ಬರ : ಕೊಳವೆ ಬಾವಿ ದುರಸ್ಥಿ, ಕಾಳು ಪೂರೈಸಲು ಸರ್ಕಾರದ ಒತ್ತು
ಬರ : ಕೊಳವೆ ಬಾವಿ ದುರಸ್ಥಿ, ಕಾಳು ಪೂರೈಸಲು ಸರ್ಕಾರದ ಒತ್ತು
162 ತಾಲ್ಲೂಕು ಬರ ಪರಿಸ್ಥಿತಿ ನಿಭಾವಣೆಗೆ 132 ಕೋಟಿ ರು.
ಬತ್ತಿರುವ ಕೊಳವೆ ಬಾವಿಗಳ ಪುನರುಜ್ಜೀವನ, ಆಹಾರ ಧಾನ್ಯಗಳ ಸರಬರಾಜು ಹಾಗೂ ಉದ್ಯೋಗಾವಕಾಶಗಳ ಸೃಷ್ಟಿಗಾಗಿ ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವ ಬರ ಪರಿಹಾರ ಹಣ ಬಳಕೆಯಾಗಲಿದೆ. ಫೆ.24ರ ಮಂಗಳವಾರ ನಡೆದ ಉಸ್ತುವಾರಿ ಸಂಪುಟ ಸಭೆ ಈ ಮಹತ್ವದ ನಿರ್ಣಯ ಕೈಗೊಂಡಿತು.
ಬತ್ತಿರುವ ಕೊಳವೆ ಬಾವಿಗಳನ್ನು ಪುನರುಜ್ಜೀವನಗೊಳಿಸುವ ಕಾರ್ಯಕ್ಕೆ ಸರ್ಕಾರ ಹೆಚ್ಚಿನ ಒತ್ತು ನೀಡುವುದು. ಕೊಳವೆ ಬಾವಿಗಳ ದುರಸ್ಥಿಗಾಗಿ ಪ್ರತಿ ತಾಲ್ಲೂಕಿಗೆ 10 ಲಕ್ಷ ರುಪಾಯಿ ನೀಡಲಾಗುವುದು. ಈ ಕುರಿತು ಜಿಲ್ಲಾ ಪಂಚಾಯತ್ ಕಾರ್ಯ ನಿರ್ವಾಹಕ ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳು ಸಾಂಘಿಕ ಪ್ರಯತ್ನಗಳನ್ನು ನಡೆಸುವರು ಎಂದು ಸಂಪುಟ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications