‘ಬಾರಿ ಬಾರಿ ಆಟಲ್ ಬಿಹಾರಿ’ : ಉತ್ಸಾಹಿ ಬಿಜೆಪಿ ಹೊಸ ಮಂತ್ರ
‘ಬಾರಿ ಬಾರಿ ಆಟಲ್ ಬಿಹಾರಿ’ : ಉತ್ಸಾಹಿ ಬಿಜೆಪಿ ಹೊಸ ಮಂತ್ರ
ಕಾಂಗ್ರೆಸ್‌ಗೆ ಬಹುಮತ ಬಂದರೆ ಸೋನಿಯಾ ಪ್ರಧಾನಿ -ಕಪಿಲ್ ಸಿಬಾಲ್
ಚುನಾವಣಾ ದಿನಾಂಕ ಪ್ರಕಟವಾದ ಬೆನ್ನಲ್ಲೆ ೕ, ಕಾವೇರಿದ ಪ್ರಚಾರದಲ್ಲಿ ಹೊಸ ಸ್ಲೋಗನ್‌ಗಳು ಮೊಳಗಲು ಆರಂಭಿಸುತ್ತಿವೆ. ಬಿಜೆಪಿಯ ಮುಂದಿನ ಚುನಾವಣಾ ಪ್ರಚಾರ ವಾಕ್ಯ ‘ಬಾರಿ ಬಾರಿ ಅಟಲ್ ಬಿಹಾರಿ’ (ಮತ್ತೆ ಮತ್ತೆ ಅಟಲ್ ಬಿಹಾರಿ) ಎಂದು ಛತ್ತೀಸ್‌ಘಡದ ಮುಖ್ಯಮಂತ್ರಿ ರಮಣ್ ಸಿಂಗ್ ಸೋಮವಾರ ಘೋಷಿಸಿದರು.
ಛತ್ತೀಸ್‌ಘಡದಲ್ಲಿ ನಾವು 8 ರಿಂದ 11ಕ್ಕೇರುವ ಮೂಲಕ ಎಲ್ಲಾ ಲೋಕಸಭಾ ಸ್ಥಾನ ಗೆಲ್ಲಲಿದ್ದೇವೆ. ನೂತನ ರಾಜ್ಯ ನಿರ್ಮಿಸಿ, ಯೋಜನೆಗಳನ್ನು ಪ್ರಕಟಿಸುವ ಮೂಲಕ ಹಿಂದುಳಿದಿದ್ದ ಪ್ರದೇಶದ ಅಭಿವೃದ್ಧಿಯನ್ನು ಪ್ರಧಾನಿ ವಾಜಪೇಯಿ ಸಾಧ್ಯವಾಗಿಸಿದ್ದಾರೆ ಎಂದು ರಮಣ್‌ಸಿಂಗ್ ಬಣ್ಣಿಸಿದರು.
ಈ ಹಿಂದೆ 80 ರ ದಶಕದಲ್ಲಿ , ಮತದಾರರಲ್ಲಿ ‘ಅಬ್‌ಕೀ ಬಾರಿ ಅಟಲ್ ಬಿಹಾರಿ’ (ಈ ಸಲ ಅಟಲ್ ಬಿಹಾರಿ) ಎನ್ನುತ್ತಿದ್ದೆವು. ಇನ್ನುಮುಂದೆ ದೂರದೃಷ್ಟಿಯನ್ನು ಸಾಕಾರಗೊಳಿಸಲು ‘ಬಾರಿ ಬಾರಿ ಅಟಲ್ ಬಿಹಾರಿ’ ಹೇಳುತ್ತೇವೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ವೆಂಕಯ್ಯನಾಯ್ಡು ಹೇಳಿದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಸೋನಿಯಾ ಪ್ರಧಾನಿ : ಕಲ್ಕತ್ತಾದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಕಾಂಗ್ರೆಸ್ ವಕ್ತಾರ ಕಪಿಲ್ ಸಿಬಾಲ್- ಕಾಂಗೈ ಸ್ಪಷ್ಟ ಬಹುಮತದೊಂದಿಗೆ ಆಡಳಿತಕ್ಕೆ ಬಂದರೆ ಸೋನಿಯಾ ಗಾಂಧಿ ಪ್ರಧಾನಿಯಾಗಲಿದ್ದಾರೆ ಎಂದು ಹೇಳಿದ್ದಾರೆ. 272 ಸೀಟು ಗೆಲ್ಲದಿದ್ದಲ್ಲಿ, ಜೊತೆಗಾರ ಪಕ್ಷಗಳ ಜೊತೆ ಚರ್ಚಿಸಿ ಪ್ರಧಾನಿ ಪೀಠಕ್ಕೆ ಅಭ್ಯರ್ಥಿಯನ್ನು ನಿರ್ಣಯಿಸಲಾಗುವುದು. ಇಲ್ಲದಿದ್ದಲ್ಲಿ ಕೇಸರೀಕರಣಗೊಳ್ಳದ ಯಾವುದೇ ಪಕ್ಷಕ್ಕೆ ಬೆಂಬಲ ನೀಡಲಾಗುವುದು ಎಂದು ಕಪಿಲ್ ಸಿಬಾಲ್ ಹೇಳಿದರು.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications