ದಳಕ್ಕೆ ತರ್ಪಣ, ‘ಪ್ರಗತಿಪರ’ ರಮೇಶ್ ಕುಮಾರ್ ಕೃಷ್ಣಾರ್ಪಣ
ದಳಕ್ಕೆ ತರ್ಪಣ, ‘ಪ್ರಗತಿಪರ’ ರಮೇಶ್ ಕುಮಾರ್ ಕೃಷ್ಣಾರ್ಪಣ
ಚುನಾವಣೆ ನಂತರ ಕಾಂಗ್ರೆಸ್ ಇನ್ನಷ್ಟು ಬಲಿಷ್ಠ -ಮುಖ್ಯಮಂತ್ರಿ ಕೃಷ್ಣ ವಿಶ್ವಾಸ
ಪ್ರಗತಿಪರ ಜನತಾದಳದ ಇಬ್ಬರು ನಾಯಕರನ್ನು ಪಕ್ಷಕ್ಕೆ ಬರಮಾಡಿಕೊಂಡ ಮುಖ್ಯಮಂತ್ರಿ ಎಸ್ಸೆಂ.ಕೃಷ್ಣ - ಕಳೆದ ಚುನಾವಣೆಗಿಂತ ಹೆಚ್ಚಿನ ಸೀಟುಗಳನ್ನು ಕಾಂಗ್ರೆಸ್ ಈ ಬಾರಿ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಆದರೆ ಒಟ್ಟು ಗೆಲ್ಲುವ ಸಂಖ್ಯೆ ಹೇಳಲು ಮುಖ್ಯಮಂತ್ರಿ ನಿರಾಕರಿಸಿದರು.
ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗೈ ಸ್ಪಷ್ಟ ಬಹುಮತ ಪಡೆಯಲಿದೆ. ಆ ಮೂಲಕ ಅಧಿಕಾರಕ್ಕೆ ಮರಳಲಿದೆ ಎಂದು ಕೃಷ್ಣ ಹೇಳಿದರು.
ಸ್ವಲ್ಪ ದಿನಗಳ ಹಿಂದಷ್ಟೇ 11 ಎಪಿಜೆಡಿ ನಾಯಕರು ದೆಹಲಿಯಲ್ಲಿ ಕಾಂಗೈ ಸೇರಿದ್ದರು. ಆ ಸಂದರ್ಭದಲ್ಲಿ ರಮೇಶ್‌ಕುಮಾರ್ ಕಾಂಗ್ರೆಸ್ ಸೇರಬೇಕಿತ್ತು . ಆದರೆ ತಮ್ಮ ಅಭಿಮಾನಿಗಳ ವಿರೋಧ ಹಾಗೂ ಶ್ರೀನಿವಾಸಪುರ ಕಾಂಗ್ರೆಸ್ ಶಾಸಕರ ಪ್ರಬಲ ವಿರೋಧದಿಂದಾಗಿ ರಮೇಶ್‌ಕುಮಾರ್ ಕಾಂಗ್ರೆಸ್ ಸೇರ್ಪಡೆ ಸಾಧ್ಯವಾಗಿರಲಿಲ್ಲ .
(ಪಿಟಿಐ)
Post your views
ಮುಖಪುಟ / ಕೃಷ್ಣಗಾರುಡಿ












Click it and Unblock the Notifications