ರಾಜಕೀಯವಾಗಿ ಮುಗಿಸಲು ಕೈ- ಕಮಲ ಸಂಚು : ದೇವೇಗೌಡ
ರಾಜಕೀಯವಾಗಿ ಮುಗಿಸಲು ಕೈ- ಕಮಲ ಸಂಚು : ದೇವೇಗೌಡ
ಕೃಷ್ಣರ ಭ್ರಷ್ಟ ಸರಕಾರ ಕಿತ್ತು ತೆಗೆಯುವುದೇ ಜೀವನದ ಗುರಿಯೆಂದ ಮಾಜಿ ಪ್ರಧಾನಿ
ಮುಖ್ಯಮಂತ್ರಿ ಎಸ್ಸೆಂ. ಕೃಷ್ಣ , ತಮ್ಮ ಸರಕಾರದ ಭ್ರಷ್ಟಾಚಾರ ವಿರುದ್ಧ ಮಾತನಾಡದಂತೆ ಬಲಪ್ರಯೋಗಿಸಿ ನನ್ನನ್ನು ತಡೆಯಲು ಪ್ರಯತ್ನಿಸುತ್ತಿದ್ದಾರೆ. ಆದರೆ ಅವರಿಂದ ನನ್ನನ್ನು ಮೂಕಪಶು ಮಾಡಲು ಸಾಧ್ಯವಿಲ್ಲ ಎಂದು ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಪ್ರಧಾನಿ ದೇವೇಗೌಡ ಹೇಳಿದರು.
ಸಾರ್ವಜನಿಕ ಹಿತಾಸಕ್ತಿಗೆ ಧಕ್ಕೆ, ಭ್ರಷ್ಟಾಚಾರ ಮತ್ತಿತರ ಕುರಿತಾದ 9 ಕೇಸುಗಳಲ್ಲಿ ಇತ್ತೀಚೆಗೆ ನಾನು ದೋಷಮುಕ್ತ ಎಂದು ಸಾಬೀತಾಗಿದೆ. ಇನ್ನೂ ನನ್ನನ್ನು ರಾಜಕೀಯವಾಗಿ ಅಂತ್ಯ ಮಾಡಲು ಅವರು ಹವಣಿಸುತ್ತಿದ್ದಾರೆ ಎಂದು ದೇವೇಗೌಡರು- ಜೆಡಿಎಸ್ ಅಧಿಕಾರಕ್ಕೆ ಬಂದರೆ ಕಾಂಗೈ ನಡೆಸಿದ ಭ್ರಷ್ಟಾಚಾರದ ವಿಚಾರಣೆ ನಡೆಸಲು ವಿಶೇಷ ನ್ಯಾಯಾಲಯ ಸ್ಥಾಪಿಸಲಾಗುವುದು ಎಂದು ಪುನರುಚ್ಛರಿಸಿದರು.
ನನ್ನನ್ನು ಬಲಿಪಶು ಮಾಡಲು ಅವರಿಗೆ ಸಾಧ್ಯವಿಲ್ಲ. ಅತ್ಯಂತ ಭ್ರಷ್ಟವಾದ ಕೃಷ್ಣ ಸರಕಾರದ ವಿದುದ್ಧ ಹೋರಾಡಿ ಆ ಸರ್ಕಾರವನ್ನು ಕಿತ್ತೊಗೆಯುವುದೇ ನನ್ನ ಜೀವನದ ಗುರಿ ಎಂದು ಗೌಡ ನುಡಿದರು.
ಬಡ ರೈತರಿಗೆ ಸಹಾಯ ಆಗುವಂತೆ ಬೆಂಗಳೂರು-ಮೈಸೂರು ಚರ್ತುಭುಜ ರಸ್ತೆಯ ಭೂಕಬಳಿಕೆ ಪ್ರಕರಣವನ್ನು ನಾನು ಹೊರಹಾಕಿದೆ. ಅವರು ನನ್ನ ಬಾಯಿ ಮುಚ್ಚಿಸಲು ಪ್ರಯತ್ನಿಸುತ್ತಿದ್ದಾರೆ ಎಂದ ದೇವೇಗೌಡರು, ಕೆಪಿಸಿಸಿ ಅಧ್ಯಕ್ಷ ಜನಾರ್ಧನ ಪೂಜಾರಿ ತಮ್ಮ ವಿರುದ್ಧ ಭ್ರಷ್ಟಾಚಾರದ ಆರೋಪ ಹೊರಿಸಿರುವ ಕುರಿತು ಪ್ರತಿಕ್ರಿಯಿಸಿ- ನಾನು ನನ್ನ ಎಲ್ಲಾ ದಾಖಲೆಗಳನ್ನು ಮಕ್ತ ವಾಗಿ ಸ್ವಯಂ ಆಸ್ತಿ ಘೋಷಣೆ ಅಡಿಯಲ್ಲಿ ತೆರಿಗೆ ಇಲಾಖೆಗೆ ಸಲ್ಲಿಸಿದ್ದೇನೆ. ಒಂದು ರೂಪಾಯಿ ಎಲ್ಲಿಯಾದರು ಬಾಕಿ ಇದ್ದರೆ ಅವರು ನನ್ನ ಜೈಲಿಗೆ ಕಳುಹಿಸಲಿ ಅಥವಾ ಮರಣದಂಡನೆ ವಿಧಿಸಲಿ ಎಂದರು.
ಭಾರತ ಪ್ರಕಾಶಿಸುತ್ತಿದೆ ಎನ್ನುವ ಎನ್‌ಡಿಎ ಸರ್ಕಾರದ ಹೇಳಿಕೆಯನ್ನು ಟೀಕಿಸಿದ ದೇವೇಗೌಡರು, ದೇಶದಲ್ಲಿ 65 ಕೋಟಿಗೂ ಹೆಚ್ಚು ಮಂದಿ ಬಡತನದಿಂದ ನರಳುತ್ತಿದ್ದಾರೆ ಎಂದು ಹೇಳಿದರು.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications