸ್ಥಿತಿ ಮತ್ತಷ್ಟು ಹೀನಾಯ, ವಿತ್ತ ಸಚಿವರ ಭವಿಷ್ಯ
ಮೇ 13ರ ಯೋಗಾಯೋಗದ ್ಫಸಾಮ್ಯತೆಯನ್ನು ಗುರ್ತಿಸಿದವರು ಕೇಂದ್ರ ಹಣಕಾಸು ಸಚಿವ ಜಸ್ವಂತ್‌ಸಿಂಗ್. ಚುನಾವಣಾ ಜ್ವರದ ದಿನಗಳಲ್ಲಿ ಬೆಂಗಳೂರಿಗೆ ಆಗಮಿಸಿರುವ ಜಸ್ವಂತ್- ಮತಗಳ ಎಣಿಕೆ ಕಾರ್ಯ ಹಾಗೂ ಅಣ್ವಸ್ತ್ರ ಪರೀಕ್ಷಾ ದಿನಾಂಕ ಒಂದೇ ದಿನವಾಗಿದೆ. ಇದು ದೇಶಕ್ಕೆ ಶುಭ ಸೂಚಕವಾಗಿದೆ ಎಂದರು. ಬಿಜೆಪಿ ಆಯೋಜಿಸಿದ್ದ ಬುದ್ಧಿಜೀವಿಗಳ ಸಭೆಯಾದ ಫಮುನ್ನಡೆಯಲ್ಲಿ ಭಾರತ ಫ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
1988 ರ ಮೇ 11 ಮತ್ತು 13ರಂದು ಮೊದಲ ಬಾರಿಗೆ ಭಾರತದಲ್ಲಿ ಅಣ್ವಸ್ತ ಪರೀಕ್ಷೆ ನಡೆಸಲಾಗಿತ್ತು. ಆ ಮರೆಯಲಾಗದ ಕ್ಷಣಗಳು, ಜಗತ್ತಿನಲ್ಲಿ ಭಾರತದ ಸ್ಥಾನ ಹಾಗೂ ಹಿರಿಮೆಯನ್ನು ಎತ್ತಿ ಹಿಡಿದವು ಎಂದು ಜಸ್ವಂತ್ ಸಿಂಗ್ ನುಡಿದರು.
ಎನ್‌ಡಿಎ ಅಂತರ ರಾಷ್ಟ್ರೀಯ ಮತ್ತು ಆಂತರಿಕವಾಗಿ ಆರ್ಥಿಕ ಕ್ಷೇತ್ರಗಳಲ್ಲಿ ಪಾರದರ್ಶಕತೆ ತಂದಿದೆ. ಮತದಾರರು ಗಮನಿಸಬೇಕಾದ ಅಂಶವೆಂದರೆ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರು ನಾಲ್ಕನೇ ಬಾರಿ ಕಣಕ್ಕಿಳಿದಿದ್ದಾರೆ. ಎಲ್ಲರ ಆಶೋತ್ತರಗಳು ಕಾರ್ಯರೂಪಕ್ಕೆ ಬರಲು ಎನ್‌ಡಿಎ ಮುಂದುವರಿಕೆ ಅತ್ಯಗತ್ಯ ಎಂದು ಜಸ್ವಂತ್ ಸಿಂಗ್ ಅಭಿಪ್ರಾಯಪಟ್ಟರು.
ಜಗತ್ತಿನ ಹಲವಾರು ದೇಶಗಳು, ಭಾರತವು ವಿಶ್ವಸಂಸ್ಥೆಯ ಭದ್ರತಾ ಸಮಿತಿಯಲ್ಲಿ ಶಾಶ್ವತ ಸದಸ್ಯತ್ವ ಪಡೆಯಲು ಸಹಕರಿಸುತ್ತಿವೆ. ಆ ದೇಶಗಳು ರಾಷ್ಟ್ರಪತಿ ಅಬ್ದುಲ್ ಕಲಾಂ ಮತ್ತು ಪ್ರಧಾನಿ ವಾಜಪೇಯಿ ಅವರೊಡನೆ ಸಮಾಲೋಚನೆ ನಡೆಸಲು ಮುಂದಾಗಿವೆ. ಆದರೆ, ಸಮಯಾವಕಾಶದ ಕೊರತೆಯಿಂದ ಈ ಭೇಟಿ ಸಾಧ್ಯವಾಗುತ್ತಿಲ್ಲ ಎಂದು ಜಸ್ವಂತ್ ಹೇಳಿದರು.
ಚುನಾವಣಾ ನಂತರ ಕಾಂಗ್ರೆಸ್ಸಿನ ಪರಿಸ್ಥಿತಿ ಮತ್ತಷ್ಟು ಶೋಚನೀಯವಾಗಲಿದೆ ಎಂದು ಜಸ್ವಂತ್ ಭವಿಷ್ಯ ನುಡಿದರು.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications