ಬರಗಾಲ ಎಚ್ಚರ ! ಹಬ್ಬ ಗಳು ಸರಳವಾಗಿರಲಿ -ವಿರಕ್ತ ಮಠಾಧೀಶ

ಬರಗಾಲ ಎಚ್ಚರ ! ಹಬ್ಬ ಗಳು ಸರಳವಾಗಿರಲಿ -ವಿರಕ್ತ ಮಠಾಧೀಶ
ಜನ ಜಾಗೃತಿ ಮೂಡಿಸುವ ಕೆಲಸದಲ್ಲಿ ತೊಡಗಲು ಧರ್ಮಗುರುಗಳಿಗೆ ಕರೆ

ದಾವಣಗೆರೆ : ರಾಜ್ಯದಲ್ಲಿ ತಾಂಡವವಾಡುತ್ತಿರುವ ಬರಗಾಲದ ಹಿನ್ನೆಲೆಯಲ್ಲಿ ಹಬ್ಬ ಹರಿದಿನಗಳನ್ನು ಜನತೆ ಸರಳವಾಗಿ ಆಚರಿಸಬೇಕೆಂದು ವಿರಕ್ತ ಮಠದ ಶ್ರೀ ಜಯ ಮೃತ್ಯುಂಜಯ ಸ್ವಾಮೀಜಿ ಕರೆ ನೀಡಿದ್ದಾರೆ.

ಮಾರ್ಚ್‌ 1ರಿಂದ ದಾವಣಗೆರೆ ಜಿಲ್ಲೆಯಲ್ಲಿ ನಡೆಯುವ ದುಗ್ಗಮ್ಮ ದೇವಿ ಜಾತ್ರೆಯ ಹಿನ್ನೆಲೆಯಲ್ಲಿ ವಿರಕ್ತ ಮಠದ ಸ್ವಾಮೀಜಿ ಈ ಕರೆ ನೀಡಿದ್ದಾರೆ. ಜಾತ್ರಾ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ಸ್ವಾಮೀಜಿ- ಹಬ್ಬ ಹರಿದಿನಗಳ ಹೆಸರಿನಲ್ಲಿ ದುಂದು ಮಾಡುವ ಸಂದರ್ಭ ಇದಲ್ಲ . ರಾಜ್ಯದಲ್ಲಿ ಭೀಕರ ಬರಗಾಲವಿರುವುದರಿಂದ ಉತ್ಸವ ಆಚರಣೆಗಳನ್ನು ಸರಳವಾಗಿ ಆಚರಿಸಬೇಕು ಎಂದರು.

ದೇವಿಯ ಹೆಸರಿನಲ್ಲಿ ಬಲಿ ನೀಡುವುದು ಹಾಗೂ ಇನ್ನಿತರ ಮೂಢನಂಬಿಕೆಗಳಿಂದ ಜನರು ಹೊರಬರಬೇಕು. ಹಬ್ಬ ಹರಿದಿನಗಳನ್ನು ಸರಳವಾಗಿ ಆಚರಿಸುವ ಮೂಲಕ ಮಿಗುವ ಹಣವನ್ನು ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ಖರ್ಚು ಮಾಡಬೇಕು ಎಂದು ಸ್ವಾಮೀಜಿ ಹೇಳಿದರು.

ಹಬ್ಬ ಹರಿದಿನಗಳನ್ನು ಸರಳವಾಗಿ ಆಚರಿಸುವ ಕುರಿತು ಜನ ಜಾಗೃತಿ ಮೂಡಿಸುವ ಕೆಲಸದಲ್ಲಿ ವಿವಿಧ ಸಮುದಾಯದ ಧರ್ಮಗುರುಗಳು ತೊಡಗಬೇಕು ಎಂದೂ ವಿರಕ್ತ ಮಠಾಧೀಶ ಜಯ ಮೃತ್ಯುಂಜಯ ಶ್ರೀಗಳು ಅಭಿಪ್ರಾಯಪಟ್ಟರು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+