ಸೋನಿಯಾ ‘ಕಾಫಿ’ ಒಲ್ಲದ ಹಜಾರಿಕಾ ಸುಷ್ಮಾ ಜೊತೆ ‘ಊಟ’ಕ್ಕೆ!
ಸೋನಿಯಾ ‘ಕಾಫಿ’ ಒಲ್ಲದ ಹಜಾರಿಕಾ ಸುಷ್ಮಾ ಜೊತೆ ‘ಊಟ’ಕ್ಕೆ!
ಭಾರತೀಯ ಜನತಾ ಪಕ್ಷಕ್ಕೆ ಮುಂದುವರಿದ ಕಲಾವಿದರ ವಲಸೆ
ತಮ್ಮನ್ನು ಖ್ಯಾತಿಯ ಶಿಖರಕ್ಕೊಯ್ದ ‘ಒ ಗಂಗಾ ತುಮ್ ಬಹತೀ ಹೊ ಕ್ಯೂ’ ಹಾಡನ್ನು ಹಾಡುವ ಮೂಲಕ ಫೆ.27ರ ಶುಕ್ರವಾರ ಭೂಪೇನ್ ಹಜಾರಿಕಾ ಬಿಜೆಪಿಗೆ ಸೇರ್ಪಡೆಯಾದರು. ಹಜಾರಿಕಾ ಅವರು ಈ ಹಿಂದೆ ಎಡಪಂಥೀಯ ಬೆಂಬಲಿತ ‘ಐಪಿಟಿಎ‘ ಸಾಂಸ್ಕೃತಿಕ ಸಂಘಟನೆಯ ಸದಸ್ಯರಾಗಿದ್ದರು. ಪಕ್ಷೇತರ ಅಭ್ಯರ್ಥಿಯಾಗಿ ಅಸ್ಸಾಂನಲ್ಲಿ ಎರಡು ಅವಧಿಗೆ ಶಾಸಕರಾಗಿದ್ದರು. ಸಾಮಾಜಿಕ ಬದಲಾವಣೆಗಾಗಿ ಕಲೆಯನ್ನು ಬಳಸಿಕೊಳ್ಳಬೇಕೆಂಬುದು ಅವರ ಅಭಿಮತ.
ಈಶಾನ್ಯ ರಾಜ್ಯಗಳ ಅಭಿವೃದ್ಧಿ ನನ್ನ ರಾಜಕೀಯ ಗುರಿ ಎಂದು ಹೇಳಿರುವ ಹಜಾರಿಕಾ- ತೇಜ್‌ಪುರ್ ಲೋಕಸಭಾ ಕ್ಷೇತ್ರದಿಂದ ಚುನಾವಣಾ ಕಣಕ್ಕಿಳಿಯುವ ಸಂಭವವಿದೆ. ಕಳೆದ ಐದು ವರ್ಷದಿಂದ ಕೇಂದ್ರ ಸರಕಾರದ ಕಾರ್ಯವೈಖರಿ ನೋಡಿದ್ದೇನೆ. ನನ್ನನ್ನು ವಾಜಪೇಯಿ, ಅಡ್ವಾಣಿ ಮತ್ತು ಸುಷ್ಮಾ ಪಕ್ಷಕ್ಕೆ ಬರಲು ಹೇಳಿದರು. ಸಂತೋಷದಿಂದ ಬಂದೆ ಎಂದು ಹೇಳಿದರು.
ದಾದಾ ಸಾಹೇಬ ಫಾಲ್ಕೆ ಪ್ರಶಸ್ತಿ ವಿಜೇತನನ್ನು ಪಕ್ಷಕ್ಕೆ ಕರೆತಂದ ಸುಷ್ಮಾ ಸ್ವರಾಜ್- ವಜ್ರವನ್ನು ಪಕ್ಷಕ್ಕೆ ತಂದಿದ್ದೇನೆ. ಇದರಿಂದ ಕಾಂಗೈ ಈಶಾನ್ಯದಲ್ಲಿ 25ಕ್ಕಿಂತಲೂ ಹೆಚ್ಚಿನ ಸೀಟು ಕಳೆದುಕೊಳ್ಳಲಿದೆ ಎಂದು ಹೇಳಿದರು.
ಇನ್ನೊಂದೆಡೆ ಎನ್‌ಸಿಪಿ ನೇತಾರ ಸಂಗ್ಮಾ ಮತ್ತು ಮಾಜಿ ರಾಜ್ಯಸಭಾ ಉಪ ಸಭಾಪತಿ ನಜ್ಮಾ ಹೆಫ್ತುಲ್ಲ ಶೀಘ್ರದಲ್ಲೇ ಬಿಜೆಪಿ ಸೇರಲು ಸಿದ್ಧತೆ ನಡೆಸಿದ್ದಾರೆ. ಈ ಇಬ್ಬರೂ ನೇತಾರರು ಕಾಂಗ್ರೆಸ್ ವಿರುದ್ಧ ತಿರುಗಿ ಬಿದ್ದಿದ್ದು , ಈಗ ಅವರಿಗುಳಿದ ಆಯ್ಕೆ ಎಂದರೆ ಬಿಜೆಪಿ ಒಂದೇ ಎನ್ನಲಾಗಿದೆ.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications